ಮಡಿಕೇರಿ: ಮಡಿಕೇರಿ ಪೆಟ್ರೋಲ್ ಬಾಂಬ್ ಆಡಿಯೊ ವೈರಲ್ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಾದ ಜೆಡಿಎಸ್ ನಗರಸಭೆ ಸದಸ್ಯ ಮುಸ್ತಾಫ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಬೆಟಗೇರಿ ಅಬ್ದುಲ್ಲಾಗೆ ಜೆಎಂಎಫ್‌ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನಗರದ 50 ಕಡೆಗಳಲ್ಲಿ ಪೆಟ್ರೋಲ್ ಬಾಂಬ್ ಇಟ್ಟು ದೊಡ್ಡ ಮಟ್ಟದಲ್ಲಿ ನರಮೇಧ ನಡೆಸುವ ಪ್ಲಾನ್ ಬಗ್ಗೆ ಆರು ತಿಂಗಳ ಹಿಂದೆ ಮೊಬೈಲ್‌ನಲ್ಲಿ ಚರ್ಚೆ ನಡೆಸಿದ್ದ ಆಡಿಯೊ ವೈರಲ್ ಆಗಿದ್ದರಿಂದ ಇಬ್ಬರು ಆರೋಪಿಗಳನ್ನು ಮಡಿಕೇರಿ ನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದರು. ಆರೋಪಿಗಳ ವಿಚಾರಣೆ ಬಳಿಕ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ, ನ್ಯಾಯಾಲಯ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು, ಸಾಕ್ಷ್ಯಗಳನ್ನು ನಾಶಪಡಿಸುವಂತಿಲ್ಲ. ನ್ಯಾಯಾಲಯಕ್ಕೆ ಹಾಜರಾಗಿ ರೆಗ್ಯುಲರ್ ಜಾಮೀನು ಪಡೆಯಬೇಕು ಎಂದು ಹಲವು ಷರತ್ತುಗಳನ್ನು ವಿಧಿಸಿ ಆರೋಪಿಗಳಿಗೆ ಜಾಮೀನು ನೀಡಿದೆ.
ಇದನ್ನೂ ಓದಿ | Petrol Bomb | ಮಡಿಕೇರಿ ನರಮೇಧ ಪ್ಲ್ಯಾನ್ ಆಡಿಯೊ ಪ್ರಕರಣ: ಇಬ್ಬರ ಬಂಧನ, ಹಿಂದಿನ ಕೈಗಳ ಬಗ್ಗೆ ತೀವ್ರ ವಿಚಾರಣೆ