Site icon Vistara News

Malavalli Election Results : ಮಳವಳ್ಳಿಯಲ್ಲಿ ಕಾಂಗ್ರೆಸ್​ ಪಕ್ಷದ ನರೇಂದ್ರ ಸ್ವಾಮಿಗೆ ಜಯ

Malavalli Election Results Narendra Swamy Winner

#image_title

ಮಳವಳ್ಳಿ: ಮಂಡ್ಯ ಜಿಲ್ಲೆ ಮಳವಳ್ಳಿ (Malavalli Election Results) ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​​ನ ಪಿಎಂ ನರೇಂದ್ರ ಸ್ವಾಮಿ (105413) 46335 ಮತಗಳ ಅಂತರದಿಂದ ಜೆಡಿಎಸ್​ನ ಕೆ. ಅನ್ನದಾನಿ (59078) ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. .

ಜಿಲ್ಲೆಯ ಏಕೈಕ ಮೀಸಲು (ಎಸ್‌ಸಿ) ಕ್ಷೇತ್ರವಾದ ಮಳವಳ್ಳಿಯಲ್ಲಿ ಕಳೆದ ಬಾರಿ ಜೆಡಿಎಸ್‌ನ ಡಾ ಕೆ. ಅನ್ನದಾನಿ 1,03,0,38 ಮತ್ತು ಕಾಂಗ್ರೆಸ್‌ನ ನರೇಂದ್ರಸ್ವಾಮಿ 76,278 ಮತ ಪಡೆದಿದ್ದರು. ಗೆಲುವಿನ ಅಂತರ- 26760 ಮತ ಆಗಿದ್ದವು.

ಇದನ್ನೂ ಓದಿ: Karnataka Election 2023: ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ‌ ಕಾಂಗ್ರೆಸ್‌ ನಾಯಕರ ಮತದಾನ; ಇಲ್ಲಿವೆ ಫೋಟೊಗಳು

ಸತತ ಎರಡು ಬಾರಿ ಸೋಲಿನಿಂದ ಕಂಗೆಟ್ಟಿದ್ದ ಅನ್ನದಾನಿ ಅವರು ಕಳೆದ ಬಾರಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ನರೇಂದ್ರ ಸ್ವಾಮಿ 2008 ಮತ್ತು 2013ರಲ್ಲಿ ನಿರಂತರವಾಗಿ ಗೆದ್ದಿದ್ದರು. ಮಳವಳ್ಳಿ ಕ್ಷೇತ್ರದಲ್ಲಿ ಒಟ್ಟು 235,385 ಮತದಾರರಿದ್ದಾರೆ. ಇವರಲ್ಲಿ ಪುರುಷರ ಸಂಖ್ಯೆ 118,916 ಇದ್ದರೆ ಸ್ತ್ರೀಯರ ಸಂಖ್ಯೆ 116,452 ಇದೆ.

Exit mobile version