ಬೆಂಗಳೂರು: ಐಟಿ ಕಂಪನಿಗಳು ಸೇರಿದಂತೆ ಔದ್ಯಮಿಕವಾಗಿ ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಿರುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಂಜುಳಾ ಲಿಂಬಾವಳಿ (181731) ವಿಜಯ ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಚ್ ನಾಗೇಶ್ (137230) ವಿರುದ್ಧ 44501 ಮತಗಳ ಅಂತರದಿಂದ ಗೆಲುವು ಸಾಧಿಸಿದರು. 2018ರಲ್ಲಿ ಬಿಜೆಪಿಯ ಅರವಿಂದ ಲಿಂಬಾವಳಿ 1,41,682 ಮತ ಪಡೆಯುವ ಮೂಲಕ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ಸಿನ ಎ ಸಿ ಶ್ರೀನಿವಾಸ 1,23,898 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಬಿಬಿಎಂಪಿಯ ಗರುಡಾಚಾರ್ ಪಾಳ್ಯ, ಹೂಡಿ, ಕಾಡುಗೋಡಿ, ಹಗದೂರು, ದೊಡ್ಡನೆಕ್ಕುಂಡಿ, ಮಾರತ್ ಹಳ್ಳಿ, ವರ್ತೂರು, ಬೆಳ್ಳಂದೂರು ಸೇರಿದಂತೆ ಎಂಟು ವಾರ್ಡ್‌ಗಳು ಈ ಕ್ಷೇತ್ರದಲ್ಲಿವೆ. ಹಾಗೆಯೇ 11 ತಾಲೂಕು ಪಂಚಾಯಿತಿ ಈ ಕ್ಷೇತ್ರ ಒಳಗೊಂಡಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಎರಡನೇ ಕ್ಷೇತ್ರ ಇದಾಗಿದ್ದು, ಸದ್ಯ 5 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಈ ಪೈಕಿ 2,15,000 ರಷ್ಟಿರುವ ಎಸ್‌ಸಿ, ಎಸ್‌ಟಿ ಮತಗಳೇ ನಿರ್ಣಾಯಕ. ಇನ್ನು ಒಬಿಸಿ 95,000, ಒಕ್ಕಲಿಗ 94,000, ಮುಸ್ಲಿಂ 45,000 ಹಾಗೂ ಇತರೇ 30,000 ಮತಗಳಿವೆ.
ಅರವಿಂದ ಲಿಂಬಾವಳಿ ಅವರು 2008ರಿಂದ ಮೂರು ಬಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರು ಕ್ಷೇತ್ರದಲ್ಲಿ ಸಂಪೂರ್ಣ ಪಾರುಪತ್ಯ ಸ್ಥಾಪಿಸಿದ್ದರು.
Read more: Ron Election Results: ರೋಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಿ.ಎಸ್ ಪಾಟೀಲ ಕೊರಳಿಗೆ ಗೆಲುವಿನ ಹಾರ