ವಿಟ್ಲ: ಖಾಸಗಿ ಪದವಿಪೂರ್ವ ಕಾಲೇಜಿನ ಹಿಂದು ಸಮುದಾಯದ ವಿದ್ಯಾರ್ಥಿನಿಗೆ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿ ನೀಡಿದ ಪ್ರೇಮ ಪತ್ರ (Love letter issue) ವಿಚಾರದಲ್ಲಿ ವಿವಾದ ಉಂಟಾಗಿದೆ. ಇದಕ್ಕೆ ಸಂಬಂಧಿಸಿ ೧೮ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆ ವರೆಗೆ ಕಾಲೇಜು ಪ್ರಾಂಶುಪಾಲರು ಅಮಾನತು ಮಾಡಿದ್ದಾರೆ.
ಪೋಷಕರ ಸಮ್ಮುಖದಲ್ಲಿ ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ನಡುವೆ ಮಾತುಕತೆ ನಡೆದು ಮುನ್ನೆಚ್ಚರಿಕೆ ದೃಷ್ಟಿಯಿಂದ ಸುಮಾರು ೧೮ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಲಾಗಿದೆ.
ಹಿಂದು ಸಮುದಾಯದ ವಿದ್ಯಾರ್ಥಿನಿ ಹಾಗೂ ಮುಸ್ಲಿಮ್ ವಿದ್ಯಾರ್ಥಿ ನಡುವೆ ಪ್ರೇಮ ಕಳೆದ ಕೆಲವು ಸಮಯದಿಂದ ಪ್ರೇಮ ಪ್ರಕರಣ ನಡೆಯುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳ ಮಧ್ಯೆ ಗುಸುಗುಸು ಹಬ್ಬುತ್ತಿದ್ದಂತೆಯೇ ಕಾಲೇಜು ಆಡಳಿತ ವರ್ಗ ಪೊಷಕರನ್ನು ಕರೆಸಿ ವಿಷಯವನ್ನು ತಿಳಿಸಿತ್ತು. ಈ ಬಳಿಕ ಕೆಲವು ಸಮಯ ಯಾವುದೇ ಗೊಂದಲ ಇರಲಿಲ್ಲ.
ಈ ನಡುವೆ, ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮತ್ತೆ ಪ್ರೇಮ ಪ್ರಕರಣ ವಿಚಾರದಲ್ಲಿ ಚರ್ಚೆಗಳು ಆರಂಭವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಉಪನ್ಯಾಸಕರ ತಂಡ ತರಗತಿಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವ ಬಗ್ಗೆ ತಪಾಸಣೆಗೆ ಮುಂದಾಗಿದ್ದಾರೆ. ಈ ಸಂದರ್ಭ ಹಿಂದು ಸಮುದಾಯದ ವಿದ್ಯಾರ್ಥಿನಿಯ ಬ್ಯಾಗ್‌ನಲ್ಲಿ ಪ್ರೇಮ ಪತ್ರ ಪತ್ತೆಯಾಗಿತ್ತು. ಆ ದಿನ ಪತ್ರ ನೀಡಿದ ವಿದ್ಯಾರ್ಥಿ ಕಾಲೇಜಿಗೆ ಬಂದಿರಲಿಲ್ಲ. ಈ ಕಾರಣದಿಂದ ಯುವತಿಯ ಪೊಷಕರನ್ನು ಕರೆಯಿಸಿ ಮಾತುಕತೆ ನಡೆಸಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಯುವತಿಯನ್ನು ಪರೀಕ್ಷೆಗೆ ಮಾತ್ರ ಆಗಮಿಸುವಂತೆ ಸೂಚನೆ ನೀಡಿದ್ದರು.
ಬಳಿಕ ಯುವಕ ತರಗತಿಗೆ ಹಾಜರಾಗುತ್ತಿದ್ದಂತೆ ಹಿಂದೂ ಪರ ಸಂಘಟನೆಯ ವಿದ್ಯಾರ್ಥಿಗಳು ಹೋಗಿ ಪತ್ರ ನೀಡಿದ ಯುವಕನನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಇದು ವಿಕೋಪಕ್ಕೆ ಹೋಗಬಹುದು ಅನ್ನೋ ಕಾರಣದಿಂದ
ಮುಸ್ಲಿಂ ಯುವಕ ಹಾಗೂ ಆತನಿಗೆ ಸಹಕಾರ ಮಾಡಿದ ಆರು ಮಂದಿ ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಹಾಗೂ ಪ್ರಶ್ನಿಸಲು ಹೋದ ಹಿಂದು ವಿದ್ಯಾರ್ಥಿಗಳನ್ನು ಪೋಷಕರ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ | Moral policing | ತಡರಾತ್ರಿ ಸುತ್ತಾಡುತ್ತಿದ್ದ ಹಿಂದು-ಮುಸ್ಲಿಂ ಜೋಡಿಗಳಿಗೆ ಬಜರಂಗ ದಳ ಕಾರ್ಯಕರ್ತರಿಂದ ಹಲ್ಲೆ