Site icon Vistara News

ಮುರುಘಾಶ್ರೀ ಪ್ರಕರಣ | ಮಾದಿಗ ಯುವಸೇನೆ ರಾಜ್ಯಾಧ್ಯಕ್ಷ ಗಂಗಾಧರಯ್ಯ ಮೇಲೆ ಹಲ್ಲೆ; ಬಸವರಾಜನ್ ಬೆಂಬಲಿಗರ ಕೃತ್ಯ?

ಮುರಘಾ ಮಠ

ಚಿತ್ರದುರ್ಗ: ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ಗಂಗಾಧರಯ್ಯ ಎಂಬುವವರ ಮೇಲೆ ಚಿತ್ರದುರ್ಗದ ಬಸ್ ನಿಲ್ದಾಣದ ಬಳಿ ಸೋಮವಾರ (ಅ.31) ಐವರು ಅಪರಿಚಿತರಿಂದ ಹಲ್ಲೆ ನಡೆದಿದ್ದು, ತಲೆಗೆ ಭಾರಿ ಪೆಟ್ಟಾಗಿದೆ.

ಮುರುಘಾ ಮಠದ ಶರಣರ ವಿರುದ್ಧ ಕೇಳಿ ಬಂದ ಮೊದಲ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ಸಂತ್ರಸ್ತ ಬಾಲಕಿಯರಿಬ್ಬರು ಒಂದು ತಿಂಗಳ ಕಾಲ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರ ಮನೆಯಲ್ಲಿ ತಂಗಿದ್ದರು ಎಂದು ಹೇಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಸಂತ್ರಸ್ತ ಮಕ್ಕಳಿಗೆ ನ್ಯಾಯ, ಪರಿಹಾರ ಕೊಡಿಸಿ ಎಂದು ಗಂಗಾಧರಯ್ಯ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ್ದರು.

ಬಸವರಾಜನ್ ಹಾಗೂ ಸೌಭಾಗ್ಯ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ಗಂಗಾಧರಯ್ಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಸ್‌ ನಿಲ್ದಾಣದಲ್ಲಿ ನಿಂತಿದ್ದಾಗ ಏಕಾಏಕಿ ಬಂದ ಐವರು ʻಬಸವರಾಜನ್, ಸೌಭಾಗ್ಯ ವಿರುದ್ಧ ಮಾತನಾಡುತ್ತೀಯಾʼ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ಬಳಿಕ ಜಾತಿನಿಂದನೆ ಮಾಡಿ ಮಾರಕಾಸ್ತ್ರದಿಂದ ಮಾರಾಣಾಂತಿಕ ಹಲ್ಲೆ ನಡೆಸಿ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸದ್ಯ, ಹಲ್ಲೆಗೊಳಗಾದ ಗಂಗಾಧರಯ್ಯ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು,‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರದುರ್ಗ ಕೋಟೆ ಠಾಣೆ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | ಎರಡನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳ ಪೊಲೀಸ್‌ ಕಸ್ಟಡಿಗೆ ಮನವಿ

Exit mobile version