Site icon Vistara News

Malleshwaram Election Results : ಮಲ್ಲೇಶ್ವರ ಕ್ಷೇತ್ರದಲ್ಲಿ ಮಾಜಿ ಸಚಿವ ಅಶ್ವತ್ಥ್​ ನಾರಾಯಣಗೆ ಗೆಲುವು

malleshwaram-election-results-dr-ashwath-narayan-c-n

#image_title

ಬೆಂಗಳೂರು: ಮೂಲ ಬೆಂಗಳೂರು ಎಂದು ಕರೆಸಿಕೊಳ್ಳುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಹಾಗೂ ಮಾಜಿ ಸಚಿನ ಅಶ್ವತ್ಥನಾರಾಯಣ (Dr Ashwath Narayan)ಬೃಹತ್​ ವಿಜಯ ಸಾಧಿಸಿದ್ದಾರೆ. ಅವರು 50186 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್​​ನ ಅನೂಪರ್​ ಅಯ್ಯಂಗಾರ್ ವಿರುದ್ಧ 26031 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಮಾಜಿ ಸಚಿವ ಅಶ್ವತ್ಥನಾರಾಯಣ (83130 ಮತ) ಅವರು ಕಾಂಗ್ರೆಸ್​ನ ಕೆಂಗಲ್​ ಶ್ರಿಪಾದರೇಣು (29130 ಮತಗಳು) ವಿರುದ್ಧ ಬೃಹತ್​ ಅಂತರದ ವಿಜಯ ಸಾಧಿಸಿದ್ದರು.

2008ರಲ್ಲಿ ಈ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಬದಲಾಗಿತ್ತು. 2008ರಲ್ಲಿ ಮೊದಲು ಬಾರಿಗೆ ಅಶ್ವತ್ಥನಾರಾಯಣ ಅವರು ಗೆಲುವು ಸಾಧಿಸಿದ್ದರು. 2013ರಲ್ಲಿ ಅಶ್ವತ್ಥನಾರಾಯಣ ಅವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ನಿಂತವರು ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ ಅವರ ವಿರುದ್ಧವೂ ಅಶ್ವತ್ಥನಾರಾಯಣ ಅವರು ಗೆಲುವು ಸಾಧಿಸಿದ್ದರು.

ಇದನ್ನೂ ಓದಿ : Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಚಾಮರಾಜನಗರದಲ್ಲಿ ಸೋಮಣ್ಣಗೆ ಸೋಲು

ಮಲ್ಲೇಶ್ವರದಲ್ಲಿ ಬ್ರಾಹ್ಮಣರು ಹಾಗೂ ಒಕ್ಕಲಿಗರೇ ನಿರ್ಣಾಯಕವಾಗಿದ್ದಾರೆ. ಬ್ರಾಹ್ಮಣ ಮತದಾರರು 55,000, ಒಕ್ಕಲಿಗ ಮತದಾರರು 41,000, ಪರಿಶಿಷ್ಟ ಜಾತಿ/ಪಂಗಡದ 33,500, ಒಬಿಸಿ ಮತದಾರರು 15,000, ಇತರರು 18500 ಇದ್ದಾರೆ. ಅಂದಗಾಗಿ 1952ರಲ್ಲಿ ಕಾಂಗ್ರೆಸ್​ ಗೆದ್ದ ಬಳಿಕ 1999ರಲ್ಲಿ ಎಂ ಆರ್ ಸೀತಾರಾಮ್ ಅವರು ಗೆಲ್ಲುವ ತನಕ ಕಾಂಗ್ರೆಸ್​ಗೆ ಅಲ್ಲಿ ನೆಲೆ ಇರಲಿಲ್ಲ. ಇದೀಗ ಮತ್ತೆ ನೆಲೆ ಕಳೆದುಕೊಂಡಿದೆ.

Exit mobile version