ಕೊಪ್ಪಳ: ಅವರಿಬ್ಬರೂ ಇನ್ನೂ ೨೦ ವರ್ಷ ಮತ್ತು ೧೭ ವರ್ಷದವರು. ಕಳೆದ ತಿಂಗಳಿನಿಂದ ಅವರು ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಮನೆಯಲ್ಲಿ ಆಕ್ಷೇಪ ಕೇಳಿಬಂದಿದ್ದೇ ತಡ ಅವರು ಅತಿರೇಕದ ನಿರ್ಧಾರಕ್ಕೆ ಬಂದಿದ್ದಾರೆ. ಇಬ್ಬರೂ ಕತ್ತು ಕೊಯ್ದುಕೊಂಡು (Lovers suicide) ಅತ್ಯಂತ ಭಯಾನಕವಾಗಿ ಸಾವು ತಂದುಕೊಂಡಿದ್ದಾರೆ.
ಘಟನೆ ನಡೆದಿರುವುದು ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ. ಪ್ರಕಾಶ್ (20), ಸುಮಾ (17) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ಪ್ರಕಾಶ್ ವೃತ್ತಿಯಲ್ಲಿ ಫೋಟೊಗ್ರಾಫರ್ ಆಗಿದ್ದು ಬದುಕಿನ ದಾರಿ ಕಂಡುಕೊಳ್ಳುತ್ತಿದ್ದ. ಸುಮಾ ಕಾಲೇಜಿಗೆ ಹೋಗುತ್ತಿದ್ದಳು. ಒಂದೇ ಊರಿನವರು. ಕೆಲವು ತಿಂಗಳ ಹಿಂದಷ್ಟೇ ಪರಿಚಯವಾಗಿ ಪ್ರೀತಿ ಬೆಳೆದಿತ್ತು. ಆದರೆ, ಇಷ್ಟು ಸಣ್ಣ ವಯಸ್ಸಲ್ಲಿ ಪ್ರೀತಿ-ಪ್ರೇಮ ಅಂತ ಸಮಯ ಹಾಳು ಮಾಡಿಕೊಳ್ಳಬೇಡಿ ಎಂದು ಸಹಜವಾಗಿ ಹೆತ್ತವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಇದು ಈ ಎಳೆಯರನ್ನು ತೀವ್ರ ನೋವಿಗೆ ತಳ್ಳಿದೆ.
ಶನಿವಾರ ಅವರಿಬ್ಬರೂ ಹುಡುಗಿಯ ಮನೆಗೆ ಬಂದು ಅಲ್ಲಿ ಕತ್ತು ಕೊಯ್ದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Suicide news | ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ ಮಗ ಆತ್ಮಹತ್ಯೆ