Site icon Vistara News

Madikeri Election Results : ಮಡಿಕೇರಿಯಲ್ಲಿ ಕಾಂಗ್ರೆಸ್ ಅಲೆ; ಮಂಥರ್​ ಗೌಡಗೆ ಗೆಲುವು

Madikeri Election Results Manthar Gowda Winner

#image_title

ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದ ಮಂಥರ್ ಗೌಡ ಜಯ ಸಾಧಿಸಿದ್ದಾರೆ. 84879 ಮತಗಳನ್ನು ಪಡೆದಿರುವ ಅವರು ಮಾಜಿ ಶಾಸಕ ಅಪ್ಪಚ್ಚು ರಂಜನ್​ (80477) ವಿರುದ್ದ ಜಯ 4402 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್‌ ಅವರು 70,631 ಮತ ಪಡೆದು, ಜೆಡಿಎಸ್‌ನ ಜೀವಿಜಯ ಅವರನ್ನು 16,015 ಮತಗಳಿಂದ ಸೋಲಿಸಿದ್ದರು.

1956ರಲ್ಲಿ ಮೊದಲ ಚುನಾವಣೆ ಸಂದರ್ಭದಲ್ಲಿ ಎರಡು ಮತ ಕ್ಷೇತ್ರಗಳನ್ನು ಹೊಂದಿದ್ದ ಕೊಡಗು ಜಿಲ್ಲೆ ಬಳಿಕ 3 ವಿಧಾನಸಭಾ ಕ್ಷೇತ್ರ ಹೊಂದಿತ್ತು. 2008ರವರೆಗೂ ಜಿಲ್ಲೆಯ ಮೂರು ತಾಲೂಕುಗಳ ಮೂರು ವಿಧಾನಸಭಾ ಕ್ಷೇತ್ರ ಇದ್ದವು. 2008ರಲ್ಲಾದ ಕ್ಷೇತ್ರ ಮರು ವಿಂಗಡನೆ ಬಳಿಕ ಸೋಮವಾರ ಪೇಟೆ ವಿಧಾನಸಭಾ ಕ್ಷೇತ್ರ, ನಂತರ ಮಡಿಕೇರಿ ವಿಧಾನಸಭಾ ಕ್ಷೇತ್ರವಾಗಿ ಬದಲಾಯಿತು.

ಒಕ್ಕಲಿಗ ಮತ್ತು ಲಿಂಗಾಯತ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಕೊಡವ ಸಮುದಾಯದ ಶಾಸಕ ಅಪ್ಪಚ್ಚು ರಂಜನ್, ನಾಲ್ಕು ಬಾರಿ ಶಾಸಕರಾಗಿರುವುದೇ ಇಲ್ಲಿನ ವಿಶೇಷ. ರಾಜ್ಯಕ್ಕೆ 9ನೇ ಮುಖ್ಯಮಂತ್ರಿ ಕೊಟ್ಟ ಹೆಗ್ಗಳಿಕೆ ಮಡಿಕೇರಿ ಕ್ಷೇತ್ರದ್ದು. ಅದುವೇ ಅಂದಿನ ಸೋಮವಾರ ಪೇಟೆ ಕ್ಷೇತ್ರ. ಅತಿ ಚಿಕ್ಕ ವಯಸ್ಸಿನ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದ ದಿವಂಗತ ಆರ್ ಗುಂಡೂರಾವ್ 1983ರಲ್ಲಿ ಈ ಕ್ಷೇತ್ರ ಪ್ರತಿನಿಧಿಸಿ ಮುಖ್ಯಮಂತ್ರಿಗಳಾಗಿದ್ದರು. ಮಾಜಿ ಅರಣ್ಯ ಸಚಿವ ಬಿ ಎ ಜೀವಿಜಯ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರಾಗಿ ಇಲ್ಲಿಂದಲೇ ಆಯ್ಕೆಯಾಗಿದ್ದರು.

ಈ ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯತ, ಕೊಡವರು ಹಾಊ ಅಲ್ಪ ಪ್ರಮಾಣದ ದಲಿತರು ಮತ್ತು ಅಲ್ಪ ಸಂಖ್ಯಾತ ಸಮುದಾಯದ ಮತದಾರರು ಇದ್ದಾರೆ.

Exit mobile version