Site icon Vistara News

Lovers Suicide: ಪ್ರಿಯಕರನ ಬಿಟ್ಟಿರಲಾಗದೆ ಆತನ ಜತೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

lovers suicide in shahapura

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ವಿಷ ಸೇವಿಸಿ ಪ್ರೇಮಿಗಳಿಬ್ಬರೂ (Lovers Suicide) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ೨ ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆಯು ತನ್ನ ಪ್ರಿಯಕರನನ್ನು ಬಿಟ್ಟಿರಲು ಆಗದೆ ಹೀಗೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಸುವರ್ಣ (20), ಈಶಪ್ಪ (22) ಮೃತ ಪ್ರೇಮಿಗಳು. ಶನಿವಾರ (ಫೆ.೧೮) ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಶಹಾಪುರದ ಉರುಸಗುಂಡಗಿ ಗ್ರಾಮದವರಾಗಿದ್ದಾರೆ. ಐದಾರು ವರ್ಷದಿಂದ ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ.

2 ವರ್ಷದ ಹಿಂದೆ ಸುವರ್ಣಳನ್ನು ವಿವಾಹ ಮಾಡಿಕೊಡಲಾಗಿತ್ತು. ಈಕೆ ತನ್ನ ಗಂಡನ ಜತೆಯಲ್ಲಿ ಬೆಂಗಳೂರಿನಲ್ಲಿ ವಾಸವಿದ್ದಳು. ಅಲ್ಲಿ ಗಂಡನ ಜತೆಗೆ ಸರಿಯಾಗಿಯೇ ಸಂಸಾರ ಮಾಡಿಕೊಂಡಿದ್ದಳು ಎನ್ನಲಾಗಿದೆ. ಆದರೆ, ಗಂಡನಿಗೆ ಹೇಳದೇ ಬೆಂಗಳೂರಿನಿಂದ ಉರುಸಗುಂಡಗಿ ಗ್ರಾಮಕ್ಕೆ ಬಂದಿದ್ದಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Maha Shivaratri 2023: ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ಕಣ್ಣು ಹಾಯಿಸಿದಷ್ಟು ಜನವೋ ಜನ; ಮಹಾಬಲೇಶ್ವರನ ಕಣ್ತುಂಬಿಕೊಂಡ ಭಕ್ತರು

ಇಲ್ಲಿ ಬಂದವಳೇ ಪ್ರಿಯತಮ ಈಶಪ್ಪನ ಜತೆ ಶುಕ್ರವಾರ ರಾತ್ರಿ ಕಳೆದಿದ್ದಾಳೆ. ಬಳಿಕ ಬೆಳಗ್ಗೆ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಭೀಮರಾಯನ ಗುಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version