Site icon Vistara News

Fire Accident: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣದ ಮ್ಯಾಜಿಸ್ಟೀರಿಯಲ್‌ ತನಿಖೆಗೆ ಆದೇಶ

Fire accident in attibele

ಆನೇಕಲ್: ಅತ್ತಿಬೆಲೆ ಪಟಾಕಿ ಅಂಗಡಿ ಅಗ್ನಿ ದುರಂತ ಪ್ರಕರಣದ (Fire Accident) ಮ್ಯಾಜಿಸ್ಟೀರಿಯಲ್ ವಿಚಾರಣೆಗೆ (magisterial enquiry) ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಚಾರಣಾಧಿಕಾರಿಯಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮಲಾನ್ ಆದಿತ್ಯ ಬಿಸ್ವಾಸ್ ಅವರನ್ನು ನೇಮಕ ಮಾಡಲಾಗಿದ್ದು, ಮೂರು ತಿಂಗಳೊಳಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಾವಿಗೆ ಕಾರಣಗಳೇನು. ಸ್ಫೋಟಕ ಕಾಯ್ದೆ-1884ರ ಸೆಕ್ಷನ್ 6ಬಿ ಅನ್ವಯ ತನಿಖೆ ನಡೆಸಿ ಪರವಾನಗಿ ನೀಡಲಾಗಿದೆಯೇ, ದುರಂತ ನಡೆದ ಬಾಲಾಜಿ ಟ್ರೇಡರ್ಸ್‌ನಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿತ್ತೆ, ಈ ಲೋಪಕ್ಕೆ ಕಾರಣವೇನು ಹಾಗೂ ಕಾರಣರಾದವರು ಯಾರು? ಅಗ್ನಿ ಅವಘಡ ಆಕಸ್ಮಿಕವೇ ಅಥವಾ ನಿರ್ಲಕ್ಷ್ಯತೆಯಿಂದ ಉಂಟಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ವಿಚಾರಣಾಧಿಕಾರಿಗೆ ಸೂಚಿಸಲಾಗಿದೆ.

ಏನಿದು ಘಟನೆ?

ಅ. 7ರಂದು ಮಧ್ಯಾಹ್ನ ಬೆಂಗಳೂರು ಜಿಲ್ಲೆ ಅತ್ತಿಬೆಲೆ ಗಡಿಯ ರಾ.ಹೆ.44ರಲ್ಲಿರುವ ಬಾಲಾಜಿ ಟ್ರೇಡರ್ಸ್ ಪಟಾಕಿ ಅಂಗಡಿಯಲ್ಲಿ ನಡೆದಿದ್ದ ಅಗ್ನಿ ಅವಘಡದಲ್ಲಿ 14 ಜನರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಆಸ್ಪತ್ರೆಯಲ್ಲಿ ಮರಣ ಹೊಂದಿದ್ದರು. ಈ ಘಟನೆ ಕುರಿತು ಡಿಜಿ-ಐಜಿಪಿ ಅಲೋಕ್‌ ಮೋಹನ್‌ ಅವರು ವರದಿ ಸಲ್ಲಿಸಿದ್ದರು.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಲೋಕೇಶ್ವರನ್ ಎಂಬುವವರು ಅತ್ತಿಬೆಲೆ ಪೊಲೀಸ್‌ ಠಾಣೆಗೆ ಹಾಜರಾಗಿ ಪ್ರಕರಣ ಸಂಬಂಧ ದೂರು ನೀಡಿದ್ದರು. ನಮ್ಮ ಸಂಬಂಧಿಕರಾದ 10 ಜನರು, ಇತರೆ 9 ಜನರೊಂದಿಗೆ ಅತ್ತಿಬೆಲೆ ಬಾರ್ಡರ್ ಬಳಿ ಇರುವ ಶ್ರೀ ಬಾಲಾಜಿ ಟ್ರೇಡರ್ಸ್ ಪಟಾಕಿ ಮಳಿಗೆಗೆ ಕೆಲಸಕ್ಕೆ ಹೋಗಿದ್ದರು. ಅ.7ರಂದು ಲಾರಿಯಿಂದ ಪಟಾಕಿ ಅನ್‌ಲೋಡ್‌ ಮಾಡುತ್ತಿದ್ದಾಗ ಪಟಾಕಿ ಬಾಕ್ಸ್‌ನಿಂದ ಕಿಡಿ ಹೊತ್ತಿಕೊಂಡು ಬೆಂಕಿ ವ್ಯಾಪಿಸಿತು. ಈ ದುರಂತದಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿ, ನ್ಯಾಯ ಒದಗಿಸಬೇಕು ಎಂದು ದೂರುದಾರ ಮನವಿ ಮಾಡಿದ್ದರು.

ರೇಷನ್ ಪಡೆಯದ ಕಾರ್ಡ್‌ದಾರರಿಗೆ ಆಹಾರ ಇಲಾಖೆ ಶಾಕ್

ಬೆಂಗಳೂರು: ಕಳೆದ 6 ತಿಂಗಳಿನಿಂದ ರೇಷನ್ ಪಡೆಯದ ಕಾರ್ಡ್‌ದಾರರಿಗೆ ಆಹಾರ ಇಲಾಖೆ ಶಾಕ್ ನೀಡಿದೆ. ರೇಷನ್ ಪಡೆಯದ 3.26 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ಗಳನ್ನು ತಾತ್ಕಾಲಿಕ ಅಮಾನತು ಮಾಡಲು ಆಹಾರ ಇಲಾಖೆ ನಿರ್ಧಾರ ಮಾಡಿದೆ.

ಈ ಬಗ್ಗೆ ಆಹಾರ ಇಲಾಖೆ ಜಂಟಿ ನಿರ್ದೇಶಕ ಗ್ಯಾನೆಂದ್ರ ಕುಮಾರ್ ಮಾಹಿತಿ ನೀಡಿದ್ದು, ಸದ್ಯ ಇಷ್ಟು ತಿಂಗಳ ಅವಧಿಯಲ್ಲಿ ಯಾಕೆ ಪಡಿತರ ತೆಗೆದುಕೊಂಡಿಲ್ಲ ಎಂಬ ಬಗ್ಗೆ ನಾವು ಸರ್ವೆ ಮಾಡಲಿದ್ದೇವೆ. ಸ್ಥಳೀಯ ಫುಡ್ ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಯಲಿದೆ. ಸರ್ವೇ ವೇಳೆಯಲ್ಲಿ ಕಂಡುಬಂದ ಕಾರಣಗಳನ್ನು ಪರಿಗಣಿಸಿ ಮತ್ತೆ ಕಾರ್ಡ್ ರೀ ಆ್ಯಕ್ಟಿವೇಟ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | HD Deve Gowda: ಎಚ್‌.ಡಿ. ದೇವೇಗೌಡರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್‌ ಪ್ರದಾನ

ಹಲವು ಕಾರಣಗಳಿಂದ ಫಲಾನುಭವಿಗಳು ರೇಷನ್ ತೆಗೆದುಕೊಂಡಿಲ್ಲ. ಯಾಕೆ ರೇಷನ್ ತೆಗೆದುಕೊಂಡಿಲ್ಲ ಎಂಬ ಬಗ್ಗೆ ಸಮಗ್ರ ಮಾಹಿತಿ ತರಿಸಿಕೊಳ್ಳುತ್ತೇವೆ. ಕಾರ್ಡ್‌ಗಳು ಶಾಶ್ವತ ರದ್ದು ಆಗಲ್ಲ, ತಾತ್ಕಾಲಿಕ ಅಮಾನತು ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Exit mobile version