Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್​! - Vistara News

ಆಟೋಮೊಬೈಲ್

Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್​!

Mahindra XUV 3XO: ಎಕ್ಸ್​ಯುವಿ 3 ಎಕ್ಸ್ ಒ ದೇಶಾದ್ಯಂತ ಗ್ರಾಹಕರ ಮನ ಗೆದ್ದಿದೆ. ಮೊದಲ 10 ನಿಮಿಷಗಳಲ್ಲಿ 27000 ಕ್ಕೂ ಹೆಚ್ಚು ಬುಕಿಂಗ್ ಗಳನ್ನು ದಾಖಲಿಸಿದೆ. ಇದು ಮಹೀಂದ್ರಾ ಕಂಪನಿಯು ಹೊಸ ಎಸ್ ಯುವಿ ಕಡೆಗೆ ಹೊಸ ಆಕರ್ಷಣೆಯನ್ನು ಪ್ರದರ್ಶಿಸಿದೆ

VISTARANEWS.COM


on

XVU300
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತದ ಮುಂಚೂಣಿ ಎಸ್​ಯುವಿ (Sport Utility Vehicle) ತಯಾರಕ ಕಂಪನಿಯಾದ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಲಿಮಿಟೆಡ್ ಇತ್ತೀಚೆಗೆ ಬಿಡುಗಡೆ ಮಾಡಿದ ಕಾಂಪ್ಯಾಕ್ಟ್ ಎಸ್​​ಯುವಿ ಕಾರಾಗಿರುವ ಎಕ್ಸ್​ಯುವಿ 3ಎಕ್ಸ್ (Mahindra XUV 3XO) ಕಾರು ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಮೇ 15ರಂದು ಬುಕಿಂಗ್ ಆರಂಭಗೊಂಡ ಕೇವಲ ಒಂದು ಗಂಟೆಯಲ್ಲಿ (60 ನಿಮಿಷ) 50 ಸಾವಿರ ಬುಕಿಂಗ್​ ಪಡೆದುಕೊಂಡಿದೆ. ಈ ಮೂಲಕ ಬಿಡುಗಡೆಗೊಂಡು ಬುಕಿಂಗ್ ಆರಂಭಗೊಂಡ ಒಂದೇ ಗಂಟೆಯಲ್ಲಿ 50 ಸಾವಿರ ಬುಕಿಂಗ್​ ಪಡೆದ ವಿನೂತನ ಸಾಧನೆ ಮಾಡಿದೆ.

ಎಕ್ಸ್​ಯುವಿ 3 ಎಕ್ಸ್ ಒ ದೇಶಾದ್ಯಂತ ಗ್ರಾಹಕರ ಮನ ಗೆದ್ದಿದೆ. ಮೊದಲ 10 ನಿಮಿಷಗಳಲ್ಲಿ 27000 ಕ್ಕೂ ಹೆಚ್ಚು ಬುಕಿಂಗ್ ಗಳನ್ನು ದಾಖಲಿಸಿದೆ. ಇದು ಮಹೀಂದ್ರಾ ಕಂಪನಿಯು ಹೊಸ ಎಸ್ ಯುವಿ ಕಡೆಗೆ ಹೊಸ ಆಕರ್ಷಣೆಯನ್ನು ಪ್ರದರ್ಶಿಸಿದೆ. ಈ ಮೈಲಿಗಲ್ಲು ಎಕ್ಸ್ ಯುವಿ 3 ಎಕ್ಸ್ ಒನ ಅತ್ಯುತ್ತಮ ವಿನ್ಯಾಸ, ಪ್ರೀಮಿಯಂ ಒಳಾಂಗಣ, ಆರಾಮದಾಯಕ ಸವಾರಿ, ಅತ್ಯಾಧುನಿಕ ತಂತ್ರಜ್ಞಾನ, ರೋಮಾಂಚಕ ಕಾರ್ಯಕ್ಷಮತೆ ಮತ್ತು ಸಾಟಿಯಿಲ್ಲದ ಸುರಕ್ಷತೆಯ ಕಡೆಗೆ ಗ್ರಾಹಕರ ಗಮನವಾಗಿದೆ.

ಈ ಕುರಿತು ಮಹೀಂದ್ರಾ ಆ್ಯಂಡ್​ ಮಹಿಂದ್ರಾ ಲಿಮಿಟೆಡ್ ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಮಾತನಾಡಿ, ಎಕ್ಸ್ ಯುವಿ 3 ಎಕ್ಸ್ ಒ ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ 50,000 ಬುಕಿಂಗ್ ಗಳನ್ನು ಸ್ವೀಕರಿಸಿದೆ ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ. ಇದು ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿ. ಇಂತಹ ಅಗಾಧ ಮಾರುಕಟ್ಟೆ ಪ್ರತಿಕ್ರಿಯೆಯು ನಾವೀನ್ಯತೆ ಮತ್ತು ನಿರೀಕ್ಷೆಗಳನ್ನು ಮೀರಿ ಮೌಲ್ಯವನ್ನು ತಲುಪಿಸುವ ನಮ್ಮ ಬದ್ಧತೆಗೆ ಪೂರಕ. ಎಕ್ಸ್ ಯುವಿ 3 ಎಕ್ಸ್ ಸಾರಿಗೆ ವ್ಯವಸ್ಥೆಯ ಭವಿಷ್ಯದತ್ತ ಒಂದು ಮಹತ್ವದ ಹೆಜ್ಜೆ. ಇದನ್ನು ಗ್ರಾಹಕರಿಗೆ ಬೇಕಾದ ಹಾಗೆ ಮತ್ತು ಇನ್ನಷ್ಟು ಸೌಲಭ್ಯಗಳನ್ನ ಕೊಡುವುದಕ್ಕೆ ವಿನ್ಯಾಸಗೊಳಿಸಲಾಗಿದೆ. ಈ ನಂಬಲಾಗದ ಬೇಡಿಕೆಯನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ಎಕ್ಸ್ ಯುವಿ 3 ಎಕ್ಸ್ ಒ ಅನ್ನು ತಲುಪಿಸಲು ಪ್ರಾರಂಭಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

ಎಕ್ಸ್ ಯುವಿ 3 ಎಕ್ಸ್ ಒ ವಿತರಣೆಯು ಮೇ 26, 2024 ರಂದು ಪ್ರಾರಂಭವಾಗಲಿದೆ. ಉತ್ಸಾಹವನ್ನು ನಿರೀಕ್ಷಿಸಿ ನಾವು ಈಗಾಗಲೇ 10000 ಕ್ಕೂ ಹೆಚ್ಚು ಯುನಿಟ್ ಗಳನ್ನು ಉತ್ಪಾದಿಸಿದ್ದೇವೆ. ಗ್ರಾಹಕರ ಅನುಭವದ ಮೇಲೆ ಹೆಚ್ಚಿನ ಗಮನ ಹರಿಸುತ್ತೇವೆ. ಸಮಯೋಚಿತ ವಿತರಣೆಗ ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಮಹೀಂದ್ರಾ ತೆಗೆದುಕೊಳ್ಳುತ್ತದೆ. ಎಕ್ಸ್ ಯುವಿ 3 ಎಕ್ಸ್ ಒ ಗಾಗಿ ಬುಕಿಂಗ್ ಆನ್ ಲೈನ್ ನಲ್ಲಿ ಮತ್ತು ಎಲ್ಲಾ ಅಧಿಕೃತ ಮಹೀಂದ್ರಾ ಡೀಲರ್ ಶಿಪ್ ಗಳಲ್ಲಿ ತೆರೆದಿರುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Tata Motors: ಟಾಟಾ ಮೋಟಾರ್ಸ್‌ನಿಂದ ʼಆಲ್ಟ್ರೋಜ್ ರೇಸರ್ʼ ಬಿಡುಗಡೆ; ದರ ಎಷ್ಟು?

Tata Motors: ಟಾಟಾ ಮೋಟಾರ್ಸ್ ಇಂದು ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿ ವರ್ಷನ್ ಆಗಿರುವ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡಿದೆ. 1.2 ಲೀ ಟರ್ಬೊ ಪೆಟ್ರೋಲ್ ಎಂಜಿನ್‌ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಕಾರ್ಯಕ್ಷಮತೆಯನ್ನು ಒದಗಿಸುವಂತೆ ವಿನ್ಯಾಸಗೊಂಡಿದೆ. 360 ಡಿಗ್ರಿ ಕ್ಯಾಮೆರಾ, 26.03 ಸೆಂ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು 6 ಏರ್‌ಬ್ಯಾಗ್‌ಗಳು ಹೀಗೆ ಹಲವಾರು ಫೀಚರ್‌ಗಳನ್ನು ಹೊಂದಿವೆ.

VISTARANEWS.COM


on

Altroz Racer launched by Tata Motors
Koo

ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ (Tata Motors) ಇಂದು ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿ ವರ್ಷನ್ ಆಗಿರುವ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡಿದೆ. 1.2 ಲೀ ಟರ್ಬೊ ಪೆಟ್ರೋಲ್ ಎಂಜಿನ್‌ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಕಾರ್ಯಕ್ಷಮತೆಯನ್ನು ಒದಗಿಸುವಂತೆ ವಿನ್ಯಾಸಗೊಂಡಿದೆ. ರೇಸ್ ಕಾರ್‌ಗಳಿಂದ ಸ್ಫೂರ್ತಿ ಪಡೆದು ರಚಿಸಿದ ಹೊರಾಂಗಣ ಮತ್ತು ಒಳಾಂಗಣ ಲುಕ್ ಅನ್ನು ಹೊಂದಿದೆ.

5500 ಆರ್‌ಪಿಎಂನಲ್ಲಿ 120 ಪಿಎಸ್ ಉತ್ಪಾದಿಸುವ, 1750ರಿಂದ 4000 ಆರ್‌ಪಿಎಂನಲ್ಲಿ 170 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಡ್ರೈವಿಂಗ್ ಅನುಭವವನ್ನು ಒದಗಿಸಲಿದೆ. 360 ಡಿಗ್ರಿ ಕ್ಯಾಮೆರಾ, 26.03 ಸೆಂ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು 6 ಏರ್‌ಬ್ಯಾಗ್‌ಗಳು (ರೇಸರ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ಬರುತ್ತವೆ) ಹೀಗೆ ಹಲವಾರು ಫೀಚರ್‌ಗಳನ್ನು ಹೊಂದಿರುವ ರೇಸರ್ ಆವೃತ್ತಿಯು ಆಲ್ಟ್ರೊಜ್‌ ಕಾರು ಆವೃತ್ತಿಗಳಲ್ಲಿಯೇ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: University Grants Commission : ಇನ್ನು ಮುಂದೆ ವಿಶ್ವವಿದ್ಯಾಲಯಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಡ್ಮಿಷನ್​

ಇದು 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಒದಗಿಸುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದ್ದು, ನಗರದ ಟ್ರಾಫಿಕ್ ಮತ್ತು ಹೆದ್ದಾರಿಗಳಲ್ಲಿ ಅತ್ಯುತ್ತಮ ಚಾಲನಾ ಅನುಭವವನ್ನು ಒದಗಿಸುತ್ತದೆ. ಸುಧಾರಿತ ತಂತ್ರಜ್ಞಾನ, ವೈಶಿಷ್ಟ್ಯಗಳು ಮತ್ತು ಹ್ಯಾಚ್‌ಬ್ಯಾಕ್‌ನಲ್ಲಿ ಕ್ಲಾಸ್-ಲೀಡಿಂಗ್ ಸುರಕ್ಷತೆಯನ್ನು ಹೊಂದಿರುವ ಆಲ್ಟ್ರೋಜ್ ರೇಸರ್ 3 ವೇರಿಯಂಟ್‌ಗಳಲ್ಲಿ (ಆರ್1, ಆರ್2 ಮತ್ತು ಆರ್3) ಲಭ್ಯವಿರುತ್ತದೆ. ಮೂರು ಬಣ್ಣಗಳ (ಪ್ಯೂರ್ ಗ್ರೇ, ಅಟಾಮಿಕ್ ಆರೆಂಜ್ ಮತ್ತು ಅವೆನ್ಯೂ ವೈಟ್) ಆಯ್ಕೆ ಗ್ರಾಹಕರಿಗೆ ಸಿಗುತ್ತದೆ.

ಇದರ ಜತೆಗೆ ಅಲ್ಟ್ರೋಜ್ ಶ್ರೇಣಿಯನ್ನು ವಿಸ್ತರಿಸುತ್ತಾ ಟಾಟಾ ಮೋಟಾರ್ಸ್ ಎರಡು ಹೊಸ ವೇರಿಯಟ್‌ಗಳನ್ನು (ಎಕ್ಸ್‌ ಝಡ್‌ ಎಲ್‌ಯುಎಕ್ಸ್‌ ಮತ್ತು ಎಕ್ಸ್‌ ಝಡ್‌+ಎಸ್‌ ಎಲ್‌ಯುಎಕ್ಸ್‌) ಪರಿಚಯಿಸಿದೆ ಮತ್ತು ಅಲ್ಟ್ರೋಜ್ ಶ್ರೇಣಿಯ ಒಂದು ವೇರಿಯಂಟ್ ಅನ್ನು (ಎಕ್ಸ್‌ ಝಡ್‌+ಓಎಸ್) ನವೀಕರಿಸಿದೆ. ಈ ಎರಡು ಹೊಸ ಹೆಚ್ಚುವರಿ ವೇರಿಯಂಟ್‌ಗಳು ಪೆಟ್ರೋಲ್ ಮ್ಯಾನ್ಯುವಲ್, ಪೆಟ್ರೋಲ್ ಡಿಸಿಎ, ಡೀಸೆಲ್ ಮತ್ತು ಸಿ ಎನ್ ಜಿ ವಿಭಾಗಗಳ ಆಯ್ಕೆಯಲ್ಲಿ ಲಭ್ಯವಿರುತ್ತವೆ.

ದರ ಪಟ್ಟಿ

ರೇಸರ್ ವೇರಿಯಂಟ್‌ಗಳು ಪರಿಚಯಾತ್ಮಕ ಬೆಲೆ (ಪೆಟ್ರೋಲ್ ಎಂಟಿ), ಭಾರತೀಯ ರೂಪಾಯಿಗಳಲ್ಲಿ, ಎಕ್ಸ್ ಶೋರೂಂ, ದೆಹಲಿ ಆರ್1 -9,49,000, ಆರ್2- 10,49,000, ಆರ್3- 10,99,000 ಆಗಿವೆ.

ವೇರಿಯಂಟ್‌ಗಳು ಪರಿಚಯಾತ್ಮಕ ಬೆಲೆ (ಪೆಟ್ರೋಲ್ ಎನ್ಎ ಎಂಟಿ), ಭಾರತೀಯ ರೂಪಾಯಿಗಳಲ್ಲಿ, ಎಕ್ಸ್ ಶೋರೂಂ, ದೆಹಲಿ ಎಕ್ಸ್‌ ಝಡ್‌ ಎಲ್‌ಯುಎಕ್ಸ್ (ಹೊಸತು) – 8,99,900, ಎಕ್ಸ್‌ ಝಡ್‌+ಎಸ್ ಎಲ್‌ಯುಎಕ್ಸ್ – (ಹೊಸತು) -9,64,990, ಎಕ್ಸ್‌ ಝಡ್‌+ಓಎಸ್ (ಅಪ್ ಗ್ರೇಡೆಡ್) -9,98,900 ರಷ್ಟಿದೆ.

ಇದನ್ನೂ ಓದಿ: EPF Account Rules: ಕ್ಲೈಮ್ ಇತ್ಯರ್ಥ ಇನ್ನು ಸುಲಭ; ಇಪಿಎಫ್‌ಒ ಮಾಡಿದೆ ಹಲವು ಹೊಸ ಬದಲಾವಣೆ

ಟಾಟಾ ಆಲ್ಟ್ರೊಜ್ ರೇಸರ್ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಮಾತನಾಡಿ, ಪ್ರತಿ ದಿನ ವಾಹನ ಚಾಲನೆ ಮಾಡುವವರಿಗೆ ಉತ್ಕೃಷ್ಟ ಅನುಭವ ಒದಗಿಸಲೆಂದೇ ವಿನ್ಯಾಸಗೊಂಡಿರುವ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡವ ಮೂಲಕ ಆಲ್ಟ್ರೋಜ್ ಶ್ರೇಣಿಯನ್ನು ಬಲಪಡಿಸಲು ಹೆಮ್ಮೆ ಪಡುತ್ತೇವೆ. ವಿಭಾಗ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ತಂತ್ರಜ್ಞಾನ ಆಧರಿತವಾಗಿ ರೂಪುಗೊಂಡಿರುವ, ಅತ್ಯುನ್ನತ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ರೇಸರ್, ವಿಭಿನ್ನ ಕಾರನ್ನು ಡ್ರೈವ್ ಮಾಡಲು ಬಯಸುವ, ಕನೆಕ್ಟೆಡ್ ಆಗಿರುವ ಮತ್ತು ಫ್ಯಾಷನ್ ಆಸಕ್ತಿಯನ್ನು ಹೊಂದಿರುವ ಹೊಸ ಪೀಳಿಗೆಯ ಗ್ರಾಹಕರನ್ನು ಹೆಚ್ಚು ಆಕರ್ಷಿಸಬಹುದಾಗಿದೆ.

ಅದ್ಭುತ ಕಾರ್ಯಕ್ಷಮತೆಯ ಡಿಎನ್ಎ ಹೊಂದಿರುವ ಮತ್ತು ರೇಸ್ ಕಾರ್‌ನಿಂದ ಸ್ಫೂರ್ತಿ ಪಡೆದಿರುವ ಲುಕ್ ಹೊಂದಿರುವ ರೇಸರ್ ನಿಮ್ಮನ್ನು #RacePastTheRoutine ಎಂಬ ಭಾವನೆ ಉಂಟು ಮಾಡುವ ಪರಿಪೂರ್ಣ ಒಡನಾಡಿಯಾಗುವ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ

2.5 ಲಕ್ಷ ಗ್ರಾಹಕರನ್ನು ಹೊಂದಿರುವ ಅಲ್ಟ್ರೋಜ್ ಅದರ ಸೊಗಸಾದ ವಿನ್ಯಾಸ, ಅಪೂರ್ವ ವೈಶಿಷ್ಟ್ಯಗಳು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಉತ್ತಮ ಸುರಕ್ಷತೆಯ ಮೂಲಕ ಭಾರತದಲ್ಲಿನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಲ್ಲಿಯೇ ಉನ್ನತ ಮಾನದಂಡವನ್ನು ಸ್ಥಾಪಿಸಿದೆ. ಈ ಕಾರು ಅನೇಕ ವಿಭಾಗಗಳಲ್ಲಿ ಪ್ರವರ್ತಕ ಫೀಚರ್ ಗಳನ್ನು ಹೊಂದಿದೆ. ಗ್ಲೋಬಲ್ ಎಸಿಎಪಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದ ಭಾರತದ ಮೊದಲ ಹ್ಯಾಚ್‌ಬ್ಯಾಕ್ ಎಂಬ ಹೆಗ್ಗಳಿಗೆ ಗಳಿಸಿದೆ. ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಒಳಗೊಂಡಿರುವ ದೇಶದ ಮೊದಲ ಸಿಎನ್‌ಜಿ ಕಾರ್ ಮತ್ತು ಗ್ರಾಹಕರಿಗೆ ಆಯ್ಕೆ ಮಾಡಲು ಪವರ್‌ಟ್ರೇನ್ ಆಯ್ಕೆಗಳನ್ನು ಒದಗಿಸುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದೆ.

Continue Reading

Latest

Yamaha Fascino S : ಎಲ್ಲಿದ್ದೀಯಾ ಅಂಥ ಕೇಳಿದ್ರೆ, ಇಲ್ಲಿದ್ದೀನಿ ಅನ್ನುತ್ತೆ ಈ ಸ್ಕೂಟರ್​! ವಿಶೇಷ ಫೀಚರ್ ಇರುವ ಸ್ಕೂಟರ್ ಈಗ ಭಾರತದಲ್ಲಿ

Fascino S : ಇಂಡಿಯಾ ಯಮಹಾ ಮೋಟಾರ್ (IYM) ಪ್ರೈವೇಟ್ ಲಿಮಿಟೆಡ್, ‘ದಿ ಕಾಲ್ ಆಫ್ ದಿ ಬ್ಲೂ’ ಬ್ರಾಂಡ್ ಅಭಿಯಾನಕ್ಕೆ ಅನುಗುಣವಾಗಿ ‘ಆನ್ಸರ್​ ಬ್ಯಾಕ್’ (Answer Back)ಫೀಚರ್​ ಹೊಂದಿರುವ ಫ್ಯಾಸಿನೊ ಎಸ್ (Fascino S) ಮಾದರಿ ಸ್ಕೂಟರ್ ಬಿಡುಗಡೆ ಮಾಡಿದೆ. ಫ್ಯಾಸಿನೊ ಎಸ್ ಯುರೋಪಿಯನ್ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಹೊಸತನದೊಂದಿಗೆ ರಸ್ತೆ ಇಳಿದಿದೆ.

VISTARANEWS.COM


on

Yamaha Fascino S
Koo

ಬೆಂಗಳೂರು: ನಗರದೊಳಗಿನ ಪಾರ್ಕಿಂಗ್​ನಲ್ಲಿ ಇಟ್ಟಿರುವ ಸ್ಕೂಟರ್​ಗಳನ್ನು ಪತ್ತೆ ಮಾಡುವುದು ಸಾಹಸದ ಕೆಲಸ. ರಾಶಿಯೊಳಗೆ ಎಲ್ಲಿಟ್ಟಿದ್ದೇವೆ ಎಂದು ಮರೆತು ಹೋಗುವುದು ಮೊದಲ ಸಮಸ್ಯೆಯಾದರೆ, ಒಂದೇ ರೀತಿಯ ಹತ್ತಾರು ಸ್ಕೂಟರ್​ಗಳು ಒಂದೇ ಕಡೆ ಇದ್ದಾಗ ನಮ್ಮದು ಯಾವುದು ಎಂದು ಪತ್ತೆ ಹಚ್ಚುವುದೂ ಕಷ್ಟ. ಇದಕ್ಕೆಲ್ಲ ಪರಿಹಾರ ಎಂಬ ಫೀಚರ್​ಗಳನ್ನು ಅಳವಡಿಸಿಕೊಂಡಿರು ಸ್ಕೂಟರ್ ಅನ್ನು ಯಮಹಾ ಇಂಡಿಯಾ ಬಿಡುಗಡೆ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಫ್ಯಾಸಿನೊ ಸ್ಕೂಟರ್​ನ ಸುಧಾರಿತ ಫ್ಯಾಸಿನೊ ಎಸ್ (Yamaha Fascino S)​​ ಅವೃತ್ತಿಯಲ್ಲಿ ಈ ಫೀಚರ್ ಲಭ್ಯವಿದ್ದು, ‘ಆನ್ಸರ್ ಬ್ಯಾಕ್​ ಫೀಚರ್​ ಮೂಲಕ ಮೊಬೈಲ್​ನಲ್ಲೇ ಒಂದು ಬಟನ್ ಒತ್ತಿ ಸ್ಕೂಟರ್​ ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗುತ್ತದೆ.

ಇಂಡಿಯಾ ಯಮಹಾ ಮೋಟಾರ್ (IYM) ಪ್ರೈವೇಟ್ ಲಿಮಿಟೆಡ್, ‘ದಿ ಕಾಲ್ ಆಫ್ ದಿ ಬ್ಲೂ’ ಬ್ರಾಂಡ್ ಅಭಿಯಾನಕ್ಕೆ ಅನುಗುಣವಾಗಿ ‘ಆನ್ಸರ್​ ಬ್ಯಾಕ್’ (Answer Back)ಫೀಚರ್​ ಹೊಂದಿರುವ ಫ್ಯಾಸಿನೊ ಎಸ್ (Yamaha Fascino S) ಮಾದರಿ ಸ್ಕೂಟರ್ ಬಿಡುಗಡೆ ಮಾಡಿದೆ. ಫ್ಯಾಸಿನೊ ಎಸ್ ಯುರೋಪಿಯನ್ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಹೊಸತನದೊಂದಿಗೆ ರಸ್ತೆ ಇಳಿದಿದೆ. ಇದು ಯಮಹಾದ ಪೋರ್ಟ್ ಫೋಲಿಯೊಗೆ ರೋಮಾಚಂಕಾರಿ ಸೇರ್ಪಡೆಯಾಗಿದ್ದು ಪ್ರೀಮಿಯಂ ಸ್ಕೂಟರ್ ಮಾದರಿಯಲ್ಲಿ ಆಕರ್ಷಕ ಮ್ಯಾಟ್ ರೆಡ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಅಲ್ಲದೆ ಆಕರ್ಷಕ ಡಾರ್ಕ್ ಮ್ಯಾಟ್ ಬ್ಲೂ ಬಣ್ಣದಲ್ಲೂ ಸಿಗಲಿದೆ.

ಫ್ಯಾಸಿನೊ ಎಸ್ ಎಲ್ಲಾ ಯಮಹಾ ಅಧಿಕೃತ ಶೋರೂಂಗಳಲ್ಲಿ ಈ ಕೆಳಗಿನ ಬೆಲೆಯಲ್ಲಿ ಲಭ್ಯವಿದೆ

  • ಮ್ಯಾಟ್ ರೆಡ್ ಮತ್ತು ಮ್ಯಾಟ್ ಬ್ಲ್ಯಾಕ್ ರೂ. 93,730/-
  • ಡಾರ್ಕ್ ಮ್ಯಾಟ್ ಬ್ಲೂ ರೂ. 94,530/-

2024ರ ಫ್ಯಾಸಿನೊ ಎಸ್ ಮಾದರಿಯ ಪ್ರಮುಖ ಅಂಶವೆಂದರೆ ‘ಆನ್ಸರ್​ ಬ್ಯಾಕ್’ ಫಂಕ್ಷನ್. ‘ಯಮಹಾ ಸ್ಕೂಟರ್ ಆನ್ಸರ್​​ ಬ್ಯಾಕ್’ ಎಂಬ ಯಮಹಾದ ಮೊಬೈಲ್ ಅಪ್ಲಿಕೇಶನ್ ಮೂಲಕ ಗ್ರಾಹಕರು ಈ ಫೀಚರ್​ ಅನ್ನು ಬಳಸಬಹುದು. ಅಪ್ಲಿಕೇಶನ್ ನೊಳಗಿನ ಆನ್ಸರ್​ ಬ್ಯಾಕ್ ಬಟನ್ ಒತ್ತುವ ಮೂಲಕ, ಸವಾರರು ತಮ್ಮ ಸ್ಕೂಟರ್ ಅನ್ನು ಸುಲಭವಾಗಿ ಪತ್ತೆಹಚ್ಚಬಹುದು. ಇದು ಸುಮಾರು ಎರಡು ಸೆಕೆಂಡುಗಳ ಕಾಲ ಹಾರ್ನ್ ಮಾಡುತ್ತಾ ಎಡ ಮತ್ತು ಬಲ ಇಂಡಿಕೇಟರ್​ಗಳನ್ನು ಸಕ್ರಿಯಗೊಳಿಸುವ ಮೂಲಕ ಪ್ರತಿಕ್ರಿಯಿಸುತ್ತದೆ. ಇದು ಗ್ರಾಹಕರಿಗೆ ಹೆಚ್ಚು ಆರಾಮದಾಯಕ ಸವಾರಿ ಅನುಭವ ನೀಡುತ್ತದೆ. ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇಸ್ಟೋರ್ / ಆ್ಯಪ್ ಸ್ಟೋರ್ ನಿಂದ ಸುಲಭವಾಗಿ ಇನ್​ಸ್ಟಾಲ್​ ಮಾಡಬಹುದು.

ಇದನ್ನೂ ಓದಿ: Chandrababu Naidu: ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ; ಚಂದ್ರಬಾಬು ನಾಯ್ಡು ಘೋಷಣೆ

125 ಸಿಸಿಯ ಅತ್ಯುತ್ತಮ ಎಂಜಿನ್​

ಫ್ಯಾಸಿನೊ ಎಸ್ ಮಾದರಿಯು ಯಮಹಾದ ಅತ್ಯಾಧುನಿಕ ಬಿಎಸ್ 6 ಕಾಂಪ್ಲೈಂಟ್, ಏರ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ (ಎಫ್ಐ), ಸ್ಮಾರ್ಟ್ ಮೋಟಾರ್ ಜನರೇಟರ್ (ಎಸ್ಎಂಜಿ) ನೊಂದಿಗೆ 125 ಸಿಸಿ ಬ್ಲೂ ಕೋರ್ ಹೈಬ್ರಿಡ್ ಎಂಜಿನ್ ಹೊಂದಿದೆ, ಎಂಜಿಜನ್​​ “ಸೈಲೆಂಟ್ ಸ್ಟಾರ್ಟ್” ಅನ್ನು ಆ್ಯಕ್ಟಿವೇಟ್ ಮಾಡುತ್ತದೆ. ಸರಿಸಾಟಿಯಿಲ್ಲದ “ಪವರ್ ಅಸಿಸ್ಟ್” ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಮಾದರಿಯು ನಾರ್ಮಲ್ ಮೋಡ್ ಮತ್ತು ಟ್ರಾಫಿಕ್ ಮೋಡ್ ಸೇರಿದಂತೆ ಸುಧಾರಿತ ಸ್ವಯಂಚಾಲಿತ ಸ್ಟಾಪ್ & ಸ್ಟಾರ್ಟ್ ಸಿಸ್ಟಮ್ (ಎಸ್ಎಸ್ಎಸ್) ಅನ್ನು ಸಹ ಹೊಂದಿದೆ. ಈ ಫೀಚರ್​ ಮೂಲಕ ಮೈಲೇಜ್​ ಹೆಚ್ಚಿಸಲಾಗಿದೆ.

ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಈಶಿನ್ ಚಿಹಾನಾ, “ದ್ವಿಚಕ್ರ ವಾಹನ ಉದ್ಯಮದಲ್ಲಿ ವಿಕಸನಗೊಳ್ಳುತ್ತಿರುವ ವಿದ್ಯಮಾನಗಳೊಂದಿಗೆ ಗ್ರಾಹಕರಿಗೆ ವಿಶೇಷ ಫೀಚರ್​ಗಳನ್ನು ಒದಗಿಸುವುದು ಅತ್ಯಂತ ಮಹತ್ವದ್ದಾಗಿದೆ. ಇಂದು ಭಾರತದ ನಗರಗಳಲ್ಲಿರುವ ಗ್ರಾಹಕರು ಸ್ಮಾರ್ಟ್ ಆಯ್ಕೆಗಳನ್ನು ಮಾಡುತ್ತಾರೆ. ಯಮಹಾದಲ್ಲಿ, ನಾವು ನಿರಂತರವಾಗಿ ಗ್ರಾಹಕರ ಅಗತ್ಯಗಳಿಗೆ ಆದ್ಯತೆ ನೀಡುತ್ತೇವೆ. ಸವಾರಿ ಅನುಭವಕ್ಕೆ ಮೌಲ್ಯ ನೀಡುವ ಪರಿಹಾರಗಳನ್ನು ನೀಡುತ್ತಿದ್ದೇವೆ. ಫ್ಯಾಸಿನೊ ಎಸ್ ನಲ್ಲಿರುವ ‘ಆನ್ಸರ್​ ಬ್ಯಾಕ್’ ಫೀಚರ್​ ಯಮಹಾದ ವಿಶಿಷ್ಟ ಶೈಲಿ ಮತ್ತು ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತದೆ. ನಮ್ಮ ಗ್ರಾಹಕರಿಗೆ ಸಮೃದ್ಧ ಅನುಭವ ನೀಡಲು ನಾವು ಅಂತಹ ಫೀಚಗಳ ಆವಿಷ್ಕಾರ ಮುಂದುವರಿಸುತ್ತೇವೆ ಎಂದು ಹೇಳಿದರು.

ಈ ಅತ್ಯಾಕರ್ಷಕ ಫೀಚರ್​ಗಳು ಸ್ಕೂಟರ್ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ನಿಗದಿಪಡಿಸಲಿದೆ. ಹೊಸತನ ಮತ್ತು ಗ್ರಾಹಕರ ತೃಪ್ತಿಗೆ ಯಮಹಾದ ಬದ್ಧತೆಯಾಗಿದೆ. ಫ್ಯಾಸಿನೊ ಎಸ್ ತನ್ನ ಶೈಲಿ ಮತ್ತು ತಂತ್ರಜ್ಞಾನದ ಮಿಶ್ರಣದ ಮೂಲಕ ರಾಷ್ಟ್ರವ್ಯಾಪಿ ಮೋಡಿ ಮಾಡುತ್ತಿದೆ. ಯಮಹಾ ನಗರದ ಸವಾರಿಯಲ್ಲಿ ಪ್ರೀಮಿಯಂ ಫೀಚರ್​ಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ.

Continue Reading

ದೇಶ

Toyota Kirloskar Motor: ದೆಹಲಿಯಲ್ಲಿ ಟಿಕೆಎಂನ ʼಟೊಯೊಟಾ ಯೂಸ್ಡ್ ಕಾರ್ʼ ಮಳಿಗೆಗೆ ಚಾಲನೆ

Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ನವದೆಹಲಿಯಲ್ಲಿ ತನ್ನ ಮೊದಲ ಕಂಪನಿಯ ಒಡೆತನದ ಟೊಯೊಟಾ ಯೂಸ್ಡ್ ಕಾರ್ ಮಳಿಗೆಯನ್ನು (ಟಿಯುಸಿಒ) ಉದ್ಘಾಟಿಸಿದೆ. “ಟೊಯೊಟಾ ಯು-ಟ್ರಸ್ಟ್” ಬ್ರಾಂಡ್ ಹೆಸರಿನಲ್ಲಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತವಾಗಿ ಬಳಸಿದ ಕಾರುಗಳನ್ನು ನೀಡುವ ಗುರಿಯನ್ನು ಹೊಂದಿರುವ ಟೊಯೊಟಾ ಯು-ಟ್ರಸ್ಟ್ ಕಾರುಗಳ ಖರೀದಿ ಮತ್ತು ಮಾರಾಟದ ಪ್ರಕ್ರಿಯೆಯಲ್ಲಿ ಅನುಕೂಲತೆ, ಪಾರದರ್ಶಕತೆ ಮತ್ತು ಪೀಸ್ ಆಫ್ ಮೈಂಡ್ ಅನ್ನು ನೀಡುತ್ತದೆ.

VISTARANEWS.COM


on

Toyota Kirloskar Motor Inauguration of Toyota Used Car Store by TKM in New Delhi
Koo

ಬೆಂಗಳೂರು: ಗ್ರಾಹಕ ಮೊದಲು ಎಂಬ ತತ್ವಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸುವ ‘ಟೊಯೊಟಾ ಕಿರ್ಲೋಸ್ಕರ್ ಮೋಟಾರ್’ (Toyota Kirloskar Motor) ಇಂದು ನವದೆಹಲಿಯಲ್ಲಿ ತನ್ನ ಮೊದಲ ಕಂಪನಿಯ ಒಡೆತನದ ಟೊಯೊಟಾ ಯೂಸ್ಡ್ ಕಾರ್ ಮಳಿಗೆಯನ್ನು (ಟಿಯುಸಿಒ) ಉದ್ಘಾಟಿಸಿದೆ. “ಟೊಯೊಟಾ ಯು-ಟ್ರಸ್ಟ್” ಬ್ರಾಂಡ್ ಹೆಸರಿನಲ್ಲಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತವಾಗಿ ಬಳಸಿದ ಕಾರುಗಳನ್ನು ನೀಡುವ ಗುರಿಯನ್ನು ಹೊಂದಿರುವ ಟೊಯೊಟಾ ಯು-ಟ್ರಸ್ಟ್ ಕಾರುಗಳ ಖರೀದಿ ಮತ್ತು ಮಾರಾಟದ ಪ್ರಕ್ರಿಯೆಯಲ್ಲಿ ಅನುಕೂಲತೆ, ಪಾರದರ್ಶಕತೆ ಮತ್ತು ಪೀಸ್ ಆಫ್ ಮೈಂಡ್ ಅನ್ನು ನೀಡುತ್ತದೆ.

ಈ ಹೊಸ ಸೌಲಭ್ಯವು 15,000 ಚದರ ಅಡಿಗಳಷ್ಟು ವಿಸ್ತಾರವಾಗಿದ್ದು, 20ಕ್ಕೂ ಹೆಚ್ಚು ಟೊಯೊಟಾ ಪ್ರಮಾಣೀಕೃತ ವಾಹನಗಳ ಡಿಸ್‌ಪ್ಲೆ ಸಾಮರ್ಥ್ಯವನ್ನು ಹೊಂದಿದೆ. ಟೊಯೊಟಾ ವಾಹನಗಳ ಖರೀದಿ ಮತ್ತು ಮಾರಾಟ ಎರಡಕ್ಕೂ ಉದ್ದೇಶಿಸಲಾದ ರಿಟೇಲ್ ಟಚ್ ಪಾಯಿಂಟ್ ಆಗಿ ಟಿಯುಸಿಒದಲ್ಲಿನ ಎಲ್ಲಾ ಕಾರುಗಳು ಜಾಗತಿಕ ಟೊಯೊಟಾ ಮಾನದಂಡಗಳ ಆಧಾರದ ಮೇಲೆ ಸಮಗ್ರ 203-ಪಾಯಿಂಟ್‌ಗಳ ತಪಾಸಣೆಗೆ ಒಳಗಾಗುತ್ತವೆ. ತಪಾಸಣೆಗಳು ಕಠಿಣ ಸುರಕ್ಷತೆ, ರಚನಾತ್ಮಕ ಕಠಿಣತೆ ಮತ್ತು ಕಾರ್ಯಕ್ಷಮತೆಯ ಪರಿಶೀಲನೆಯನ್ನು ಸಹ ಒಳಗೊಂಡಿವೆ.

ಇದನ್ನೂ ಓದಿ: Gold Rate Today: ಆಭರಣ ಖರೀದಿಗೆ ಇದು ಸಕಾಲ; ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಟೊಯೊಟಾಗೆ ಪ್ರತ್ಯೇಕವಾದ “ಹೈ ಕ್ವಾಲಿಟಿ ಪ್ರಿಶಿಯಸ್ ಕ್ಲೀನಿಂಗ್” ‘ಮಾರು ಮಾರು’ ಸಿಗ್ನೇಚರ್‌ನೊಂದಿಗೆ ಟಿಯುಸಿಒ ವಹಿವಾಟು ಭಾರತದಾದ್ಯಂತ ಟೊಯೊಟಾ ಗ್ರಾಹಕರಿಗೆ ಪಾರದರ್ಶಕ ಮತ್ತು ವಿಶ್ವಾಸಾರ್ಹ ಬಳಸಿದ ಕಾರು ಮಾರುಕಟ್ಟೆಯನ್ನು ಬೆಳೆಸುವ ಟಿಕೆಎಂನ ಬದ್ಧತೆಯನ್ನು ಬಲಪಡಿಸುತ್ತದೆ. ಇದಲ್ಲದೆ ಟೊಯೊಟಾ ಯು-ಟ್ರಸ್ಟ್ ಮಳಿಗೆಗಳು ಹೊಚ್ಚ ಹೊಸ ವಾಹನವನ್ನು ಖರೀದಿಸುವ ಸಮಾನಾರ್ಥಕ ವಾತಾವರಣ ಮತ್ತು ಗ್ರಾಹಕರ ಅನುಭವವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತದೆ.

ಖರೀದಿದಾರರು ಸಂಪೂರ್ಣ ಪಾರದರ್ಶಕತೆ, ಕಿರಿಕಿರಿ ಇಲ್ಲದ ಡಾಕ್ಯುಮೆಂಟೇಶನ್ ಮತ್ತು ನ್ಯಾಯೋಚಿತ ಸ್ಪರ್ಧಾತ್ಮಕ ಬೆಲೆಯ ಭರವಸೆಯೊಂದಿಗೆ ವಿವಿಧ ರೀತಿಯ ಉತ್ತಮ-ಗುಣಮಟ್ಟದ ಟೊಯೊಟಾ ಮಾದರಿಗಳಿಂದ ಆಯ್ಕೆ ಮಾಡಬಹುದು. ಡಿಜಿಟಲ್ ಸಂಯೋಜಿತ ಶೋರೂಂ ಸಮಗ್ರ ವಾಹನ ಇತಿಹಾಸ ಮತ್ತು ಮೌಲ್ಯಮಾಪನವನ್ನು ಒದಗಿಸುವ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು “ ವ್ಯಾಲ್ಯುಯೇಟ್ ಯುವರ್ ಕಾರ್” ಆಯ್ಕೆಯ ಮೂಲಕ ಟೊಯೊಟಾ ಯು-ಟ್ರಸ್ಟ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ವಾಹನಗಳನ್ನು ಮೌಲ್ಯಮಾಪನ ಮಾಡಬಹುದು.

ಹೆಚ್ಚುವರಿಯಾಗಿ ಮಾರಾಟದ ನಂತರದ ಸೇವೆಯ ಕಡೆಗೆ ನಿಜವಾದ ಟೊಯೊಟಾ ಗ್ರಾಹಕ ಕೇಂದ್ರಿತ ವಿಧಾನವನ್ನು ಪ್ರದರ್ಶಿಸುತ್ತದೆ. ಟಿಯುಸಿಒ ಪ್ರಮಾಣೀಕರಿಸಿದ ಬಳಸಿದ ಕಾರುಗಳಿಗೆ ದೇಶಾದ್ಯಂತ ಯಾವುದೇ ಟೊಯೊಟಾ ಸೇವಾ ಕೇಂದ್ರಗಳಲ್ಲಿ 30,000 ಕಿ.ಮೀ, ಅಥವಾ 2 ವರ್ಷಗಳು ಮತ್ತು 3 ಉಚಿತ ಸೇವೆಗಳ ವಾರಂಟಿಯನ್ನು ನೀಡಲಾಗುತ್ತದೆ. ಮಾರಾಟಗಾರರಿಗೆ, ಶಾಂತಿಯುತ ಮತ್ತು ಕಿರಿಕಿರಿ ಇಲ್ಲದ ಮಾರಾಟ ಪ್ರಕ್ರಿಯೆ ಜತೆಗೆ ಟುಕೊ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ನೀಡುತ್ತದೆ.

ಇದನ್ನೂ ಓದಿ: Kannada New Movie: ʻರಮೇಶ್ ಸುರೇಶ್‌ʼ ಸಿನಿಮಾದಲ್ಲಿ ಇಬ್ಬರು ನಿರ್ದೇಶಕರು, ಇಬ್ಬರು ನಾಯಕರು ; ಜೂನ್ 21ರಂದು ತೆರೆಗೆ!

ಈ ಕುರಿತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ತಕಾಶಿ ತಕಾಮಿಯಾ ಮಾತನಾಡಿ, ಯೂಸ್ಡ್ ಕಾರ್ ಬ್ಯುಸಿನೆಸ್ ಭಾರತದಲ್ಲಿ ಟೊಯೊಟಾದ ಒಟ್ಟಾರೆ ವ್ಯವಹಾರ ಮತ್ತು ಬೆಳವಣಿಗೆಯ ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭವಾಗಿದೆ. ಇದು ‘ಮೊಬಿಲಿಟಿ ಫಾರ್ ಆಲ್ ‘ ಎಂಬ ನಮ್ಮ ದೃಷ್ಟಿಕೋನದೊಂದಿಗೆ ನಿಕಟವಾಗಿ ಹೊಂದಿಕೆಯಾಗಿದೆ. ಆದ್ದರಿಂದ ನವದೆಹಲಿಯಲ್ಲಿ ನಮ್ಮ ಮೊದಲ ಯೂಸ್ಡ್ ಕಾರ್ ಔಟ್ಲೆಟ್ ಉದ್ಘಾಟನೆಯೊಂದಿಗೆ ಟಿಯುಸಿಒದ ವಿಸ್ತರಣೆಯು ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಗ್ರಾಹಕರ ತೃಪ್ತಿಗೆ ನಮ್ಮ ಸಮರ್ಪಣೆಗೆ ಉದಾಹರಣೆಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಹೊಸ ಮಳಿಗೆಯು ಟೊಯೊಟಾ ಉತ್ಪನ್ನಗಳಿಗೆ ಸಮಾನಾರ್ಥಕವಾದ ಮಾನದಂಡಗಳನ್ನು ಮತ್ತು ನಮ್ಮ ಬೆಂಚ್ ಮಾರ್ಕ್ ಸೇವಾ ಅನುಭವವನ್ನು ಎತ್ತಿಹಿಡಿಯುತ್ತದೆ.

ಭಾರತೀಯ ಬಳಸಿದ ಕಾರು ಮಾರುಕಟ್ಟೆಯು ಶೇ.8% ಸಿಎಜಿಆರ್‌ ನಷ್ಟು ಬೆಳೆಯುತ್ತಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಹೊಸ ಕಾರು ಮಾರುಕಟ್ಟೆಯ ಗಾತ್ರಕ್ಕಿಂತ 1.3 ಪಟ್ಟು ದೊಡ್ಡದಾಗಿದೆ. ಈ ವಲಯವು ಗಮನಾರ್ಹ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿದೆ. ದೆಹಲಿಯಲ್ಲಿ ಟೊಯೊಟಾ ಕಂಪನಿಯ ಒಡೆತನದ ಮಳಿಗೆಯ ನಮ್ಮ ಇತ್ತೀಚಿನ ವಿಸ್ತರಣೆ ಮತ್ತು ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಮಳಿಗೆಗಳನ್ನು ನಿರ್ಮಿಸಲು ಚಿಂತಿಸಿದೆ.

ನಮ್ಮ ಗ್ರಾಹಕರಿಗೆ ತಡೆರಹಿತ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಬಳಸಿದ ಕಾರು ಮಾರುಕಟ್ಟೆಯನ್ನು ರಚಿಸುವ ಟಿಕೆಎಂನ ಕಾರ್ಯತಂತ್ರವನ್ನು ನಗರಗಳು ಒತ್ತಿಹೇಳುತ್ತವೆ. ಗುಣಮಟ್ಟ ಮತ್ತು ಸುರಕ್ಷತೆ-ಕೇಂದ್ರಿತ ನವೀಕರಣಕ್ಕೆ ಒತ್ತು ನೀಡುತ್ತವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಯೋಜನಾ ಉಪಾಧ್ಯಕ್ಷ ಅತುಲ್ ಸೂದ್ ಮಾತನಾಡಿ, ನವದೆಹಲಿ ಟಿಯುಸಿಒ ಸೌಲಭ್ಯವನ್ನು ತೆರೆಯುವುದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಮಹತ್ವದ ಮೈಲಿಗಲ್ಲಾಗಿದೆ. ಯೂಸ್ಡ್ ಕಾರ್ ಮಾರುಕಟ್ಟೆಯಲ್ಲಿ ನಮ್ಮ ಹೆಜ್ಜೆ ಗುರುತನ್ನು ವಿಸ್ತರಿಸಲು ನಾವು ರೋಮಾಂಚನ ಗೊಂಡಿದ್ದೇವೆ, ಗ್ರಾಹಕರಿಗೆ ತಮ್ಮ ಟೊಯೊಟಾ ಕಾರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ವಿಶ್ವಾಸಾರ್ಹ ಮತ್ತು ಪಾರದರ್ಶಕ ಅನುಭವವನ್ನು ಒದಗಿಸುತ್ತದೆ, ಎಲ್ಲಾ ಮೌಲ್ಯವರ್ಧಿತ ಸೇವೆಗಳಿಗೆ ಒಂದೇ ಸೂರಿನಡಿ ಪರಿಹಾರವನ್ನು ನೀಡುತ್ತದೆ.

ಪ್ರತಿ ಪೂರ್ವ ಮಾಲಿಕತ್ವದ (ಯೂಸ್ಡ್ ಕಾರ್) ವಾಹನವು ನಮ್ಮ ವಿಶೇಷ ಕೇಂದ್ರಗಳಲ್ಲಿ ಟೊಯೊಟಾ ಜೆನ್ಯೂನ್ ಪಾರ್ಟ್ಸ್‌ಗಳನ್ನು ಬಳಸಿಕೊಂಡು ನಮ್ಮ ತಂತ್ರಜ್ಞರಿಂದ ನವೀಕರಣಕ್ಕೆ ಒಳಗಾಗುತ್ತದೆ. ಜಾಗತಿಕ ಟೊಯೊಟಾ ಮಾನದಂಡಗಳಿಗೆ ಅನುಗುಣವಾಗಿ ಸಮಗ್ರ 203-ಅಂಶಗಳ ತಪಾಸಣೆಯನ್ನು ನಡೆಸಲಾಗುತ್ತದೆ, ಇದು ಉತ್ತಮ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ. ಈ ಬದ್ಧತೆಯನ್ನು ಟೊಯೊಟಾದ ತೊಂದರೆ ಮುಕ್ತ ಮಾರಾಟದ ನಂತರದ ಸೇವಾ ಬೆಂಬಲದ ಖಾತರಿಯಿಂದ ಮತ್ತಷ್ಟು ಬಲಪಡಿಸಲಾಗಿದೆ, ಇದು ತಡೆರಹಿತ ಮತ್ತು ಸಂತೋಷದಾಯಕ ಮಾಲೀಕತ್ವದ ಅನುಭವವನ್ನು ಖಚಿತಪಡಿಸುತ್ತದೆ.

ಇದನ್ನೂ ಓದಿ: Raja Rani Show: ಇಂದಿನಿಂದ ʻರಾಜ ರಾಣಿ ರೀಲೋಡೆಡ್ʼ ರಿಯಾಲಿಟಿ ಶೋ ಶುರು!

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ 2022 ರಲ್ಲಿ ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆಯನ್ನು ಉದ್ಘಾಟಿಸುವ ಮೂಲಕ 2022 ರಲ್ಲಿ ಬಳಸಿದ ಯೂಸ್ಡ್ ಕಾರ್ ಮಾರುಕಟ್ಟೆಗೆ ಕಾಲಿಟ್ಟಿತು. ಇದು ಟಿಕೆಎಂ ಅನ್ನು ಗ್ರಾಹಕರಿಗೆ ಸಂಪೂರ್ಣ ಒಇಎಂ (ಮೂಲ ಉಪಕರಣ ತಯಾರಕ) ನವೀಕರಿಸಿದ ಬಳಸಿದ ಕಾರುಗಳನ್ನು ನೀಡುವ ಭಾರತದ ಮೊದಲ ವಾಹನ ತಯಾರಕ ಕಂಪನಿಯನ್ನಾಗಿ ಮಾಡಿದೆ.

Continue Reading

ಆಟೋಮೊಬೈಲ್

Mahindra Discount Offers: ಎಕ್ಸ್‌ಯುವಿ 700, 400 ಇವಿ ಮತ್ತು ಸ್ಕಾರ್ಪಿಯೋ ಮೇಲೆ ಭರ್ಜರಿ ರಿಯಾಯಿತಿ!

2023ರಲ್ಲಿ ತಯಾರಿಸಲಾದ ಎಕ್ಸ್ ಯುವಿ 400 ಇವಿ, ಎಕ್ಸ್ ಯುವಿ 700 ಮತ್ತು ಸ್ಕಾರ್ಪಿಯೋ ಎನ್ ನಂತಹ ಮಾದರಿಗಳು ಕಳೆದ ತಿಂಗಳಂತೆಯೇ ಗಣನೀಯ ಉಳಿತಾಯದೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮಹೀಂದ್ರ ಎಸ್‌ಯುವಿಗಳಲ್ಲಿ ಲಭ್ಯವಿರುವ ರಿಯಾಯಿತಿಗಳ (Mahindra Discount Offers) ವಿವರ ಇಲ್ಲಿದೆ.

VISTARANEWS.COM


on

By

Mahindra Discount Offers
Koo

ಹೊಸ ವರ್ಷ ಬಂದು ಆರು ತಿಂಗಳಾದರೂ ಮಹೀಂದ್ರಾದ (Mahindra) 2023ರ ಕೆಲವು ಮಾದರಿಗಳು (2023 models) ಸ್ಟಾಕ್‌ನಲ್ಲಿ (stock) ಉಳಿದಿವೆ. ಈ ದಾಸ್ತಾನು ತೆರವುಗೊಳಿಸಲು ಬ್ರ್ಯಾಂಡ್ ಗಮನಾರ್ಹ ರಿಯಾಯಿತಿ ಮತ್ತು ವಿಶೇಷ ಪ್ರಯೋಜನಗಳನ್ನು (Mahindra Discount Offers) ನೀಡುವುದಾಗಿ ಘೋಷಿಸಿದೆ.

2023ರಲ್ಲಿ ತಯಾರಿಸಲಾದ ಎಕ್ಸ್ ಯುವಿ 400 ಇವಿ, ಎಕ್ಸ್ ಯುವಿ 700 ಮತ್ತು ಸ್ಕಾರ್ಪಿಯೋ ಎನ್‌ನಂತಹ ಮಾದರಿಗಳು ಕಳೆದ ತಿಂಗಳಂತೆಯೇ ಗಣನೀಯ ಉಳಿತಾಯದೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮಹೀಂದ್ರ ಎಸ್‌ಯುವಿಗಳಲ್ಲಿ ಲಭ್ಯವಿರುವ ರಿಯಾಯಿತಿಗಳ ವಿವರ ಇಲ್ಲಿದೆ.

ಮಹೀಂದ್ರ ಎಕ್ಸ್ ಯುವಿ 700

ಮಹೀಂದ್ರಾ ಎಕ್ಸ್ ಯುವಿ 700 ಖರೀದಿಯ ಮೇಲೆ 1.5 ಲಕ್ಷ ರೂ.ವರೆಗೆ ರಿಯಾಯಿತಿಗಳನ್ನು ನೀಡುವುದನ್ನು ಮುಂದುವರೆಸಿದೆ. ಎಎಕ್ಸ್ 5 7-ಸೀಟರ್ ಡೀಸೆಲ್-ಎಂಟಿ, ಡೀಸೆಲ್-ಎಟಿ ಮತ್ತು ಪೆಟ್ರೋಲ್-ಎಂಟಿ ರೂಪಾಂತರಗಳನ್ನು ಹೊರತುಪಡಿಸಿ ಎಲ್ಲಾ ರೂಪಾಂತರಗಳು 1.5 ಲಕ್ಷ ರೂ. ವರೆಗೆ ಫ್ಲಾಟ್ ನಗದು ರಿಯಾಯಿತಿಯನ್ನು ಘೋಷಿಸಲಾಗಿದೆ.

1.3 ಲಕ್ಷ ರಿಯಾಯಿತಿಯೊಂದಿಗೆ ಎಕ್ಸ್ ಯುವಿ 700 ಟಾಟಾ ಸಫಾರಿ ಮತ್ತು ಎಮ್ ಜಿ ಹೆಕ್ಟರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿದೆ. ಇದರಲ್ಲಿ ಎಂಜಿನ್ ಆಯ್ಕೆಗಳೊಂದಿಗೆ ಹಲವು ವೈಶಿಷ್ಟ್ಯಗಳಿವೆ.

2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅಥವಾ 2.2 ಲೀಟರ್ ಟರ್ಬೊ- ಡೀಸೆಲ್ ಎಂಜಿನ್. ಎಕ್ಸ್ ಯುವಿ 700 ಎಕ್ಸ್ ಶೋ ರೂಂ ಬೆಲೆಗಳು 13.99 ಲಕ್ಷದಿಂದ ರೂ 27.14 ಲಕ್ಷ ರೂ. ವರೆಗೆ ಇದೆ.

ಮಹೀಂದ್ರ ಎಕ್ಸ್ ಯುವಿ 400

2023ರ ಹೆಚ್ಚಿನ ಮಹೀಂದ್ರಾ ಎಕ್ಸ್ ಯುವಿ 400 ಇವಿ ರೂಪಾಂತರಗಳಲ್ಲಿ 4.4 ಲಕ್ಷ ರೂ. ವರೆಗಿನ ರಿಯಾಯಿತಿಗಳು ಲಭ್ಯವಿದೆ. ಅದರ ದೊಡ್ಡ 39.4ಕೆ ಡಬ್ಲ್ಯೂ ಹೆಚ್ ಬ್ಯಾಟರಿ, 7.2ಕೆ ಡಬ್ಲ್ಯೂ ವೇಗದ ಚಾರ್ಜರ್ ಮತ್ತು ಇಎಸ್ ಸಿ ನೊಂದಿಗೆ ಹೆಚ್ಚಿನ-ಸ್ಪೆಕ್ ಇಎಲ್ ರೂಪಾಂತರವು 3.4 ಲಕ್ಷ ರೂ. ಗಳ ರಿಯಾಯಿತಿಯನ್ನು ಹೊಂದಿದೆ. ಎಕ್ಸ್ ಯುವಿ ಎಕ್ಸ್ ಯುವಿ 400 ಬೆಲೆಯು 15.49 ಲಕ್ಷ ಮತ್ತು 17.49 ಲಕ್ಷ ರೂ.ಗಳ ನಡುವೆ ಮತ್ತು ಇಸಿ ಮತ್ತು ಇಎಲ್ ಟ್ರಿಮ್‌ಗಳಲ್ಲಿ ಲಭ್ಯವಿದೆ.

ಮಹೀಂದ್ರ ಸ್ಕಾರ್ಪಿಯೋ ಎನ್

ಮಹೀಂದ್ರಾ ಸ್ಕಾರ್ಪಿಯೊ ಎನ್ ಉನ್ನತ-ಸ್ಪೆಕ್ ಝೆಡ್ 8 ಮತ್ತು ಟಾಪ್-ಸ್ಪೆಕ್ ಝೆಡ್ 8 ಎಲ್ ರೂಪಾಂತರಗಳಿಗೆ 1 ಲಕ್ಷ ರೂ. ವರೆಗೆ ರಿಯಾಯಿತಿಗಳನ್ನು ನೀಡುತ್ತದೆ. 4ಡಬ್ಲ್ಯೂ ಡಿ ಡೀಸೆಲ್ ರೂಪಾಂತರಗಳು 1 ಲಕ್ಷ ರೂ. ವರೆಗೆ ನಗದು ರಿಯಾಯಿತಿಯನ್ನು ಹೊಂದಿದ್ದರೆ, 2ಡಬ್ಲ್ಯೂ ಡಿ ಪೆಟ್ರೋಲ್ ಮತ್ತು ಡೀಸೆಲ್ ಟ್ರಿಮ್‌ಗಳು 60,000 ರೂ.ವರೆಗೆ ರಿಯಾಯಿತಿಯನ್ನು ನೀಡುತ್ತವೆ.

ಇದನ್ನೂ ಓದಿ: Upcoming Vehicles: ಈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿರುವ ಹೊಸ ಕಾರು, ಬೈಕ್‌ಗಳಿವು!

ಟಾಟಾ ಸಫಾರಿ, ಮಹೀಂದ್ರಾ ಎಕ್ಸ್‌ಯುವಿ700, ಎಂಜಿ ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಾಜರ್‌ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುವ ಇದರ ಎಕ್ಸ್-ಶೋರೂಂ ಬೆಲೆಗಳು 13.60 ಲಕ್ಷದಿಂದ 24.54 ಲಕ್ಷ ರೂ. ವರೆಗೆ ಇರುತ್ತದೆ.

Continue Reading
Advertisement
Hassan Ali
ದೇಶ5 hours ago

Hassan Ali: ರಿಯಾಸಿ ಉಗ್ರರ ದಾಳಿ ಖಂಡಿಸಿದ ಪಾಕ್‌ ಕ್ರಿಕೆಟಿಗ ಹಸನ್‌ ಅಲಿ; ಆಲ್‌ ಐಸ್‌ ಆನ್‌ ವೈಷ್ಣೋದೇವಿ ಎಂದಿದ್ದೇಕೆ?

IND vs USA
ಪ್ರಮುಖ ಸುದ್ದಿ5 hours ago

IND vs USA: ಅರ್ಶದೀಪ್​ ಮಾರಕ ದಾಳಿಗೆ ಪತರುಗುಟ್ಟಿದ ಅಮೆರಿಕ; ಟೀಮ್​ ಇಂಡಿಯಾ ಸೂಪರ್​-8 ಪ್ರವೇಶ

disqualification for hanawala Gram Panchayat Vice President and Cancellation of membership ordered
ಕರ್ನಾಟಕ5 hours ago

Koppala News: ಹಣವಾಳ ಗ್ರಾ.ಪಂ ಉಪಾಧ್ಯಕ್ಷೆಗೆ ಅನರ್ಹತೆಯ ಶಿಕ್ಷೆ; ಸದಸ್ಯತ್ವ ರದ್ದುಗೊಳಿಸಿ ಆದೇಶ

Court Order
ದೇಶ6 hours ago

ಬಾಲಕಿಯ ಒಳ ವಸ್ತ್ರ ಕಳಚಿ ಬೆತ್ತಲೆಗೊಳಿಸುವುದು ಅತ್ಯಾಚಾರ ಯತ್ನವಲ್ಲ ಎಂದ ಹೈಕೋರ್ಟ್! ನಿಮ್ಮ ಅಭಿಪ್ರಾಯವೇನು?

Virat Kohli
ಕ್ರೀಡೆ6 hours ago

Virat Kohli: ಟಿ20 ವಿಶ್ವಕಪ್​ನಲ್ಲಿ ಮೊದಲ ಗೋಲ್ಡನ್​ ಡಕ್ ಸಂಕಟಕ್ಕೆ ಸಿಲುಕಿದ ವಿರಾಟ್​ ಕೊಹ್ಲಿ

Mumbai
ಪ್ರಮುಖ ಸುದ್ದಿ7 hours ago

300 ಕೋಟಿ ರೂ. ಆಸ್ತಿಗಾಗಿ 1 ಕೋಟಿ ರೂ. ಸುಪಾರಿ ಕೊಟ್ಟು ಮಾವನನ್ನೇ ಕೊಲ್ಲಿಸಿದ ದುಷ್ಟ ಸೊಸೆ!

ICC T20 Rankings
ಕ್ರೀಡೆ7 hours ago

ICC T20 Rankings: ಅಗ್ರಸ್ಥಾನದಲ್ಲೇ ಮುಂದುವರಿದ ಟೀಮ್​ ಇಂಡಿಯಾ; ಕುಸಿತ ಕಂಡ ಪಾಕ್

Rain News
ಪ್ರಮುಖ ಸುದ್ದಿ7 hours ago

Rain News: ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಳೆ ಆರ್ಭಟ; ಕೆರೆಯಂತಾದ ರಸ್ತೆಗಳು!

Chellagurki Shri Yerrithathanavara Maharathotsava in Ballari
ಧಾರ್ಮಿಕ7 hours ago

Ballari News: ಭಕ್ತಿ ಭಾವದಿಂದ ನಡೆದ ಚೇಳ್ಳಗುರ್ಕಿ ಶ್ರೀ ಎರ‍್ರಿತಾತ ಮಹಾರಥೋತ್ಸವ

Narendra Modi
ದೇಶ8 hours ago

Narendra Modi: ಆಂಧ್ರದಲ್ಲಿ ಮೆಗಾ ಸ್ಟಾರ್‌, ಪವರ್‌ ಸ್ಟಾರ್‌ ಜತೆ ‘ಪೊಲಿಟಿಕಲ್‌ ಸ್ಟಾರ್’‌ ಮೋದಿ; Video ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌