Site icon Vistara News

Love story : ಪ್ರೇಮಿಸಿ, ಕಾಮಿಸಿ ವಂಚಿಸಿದವನ ಮೇಲೆ ರೇಪ್‌ ಕೇಸ್‌ ಜಡಿದ ಯುವತಿ, ಯುವಕ ಎಸ್ಕೇಪ್‌

Raichur love story

ರಾಯಚೂರು: ಒಂದೂವರೆ ವರ್ಷದಿಂದ ಪ್ರೀತಿಸಿ ಮದುವೆ ಆಗುತ್ತೇನೆ ಎಂದು ನಂಬಿಸಿ, ದೈಹಿಕ ಸಂಪರ್ಕವನ್ನೂ ಮಾಡಿದ (Love, sex and Dokha) ಪ್ರಿಯಕರನ ವಿರುದ್ಧ ಯುವತಿಯೊಬ್ಬಳು ಪೋಲಿಸ್ ಠಾಣೆ ಮೆಟ್ಟಿಲು (Woman files complaint against lover) ಏರಿದ್ದಾಳೆ. ರಾಯಚೂರು ಜಿಲ್ಲೆಯ (Raichur News) ಕವಿತಾಳ ಪಟ್ಟಣದ ಅಪ್ಪನ ದೊಡ್ಡಿ ಎಂಬ ಪುಟ್ಟ ಗ್ರಾಮದ ಲವ್ ಸ್ಟೋರಿ (Love story) ಒಂದು ಪೊಲೀಸ್‌ ಠಾಣೆ ವರೆಗೂ ಬಂದಿದೆ. ಒಂದೂವರೆ ವರ್ಷದಿಂದ ಪ್ರೀತಿ ಪ್ರಣಯದಲ್ಲಿ ತೇಲಾಡಿದ ಜೋಡಿ ಹಕ್ಕಿ ಬಾಳಲ್ಲಿ ಸದ್ಯ ಬಿರುಗಾಳಿ ಎದ್ದಿದೆ.

ಅಕ್ಕಪಕ್ಕದ ಮನೆಯವರೆ ಆಗಿದ್ದ ಮಲ್ಲೇಶ್ ಮತ್ತು ಮೋನಮ್ಮ ನಡುವೆ ಸ್ನೇಹ ಚಿಗುರಿತ್ತು. ಮಲ್ಲೇಶ್ ಟ್ರ್ಯಾಕ್ಟರ್ ಡ್ರೈವರ್ ಆಗಿದ್ದರೆ ಮೋನಮ್ಮ ಶಾಲೆ ಬಿಟ್ಟು ಕೂಲಿ ಮಾಡುತ್ತಿದ್ದಳು. ಹೀಗೆ ಪಕ್ಕದ್ಮನೆ ಹುಡುಗನ ಸೆಳೆತಕ್ಕೆ ಸಿಲುಕಿ ಮೋನಮ್ಮ ಒಂದೂವರೆ ವರ್ಷದಿಂದ ಮಲ್ಲೇಶ್‌ನನ್ನು ಪ್ರೀತಿ ಮಾಡುತ್ತಿದ್ದಳು.

ಇಬ್ಬರ ಪ್ರೇಮ ಕಥೆ ಒಂದು ವರ್ಷದಿಂದ ಕಾಮಕ್ಕೆ ತಿರುಗಿತ್ತು. ಮನೆ ಮತ್ತು ಹೊಲಗಳಲ್ಲಿ ಮೈಮರೆತು ಸಂಭ್ರಮಿಸಿದ ಬಳಿಕ ಎಚ್ಚರವಾಗಿ ಮುಂದೇನು ಎಂಬ ಪ್ರಶ್ನೆ ಬಂದಿದೆ. ಆಗ ಮಲ್ಲೇಶ್ ಕೂಡಾ ಮದುವೆ ಆಗುತ್ತೇನೆ ಎಂದು ನಂಬಿಸಿದ್ದ. ಆದರೆ ಕೆಲವು ತಿಂಗಳುಗಳಿಂದ ಮದುವೆ ಆಗುವ ವಿಚಾರದಲ್ಲಿ ಮಲ್ಲೇಶ್ ಕ್ಯಾತೆ ತೆಗೆದಿದ್ದಾನೆ.

ಇದರಿಂದ ಮನನೊಂದ ಮೋನಮ್ಮ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾಳೆ. ಈ ಮೂಲಕ ಮಲ್ಲೇಶ್ ಮತ್ತು ಮೋನಮ್ಮ ಪ್ರೀತಿ ಊರವರ ಮುಂದೆಯೂ ತೆರೆದುಕೊಂಡಿದೆ.

ಅಕ್ಕಪಕ್ಕದ ಮನೆಯವರು ಆಗಿರುವ ಕಾರಣಕ್ಕೆ ಕುಟುಂಬಸ್ಥರ ರಾಜಿ ಪಂಚಾಯಿತಿಗೆ ಮುಂದಾಗಿದ್ದಾರೆ. ಆದರೆ ಮಲ್ಲೇಶ್‌ ಮಾತ್ರ ಈ ಯಾವುದಕ್ಕೂ ಬಗ್ಗುತ್ತಿಲ್ಲ. ಕೊನೆಗೆ ಯುವತಿ ಮೋನಮ್ಮ ಪ್ರಿಯಕರನ ವಿರುದ್ಧ ಕಾನೂನು ಅಸ್ತ್ರ ‌ಪ್ರಯೋಗ ಮಾಡಿದ್ದಾಳೆ.

ಮದುವೆ ಆಗ್ತೀನಿ ಎಂದು ನಂಬಿಸಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಕವಿತಾಳ ‌ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಜೀವನದಲ್ಲಿ ಮದುವೆ ಆದರೆ ಮಲ್ಲೇಶನನ್ನೇ ಎಂದು ಪಟ್ಟು ಹಿಡಿದ್ದಾಳೆ. ಪ್ರಕರಣ ದಾಖಲು ಆಗುತ್ತಿದ್ದಂತೆಯೇ ಮಲ್ಲೇಶ್ ಎಸ್ಕೇಪ್ ಆಗಿದ್ದಾನೆ. ಈ ನಡುವೆ ಮಲ್ಲೇಶ್ ಕೂಡ ಅಕ್ಕನ ಮಗಳನ್ನು ಮದುವೆ ಕೂಡ ಆಗಿದ್ದಾನೆ ಎನ್ನಲಾಗಿದೆ. ಸದ್ಯ ಕವಿತಾಳ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ;

Exit mobile version