Site icon Vistara News

Govt School: ಕಾಸರಗೋಡು ಸರ್ಕಾರಿ ಶಾಲೆಯಲ್ಲಿ ಕನ್ನಡಕ್ಕೆ ಮಲಯಾಳಂ ಶಿಕ್ಷಕಿ ನೇಮಕ; ಕೇರಳ ಕ್ಯಾತೆಗೆ ಸಿಡಿದೆದ್ದ ಕನ್ನಡಿಗರು!

Kasargod government school

ಮಂಗಳೂರು: ಗಡಿನಾಡ ಸರ್ಕಾರಿ ಶಾಲೆಗಳಲ್ಲಿ (Govt School) ಮತ್ತೆ ಕನ್ನಡ ಭಾಷೆಗೆ ಆಪತ್ತು ಎದುರಾಗಿದೆ. ಕನ್ನಡ ಮಕ್ಕಳ ಶಾಲೆಗಳಿಗೆ ಮಲಯಾಳಂ ಶಿಕ್ಷಕರ ನೇಮಿಸಿ ಉದ್ಧಟತನ ಮೆರೆಯಲಾಗಿದೆ. ಗಡಿನಾಡ ಕನ್ನಡಿಗರ ಮೇಲೆ ಕೇರಳ ಸರ್ಕಾರದಿಂದ ಮತ್ತೆ ಗದಾ ಪ್ರಹಾರ ಮಾಡಿರುವುದಕ್ಕೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಂಗಳೂರು ಗಡಿ ಭಾಗದ ಕೇರಳದ ಕಾಸರಗೋಡಿನ ಅಡೂರಿನ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಈ ದುಸ್ಥಿತಿ ಎದುರಾಗಿದೆ. ಅಡೂರು ಶಾಲೆಗೆ ಕನ್ನಡ ಕಲಿಸಲು ಮಲಯಾಳಂ ಶಿಕ್ಷಕಿಯನ್ನು ನೇಮಕ ಮಾಡಲಾಗಿದೆ. ಇದರಿಂದ ಮಕ್ಕಳ ಕಲಿಕೆ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಮಕ್ಕಳ ಜತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಪೋಷಕರು

ಇದನ್ನೂ ಓದಿ: BBMP Election : ವಾರ್ಡ್‌ ಮರುವಿಂಗಡಣೆಗೆ 3 ತಿಂಗಳು ಟೈಮ್‌ ಕೊಟ್ಟ ಹೈಕೋರ್ಟ್‌, ಬಿಬಿಎಂಪಿ ಚುನಾವಣೆ ಸದ್ಯಕ್ಕಿಲ್ಲ!

ಹೀಗಾಗಿ ಈ ಶಿಕ್ಷಕಿಯನ್ನು ಬದಲಾಯಿಸಿ ಕನ್ನಡ ಬರುವ ಶಿಕ್ಷಕರನ್ನು ನೇಮಿಸಿ ಎಂದು ಮಕ್ಕಳು ಹಾಗೂ ಪೋಷಕರು ಹಲವಾರು ಬಾರಿ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ಇದಕ್ಕೆ ಕೇರಳ ಸರ್ಕಾರ ಸೊಪ್ಪು ಹಾಕುತ್ತಿಲ್ಲ. ಏನೇ ಮಾಡಿದರೂ ಮಲಯಾಳಂ ಶಿಕ್ಷಕಿಯನ್ನು ಬದಲಾಯಿಸಲು ಒಪ್ಪುತ್ತಿಲ್ಲ.

ಶಿಕ್ಷಕರ ಜತೆ ವಾಗ್ವಾದಲ್ಲಿ ತೊಡಗಿರುವ ವಿದ್ಯಾರ್ಥಿಗಳು

ಕನ್ನಡ ಕಲಿಕೆಗೆ ಕನ್ನಡದ ಶಿಕ್ಷಕರನ್ನೇ ನೇಮಕ ಮಾಡಿ ಎಂದು ಹಲವು ಬಾರಿ ಶಿಕ್ಷಣ ಇಲಾಖೆ ಮೂಲಕ ಕೇರಳ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಇದಕ್ಕೆ ಕಿವಿಗೊಡದೆ ಈಗ ಮಲಯಾಳಂ ಶಿಕ್ಷಕಿಯನ್ನೇ ನೇಮಕ ಮಾಡಿ ಆದೇಶಿಸಲಾಗಿರುವುದು ಟೀಕೆಗೆ ಗುರಿಯಾಗಿದೆ.

ಕನ್ನಡದ ಗಂಧಗಾಳಿ ಗೊತ್ತಿಲದ ಶಿಕ್ಷಕಿಯಿಂದ ಮಕ್ಕಳಿಗೆ ಕನ್ನಡ ಪಾಠ ಮಾಡಲಾಗುತ್ತಿದೆ. ಹೀಗಾಗಿ ಮಕ್ಕಳು ಸಹ ನೋಡುವಷ್ಟು ನೋಡಿ, ಪಾಠ ಅರ್ಥವಾಗದೇ ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಕೇರಳ ಸರ್ಕಾರದ ನಡೆಯ ವಿರುದ್ಧ ಪೋಷಕರು ಗರಂ ಆಗಿದ್ದು, ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಕೇರಳದ ಕಾಸರಗೋಡಿನ ಅಡೂರು ಶಾಲೆಯ ದುಸ್ಥಿತಿ

ಇದನ್ನೂ ಓದಿ: Monsoon News: ಮುಂಗಾರು ಚುರುಕು, ರಾಜಧಾನಿ ಕೂಲ್‌ ಕೂಲ್

ಕಾನೂನಿಲ್ಲೇ ಅವಕಾಶ ಇದ್ದರೂ ಕ್ಯಾತೆ!

ಇದು ಸ.ಹಿ.ಪ್ರಾ.ಶಾಲೆ ಕಾಸರಗೋಡು ಸಿನಿಮಾ ಹೋಲುವ ಮತ್ತೊಂದು ಸ್ಟೋರಿ ಎಂದರೂ ತಪ್ಪಾಗಲಾರದು ಎಂಬಂತಹ ಸ್ಥಿತಿ ಬಂದೊದಗಿದೆ. ಕಾಸರಗೋಡು ಕೇರಳಕ್ಕೆ ಸೇರಿದರೂ ಕನ್ನಡ ಭಾಷಿಕರೇ ಹೆಚ್ಚಿರುವ ಪ್ರದೇಶವಾಗಿದೆ. ಕರ್ನಾಟಕದ ಗಡಿಯಾಗಿರುವ ಕಾರಣ ಇಲ್ಲಿ ಕನ್ನಡದಲ್ಲೂ ಶಿಕ್ಷಣ ನೀಡಬೇಕು ಎಂಬ ನಿಯಮವಿದೆ. ಹೀಗಾಗಿ ಇಲ್ಲಿ ಕನ್ನಡ ಮಾಧ್ಯಮ ಪಾಠಗಳು ಹತ್ತನೇ ತರಗತಿಯವರೆಗೆ ನಡೆಯುತ್ತದೆ.

ಕನ್ನಡ ಭಾಷೆ ಬಲ್ಲ ಶಿಕ್ಷಕರೇ ಎಲ್ಲ ಪಾಠಗಳನ್ನು ಮಕ್ಕಳಿಗೆ ಕಲಿಸುತ್ತಾ ಬಂದಿದ್ದಾರೆ. ಈ ಮಧ್ಯೆ ಪ್ರೌಢಶಾಲೆಯ ಕನ್ನಡ ವಿಷಯಕ್ಕೆ ಮಲಯಾಳಂ ಶಿಕ್ಷಕಿಯನ್ನು ನೇಮಿಸಿ ಕೇರಳ ಸರ್ಕಾರ ಉದ್ದಟತನ ಪ್ರದರ್ಶಿಸಿರುವುದು ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಕಾಸರಗೋಡಿನಲ್ಲಿ ಕನ್ನಡ ವಿಭಾಗದಲ್ಲಿ ಶಾಲೆಗಳಿಗೆ ಶಿಕ್ಷಕರ ನೇಮಕಕ್ಕೆ 2015ರಲ್ಲಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಕಾಸರಗೋಡಿನ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕ ಕಡ್ಡಾಯ ಮಾಡಲಾಗಿದೆ. ಹೀಗಿದ್ದರೂ ಮತ್ತೆ ಮತ್ತೆ ಮಲಯಾಳಿಗಳನ್ನು ನೇಮಿಸಿ ಅಲ್ಲಿನ ಸರ್ಕಾರ ದೌರ್ಜನ್ಯ ಎಸಗುತ್ತಿದೆ.

ಇದನ್ನೂ ಓದಿ: ಹಿಂದು ಹುಡುಗನ ಕುತ್ತಿಗೆಗೆ ಬೆಲ್ಟ್​​ ಕಟ್ಟಿ, ನಾಯಿಯಂತೆ ನಡೆಸಿಕೊಂಡ ಮುಸ್ಲಿಮರು; ಮನೆ ಧ್ವಂಸಕ್ಕೆ ಹೊರಟ ಬುಲ್ಡೋಜರ್​

ಕಾನೂನು ಹೋರಾಟಕ್ಕೆ ನಿರ್ಧಾರ

ಸದ್ಯ ಅಸಮಾಧಾನಗೊಂಡ ಪೋಷಕರು ಕಾನೂನು ಹೋರಾಟ ಮಾಡಲು ನಿರ್ಧಾರ ಮಾಡಿದ್ದಾರೆ. ಕೇರಳ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಪೋಷಕರು ನಿರ್ಧಾರ ಮಾಡಿದ್ದಾರೆನ್ನಲಾಗಿದೆ. ಈಗ ಬಂದಿರುವ ಮಲಯಾಳಂ ಶಿಕ್ಷಕರು ಹತ್ತು ತಿಂಗಳು ಕನ್ನಡ ತರಬೇತಿ ಪಡೆದು ಬಂದಿದ್ದಾರೆನ್ನಲಾಗಿದೆ. ಹೀಗಾಗಿ ಕನ್ನಡ ಶಿಕ್ಷಕರ ನೇಮಕಾತಿ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಲಾಗಿದೆ.

Exit mobile version