Site icon Vistara News

Karnataka Election 2023: ಕಾಂಗ್ರೆಸ್‌ ಟೀಕಿಸುವುದು ಬಿಟ್ಟು ರಾಜ್ಯದ ಭ್ರಷ್ಟಾಚಾರ ಬಗ್ಗೆ ಮೊದಲು ಪ್ರಧಾನಿ ಮೋದಿ ಮಾತನಾಡಲಿ: ಮಲ್ಲಿಕಾರ್ಜುನ ಖರ್ಗೆ

karnataka congress election committee meeting friday

#image_title

ತುಮಕೂರು: ಕರ್ನಾಟಕದಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಏನು ಹೇಳುತ್ತಾರೆ. ಅವರ ಕೈಕೆಳಗೇ ಭ್ರಷ್ಟಾಚಾರ ನಡೆಯುತ್ತಿದೆ. ಇದು ಅವರಿಗೆ ಕಾಣಿಸುತ್ತಿಲ್ಲವಾ? ರಾಜ್ಯದ ಭ್ರಷ್ಟಾಚಾರದ ಬಗ್ಗೆ ಮೊದಲು ಪ್ರಧಾನಿ ಮಾತನಾಡಬೇಕು. 40 ಪರ್ಸೆಂಟ್ ಹೊಡೀರಿ, ಉಳಿದಿದ್ದನ್ನು ನಮಗೆ ಕಳುಹಿಸಿ ಎನ್ನುತ್ತಿದ್ದಾರೆ. ಶೇ.100 ಕೆಲಸ, ಶೇ.100 ಭ್ರಷ್ಟಾಚಾರ. ನಾನು ಹಲವು ಚುನಾವಣೆ (Karnataka Election 2023) ಎದುರಿಸಿದ್ದೇನೆ. ಆದರೆ, ಇಂತಹ ಪ್ರಧಾನಿಯನ್ನು ಎಂದೂ ನೋಡಿಲ್ಲ. ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಟೀಕೆ ಮಾಡುವುದಷ್ಟೇ ಇವರ ಕೆಲಸ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಜಿಲ್ಲೆಯ ಕೊರಟಗೆರೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ʼರಾಜೀವ್‌ ಭವನʼ ಉದ್ಘಾಟನೆ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಇವರಿಗೆ ಅಭಿವೃದ್ಧಿ ಬೇಕಿಲ್ಲ, ಜಾತಿ ಜಾತಿ, ಧರ್ಮ ಧರ್ಮಗಳ ನಡುವೆ ಜಗಳ ತಂದಿಡುತ್ತಾರೆ. ಈ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್‌ನ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.

ನನಗೆ ಛತ್ರಿ ಹಿಡಿದಿಲ್ಲ ಎಂದು ಟೀಕೆ‌ ಮಾಡಿದರು, ನನ್ನ ಬಗ್ಗೆ ಮಾತಾಡುವುದು ಬಿಡಿ. ಆದರೆ, ಅವರೇ ಕರ್ನಾಟಕದಲ್ಲಿ ಭ್ರಷ್ಟಾಚಾರದ ಕಪ್ಪು ಛತ್ರಿ ಕೆಳಗೆ ಇದ್ದಾರೆ. ಕಾಂಗ್ರೆಸ್ ಮಾಡಿದಷ್ಟು ಕೆಲಸದಲ್ಲಿ ಒಂದು ‌ಕೆಲಸವನ್ನೂ ಮೋದಿ‌ ಮಾಡಿಲ್ಲ. ಐಐಟಿ, ಐಐಎಂ, ಎಚ್‌ಎಂಟಿ ಕಟ್ಟಿದ್ದು ಕಾಂಗ್ರೆಸ್. ಒಂದೇ ಒಂದು ಡ್ಯಾಮ್ ಮೋದಿ ಕಟ್ಟಿಲ್ಲ, ಕಟ್ಟಿದ್ದರೆ ಹೇಳಲಿ‌ ನೋಡೋಣ. ಮೋದಿ ಭಾವನೆ ಪ್ರಕಾರ 2014ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ | Lokayukta Raid: ಲೋಕಾಯುಕ್ತ ಬಲಪಡಿಸಿದ್ದೇ ಬಿಜೆಪಿ; ದಾಳಿಯಿಂದ ಪಕ್ಷಕ್ಕೆ ಮುಜುಗರ ಆಗಿಲ್ಲ: ಮಾಡಾಳ್‌ ವಿರೂಪಾಕ್ಷಪ್ಪ ಪ್ರಕರಣಕ್ಕೆ ಬಿಜೆಪಿ ನಾಯಕರ ಪ್ರತಿಕ್ರಿಯೆ

ಕಾಂಗ್ರೆಸ್ ಪಕ್ಷ ದೇವಾಲಯವಿದ್ದಂತೆ, ದೇವಾಲಯವನ್ನು ವೈಯಕ್ತಿಕ ಸಮಾಧಾನಕ್ಕಾಗಿ ಕಟ್ಟುತ್ತಾರೆ. ಎಲ್ಲರನ್ನೂ ಸಮಾನವಾಗಿ ನೋಡುವ ಭವನ ಕಾಂಗ್ರೆಸ್ ಭವನ. ನಮ್ಮ ಹೋರಾಟಗಳು ಬಹಳ ಇವೆ. ಆ ಕಡೆ ನಮ್ಮ‌ ಲಕ್ಷ್ಯ ಹರಿಸುವುದು ಮುಖ್ಯ. ದೇಶದಲ್ಲಿ ಪ್ರಜಾಪ್ರಭುತ್ವ,‌ ಸಂವಿಧಾನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪ್ರಧಾನಿ‌ ಮೋದಿ ನನ್ನ ಮತ ಕ್ಷೇತ್ರದಲ್ಲಿ ಭಾಷಣ ಮಾಡಿ ಹೋಗಿದ್ದಾರೆ. ಅವರು ಪ್ರಧಾ‌ನಿಗಳು, ಸರ್ಕಾರಿ ದುಡ್ಡು, ಸರ್ಕಾರಿ ಕಾರನ್ನು ಬಳಸಿಕೊಂಡಿದ್ದಾರೆ. ಎಲ್ಲವನ್ನೂ ಬಳಸಿಕೊಂಡು ಅಭಿವೃದ್ಧಿಗೊಳಿಸದೆ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಾವು ಸ್ವಾತಂತ್ರ್ಯ ಬಂದಾಗಿನಿಂದ ಸಾವಿರಾರು ಕೆಲಸ ಮಾಡಿದ್ದೇವೆ. ಅನ್ನಕ್ಕೆ ಪರದಾಡುವ ಸಂದರ್ಭದಲ್ಲಿ ಹಸಿರು ಕ್ರಾಂತಿ ಮಾಡಿದ್ದೇವೆ. ಅನ್ನದ ಭಂಡಾರವನ್ನು ಕಾಂಗ್ರೆಸ್ ತುಂಬಿಸಿದೆ. ಅದರಿಂದಲೇ ಉಚಿತ ಅಕ್ಕಿ ಸಿಗುತ್ತಿದೆ. ಕಾಂಗ್ರೆಸ್ ಕಾಲದಲ್ಲಿ ಏನು ಕೆಲಸ ಆಗಿಲ್ಲ ಎಂದು ಮೋದಿ ಟೀಕೆ ಮಾಡುತ್ತಾರೆ, ಪಾಪ ಎಲ್ಲ ಕೆಲಸವನ್ನೂ ಮೋದಿಯೇ ಮಾಡಿದ್ದು ಎಂದು ಅಂದುಕೊಂಡಿದ್ದಾರೆ. ಈ ದೇಶದಲ್ಲಿ ಸೂಜಿ ತಯಾರಾಗುತ್ತಿರಲಿಲ್ಲ, ಆದರೆ, ರಾಕೆಟ್ ಹಾರಿಸುವ ಮಟ್ಟಕ್ಕೆ ಭಾರತ ಕಟ್ಟಿದ್ದು ಕಾಂಗ್ರೆಸ್. ಶೇ.16ರಷ್ಟು ಅಕ್ಷರಸ್ಥರು ಇದ್ದ ದೇಶ ಶೇ.76ರಷ್ಟು ಸಾಕ್ಷರತೆ ಸಾಧಿಸಲು ಕಾರಣ ಕಾಂಗ್ರೆಸ್‌ ಎಂದು ಹೇಳಿದರು.

ಭ್ರಷ್ಟರನ್ನು ರಕ್ಷಣೆ ಮಾಡುತ್ತಾರೆ, ಸಣ್ಣಪುಟ್ಟ ಜನರಿಗೆ ಆದಾಯ ತೆರಿಗೆ ಹಾಕುತ್ತಾರೆ, ನಿಮ್ಮ ಜನರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಿವೆ ಎಂದ ಅವರು, ಇಡಿ, ಐಟಿ ಇಲಾಖೆಯವರು ಏನು ಮಲಗಿದ್ದಾರಾ? ನಾವು ಹೇಳಿದ ಹಾಗೆ ಹೋಗಿ ದಾಳಿ ಮಾಡಿ ಎಂದು ಹೇಳಿದ್ದಾರಾ? ತನಿಖಾ ಸಂಸ್ಥೆಗಳನ್ನು ತೋರಿಸಿ ನಾವು ಗೆದ್ದ ರಾಜ್ಯಗಳನ್ನು ಕಿತ್ತುಕೊಂಡಿದ್ದಾರೆ. ಅಮಿತ್ ಶಾ ಅವರು ಹೆದರಿಸಲು ಸಹಕಾರ ಇಲಾಖೆ ಜತೆಗೆ ಗೃಹ ಖಾತೆ ಇಟ್ಟುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೋದಿ ಮೋದಿ ಎನ್ನುತ್ತಾರೆ, ಮೋದಿ ಇಲ್ಲಿ ಸಿಎಂ ಆಗುತ್ತಾರಾ? ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ವಿಧಾನಸಭೆ, ಲೋಕಸಭೆ ಎಲೆಕ್ಷನ್‌ನಲ್ಲಿ ಮೋದಿ ಎನ್ನುತ್ತಾರೆ, ಮೋದಿ ಹೆಸರಿನಲ್ಲಿ ಎಷ್ಟು ಸಾರಿ ಮತ ಕೇಳುತ್ತೀರಾ, ಮೋದಿ ಇಲ್ಲಿ ಬಂದು ಆಡಳಿತ ಮಾಡುತ್ತಾರಾ. ಇಲ್ಲಿರುವ ನಾಯಕರು ಏನು ಮಾಡುತ್ತಾರೆ ಎಂದು ಟೀಕಿಸಿದರು.

ಇದನ್ನೂ ಓದಿ | Apple Phone: ಬಿಜೆಪಿ ಸರ್ಕಾರದ್ದು ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ನೀತಿ: ಫಾಕ್ಸ್‌ಕಾನ್‌ ಕುರಿತು ಎಚ್‌.ಡಿ. ಕುಮಾರಸ್ವಾಮಿ ಟೀಕೆ

ನಾನು ಸದನದಲ್ಲಿ ಉದ್ಯೋಗ ಸೃಷ್ಟಿ ಬಗ್ಗೆ ಕೇಳಿದರೆ ಭಾಷಣ ಅರ್ಧಕ್ಕೆ ಕಡಿತ ಮಾಡಿದರು. 18 ಕೋಟಿ ಉದ್ಯೋಗ ಎಲ್ಲಿ ಬಂದಿವೆ. ಗ್ಯಾಸ್ ಬೆಲೆ ಏರಿಕೆ ಆಗಿದೆ, ಒಂದು ಸಿಲಿಂಡರ್ ಕೊಟ್ಟು, ನಾಲ್ಕು ಕಿತ್ತುಕೊಂಡರು. ಪೆಟ್ರೋಲ್ ಬೆಲೆ ಏರಿಕೆ ಆಗಿದೆ. ನಾನು ಹಾಗೂ ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗೆ ಉತ್ತರ ಇಲ್ಲ, ಪತ್ರಕರ್ತರು ಕೇಳಿದರೂ ಉತ್ತರವಿಲ್ಲ, ನಾವು ಮೋದಿ ಬಗ್ಗೆ ಮಾತನಾಡಿದರೆ ಕೆಟ್ಟವರು ಆಗುತ್ತೇವೆ ಎಂದು ಕುಟುಕಿದರು.

Exit mobile version