ಬೆಂಗಳೂರು : ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ʻಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ʼನ ʻಕೃಷಿ ಉಪಕರಣಗಳ ವಿಭಾಗವುʼ (ಫಾರ್ಮ್ ಎಕ್ವಿಪ್‌ಮೆಂಟ್ ಸೆಕ್ಟರ್-ಎಫ್‌ಇಎಸ್) ಹೊಸ 6 ಸಾಲು ಭತ್ತದ ನಾಟಿ (Mahindra Paddy Walker) ಯಂತ್ರವನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ 4ಆರ್‌ಒ ವಾಕ್ ಬಿಹೈಂಡ್ ನಾಟಿಯಂತ್ರ (ಎಂಪಿ 461) ಮತ್ತು 4 ಆರ್ಒ ರೈಡ್-ಆನ್ (ಪ್ಲಾಂಟಿಂಗ್ ಮಾಸ್ಟರ್ ಪ್ಯಾಡಿ 4 ಆರ್ಒ) ಅನ್ನು ಯಶಸ್ವಿಯಾಗಿ ಪರಿಚಯಿಸಿದ ನಂತರ, ಮಹೀಂದ್ರಾ ಅವರ ಹೊಸ ʻ6ಆರ್ಒ ಪ್ಯಾಡಿ ವಾಕರ್ʼ ಭತ್ತದ ನಾಟಿ ಯಂತ್ರವು ಭತ್ತ ನಾಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹೀಂದ್ರಾದ ಸ್ಥಿತಿಗತಿಯನ್ನು ಹೆಚ್ಚಿಸಿದೆ.
ಇದನ್ನೂ ಓದಿ: Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್!
ಈ ವಿಭಾಗದಲ್ಲಿ ಕಂಪನಿಯು ಈಗಾಗಲೇ ಮುಂಚೂಣಿ ಸ್ಥಾನ ಹೊಂದಿದ್ದು, ಇದನ್ನು ಮತ್ತಷ್ಟು ಉತ್ತಮಗೊಳಿಸಲು ಹೊಸ ಯಂತ್ರ ನೆರವಾಗಲಿದೆ. ಭತ್ತವನ್ನು ಪ್ರಮುಖ ಬೆಳೆಯುವ ಕರ್ನಾಟಕವು ವಿಶ್ವ ದರ್ಜೆಯ ಅಕ್ಕಿಗೆ ಹೆಸರುವಾಸಿಯಾಗಿದೆ ಮತ್ತು ಭತ್ತದ ಯಾಂತ್ರೀಕರಣ ತಂತ್ರಜ್ಞಾನಗಳನ್ನು ಆರಂಭಿಕವಾಗಿ ಅಳವಡಿಸಿಕೊಂಡ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ಬೆಳೆಯಲಾಗುತ್ತದೆ. ಹೊಸ ಪರಿಹಾರವು ನೀರಿನ ಸಂರಕ್ಷಣೆ, ಕಡಿಮೆ ಪರಿಸರ ಮಾಲಿನ್ಯ ತಡೆಯುತ್ತದೆ. ಇದರ ಜೊತೆಗೆ, ಕಾರ್ಮಿಕ-ಕೇಂದ್ರಿತ ತಂತ್ರಗಳಿಗೆ ಹೋಲಿಸಿದರೆ ಕಡಿಮೆ ಕಾರ್ಮಿಕ ವೆಚ್ಚ ಸೇರಿದಂತೆ, ಭತ್ತದ ಕೃಷಿಗೆ ಸಂಬಂಧಿಸಿದ ಒಟ್ಟಾರೆ ಲಾಭದಾಯಕತೆ ನೀಡುತ್ತದೆ.
ಹೊಸ ʻಮಹೀಂದ್ರಾ 6 ಆರ್ಒ ಪ್ಯಾಡಿ ವಾಕರ್ʼ ಭತ್ತ ನಾಟಿ ಯಂತ್ರವು ಅತ್ಯುತ್ತಮ ಆಪರೇಟರ್ ದಕ್ಷತೆ ಒದಗಿಸುತ್ತದೆ. ನಿಖರತೆ ಮತ್ತು ಪರಿಣಾಮಕಾರಿ ನಾಟಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಭತ್ತದ ಕೃಷಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ. ಹಸ್ತಚಾಲಿತವಾಗಿ ನಿರ್ವಹಿಸಲ್ಪಡುವ ಹೊಸ ನಾಟಿ ಯಂತ್ರವು ವಿನ್ಯಾಸದಲ್ಲಿ ಚಿಕ್ಕದಾಗಿದೆ ಆಗಿದೆ ಮತ್ತು ಸೀಮಿತ ಸ್ಥಳಗಳಲ್ಲಿ ಸುಲಭವಾಗಿ ಇದನ್ನು ಕಾರ್ಯಾಚರಿಸಬಹುದಾಗಿದೆ.
ಆರು ಸಾಲುಗಳಲ್ಲಿ ಭತ್ತ ನಾಟಿ
ಏಕಕಾಲದಲ್ಲಿ ಆರು ಸಾಲುಗಳಲ್ಲಿ, ಒಂದೇ ಪಾಸ್ ನಲ್ಲಿ ಏಕರೂಪದ ನಾಟಿ ಮಾಡಲು ಇದು ಅವಕಾಶ ಕಲ್ಪಿಸಲಿದೆ. ಶಕ್ತಿ, ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯ ಮೇಲೆ ಗಮನ ಕೇಂದ್ರೀಕರಿಸಿ, ಹೊಸ ಭತ್ತ ನಾಟಿ ಯಂತ್ರವನ್ನು ತಯಾರಿಸಲಾಗಿದ್ದು, ಇದು ಹೆಚ್ಚು ಬಾಳಿಕೆ ಬರುವ ಗೇರ್‌ಬಾಕ್ಸ್ ಮತ್ತು 4-ಲೀಟರ್ ಸಾಮರ್ಥ್ಯದೊಂದಿಗೆ ಶಕ್ತಿಯುತ ಎಂಜಿನ್ ಅನ್ನು ಹೊಂದಿದೆ. ಇದು ಹೆಚ್ಚಿನ ಉತ್ಪಾದನೆ ಮತ್ತು ಕಡಿಮೆ ಇಂಧನ ಬಳಕೆಯನ್ನು ಖಾತರಿಪಡಿಸುತ್ತದೆ, ಭತ್ತದ ಕೃಷಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ಜೊತೆಗೆ ಸರ್ವೀಸ್ ಅಂತರ ಹೆಚ್ಚಿರುವ ಕಾರಣದಿಂದ ಸೇವಾ ವೆಚ್ಚವನ್ನು ಕಡಿಮೆ ಮಾಡುತ್ತದೆ.
2 ವರ್ಷಗಳ ಮರುಪಾವತಿ ಅವಧಿ ಮತ್ತು ಕೇವಲ 200 ಎಕರೆಗಳ ಕನಿಷ್ಠ ಕಾರ್ಯಾಚರಣಾ ಪ್ರದೇಶದೊಂದಿಗೆ, ಹೊಸ ಭತ್ತ ನಾಟಿ ಯಂತ್ರವು ಬಾಡಿಗೆ ವ್ಯವಹಾರಗಳಿಗೆ ಅತ್ಯುತ್ತಮ ಭವಿಷ್ಯ ಒದಗಿಸುತ್ತದೆ. ಕರ್ನಾಟಕದಲ್ಲಿ ಲಭ್ಯವಿರುವ ಮಹೀಂದ್ರಾದ ವ್ಯಾಪಕವಾದ ಕೃಷಿ ಯಂತ್ರೋಪಕರಣಗಳ ಡೀಲರ್ ನೆಟ್‌ವರ್ಕ್ ಮೂಲಕ ರೈತರು ಮನೆ ಬಾಗಿಲಿಗೆ ಸೇವೆ ಪಡೆಯಬಹುದು. ಇದನ್ನು ‘ಮಹೀಂದ್ರಾ ಸಾಥಿ’ ಎಂಬ ಹೊಸ ಬಳಕೆದಾರ-ಸ್ನೇಹಿ ಅಪ್ಲಿಕೇಶನ್ ಮೂಲಕ ಮೇಲ್ವಿಚಾರಣೆ ಮಾಡಬಹುದು. ಹೊಸ ಮಹೀಂದ್ರಾ ʻ6 ಆರ್ಒ ಪ್ಯಾಡಿ ವಾಕರ್ʼ ಮತ್ತು ಮಹೀಂದ್ರಾದ ಸಂಪೂರ್ಣ ಶ್ರೇಣಿಯ ಭತ್ತದ ನಾಟಿ ಯಂತ್ರಗಳನ್ನು ಮಹೀಂದ್ರ ಫೈನಾನ್ಸ್ ಮತ್ತು ಶ್ರೀರಾಮ್ ಫೈನಾನ್ಸ್‌ನಿಂದ ಅತ್ಯುತ್ತಮ ದರ್ಜೆಯ ಹಣಕಾಸು ಆಯ್ಕೆಗಳೊಂದಿಗೆ ನೀಡಲಾಗುವುದು.