ಮದ್ದೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹುಟ್ಟೂರು ಇರುವ ಮದ್ದೂರು (Maddur Election Results) ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕೆ. ಎಂ ಉದಯ್ (86325) ಅವರು 24098 ಅಂತರಗಳಿಂದ ಜೆಡಿಎಸ್‌ನ ಡಿಸಿ ತಮ್ಮಣ್ಣ(62227) ವಿರುದ್ದ ಗೆಲುವು ಸಾಧಿಸಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ನ ಡಿ ಸಿ ತಮ್ಣಣ್ಣ ಅವರು 1,09,239 ಮತ ಪಡೆದಿದ್ದರೆ, ಕಾಂಗ್ರೆಸ್‌ನ ಮಧು ಜಿ ಮಾದೇಗೌಡ ಅವರು 55,209 ಮತ ಪಡೆದಿದ್ದರು. ಗೆಲುವಿನ ಅಂತರ 54,209 ಆಗಿತ್ತು.
ಮದ್ದೂರಿನಲ್ಲಿ 2,20,000 ಮತದಾರರಿದ್ದು, ಇವರಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಒಕ್ಕಲಿಗರೇ ಆಗಿದ್ದಾರೆ. ಇನ್ನು ಪರಿಶಿಷ್ಟ ಜಾತಿಯ 36,000 ಮತಗಳು, 12,000 ಮುಸ್ಲಿಂ ಮತಗಳು, 12,000 ಕುರುಬ ಸಮುದಾಯದ ಮತಗಳು ಮತ್ತು 10,000 ಲಿಂಗಾಯತ ಸಮುದಾಯದ ಮತದಾರರಿದ್ದಾರೆ. ಇದುವರೆಗೆ ಮದ್ದೂರಿನಿಂದ ಗೆದ್ದ ಎಲ್ಲ ಅಭ್ಯರ್ಥಿಗಳು ಒಕ್ಕಲಿಗರೇ ಆಗಿದ್ದಾರೆ.
ಇದನ್ನೂ ಓದಿ: Karnataka Election: 73.19% ಮತದಾನ; ರಾಜ್ಯದ ಚುನಾವಣಾ ಇತಿಹಾಸದಲ್ಲೇ ಇದು ಮಹಾ ದಾಖಲೆ
ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್.ಎಂ. ಕೃಷ್ಣ ಅವರ ಸಹೋದರನ ಪುತ್ರ ಗುರುಚರಣ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಮತ್ತೊಂದೆಡೆ, ಜೆಡಿಎಸ್‌ಗೆ ಸೆಡ್ಡು ಹೊಡೆದಿರುವ ಮದ್ದೂರು ಸ್ವಾಮಿ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡು ಬಂದಿತ್ತು.