Site icon Vistara News

Opposition Meet: ಈಗ ಭೇದ ಮರೆತು ಒಂದಾಗೋಣ ಎಂದ ಖರ್ಗೆ: ಘಟಬಂಧನಕ್ಕೆ 3+1 ಹೆಸರು ಸೂಚನೆ

Mallikarjun kharge

ಬೆಂಗಳೂರು: ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಮಹಾನ್‌ ಕಾರ್ಯಕ್ಕೆ ಚಾಲನೆ ನೀಡಿರುವ ಕಾಂಗ್ರೆಸ್‌, ಈ ಸಂದರ್ಭದಲ್ಲಿ ನಮ್ಮೊಳಗಿರುವ ಭೇದಭಾವವನ್ನು ಬದಿಗಿಟ್ಟು ಒಂದಾಗಬೇಕಿದೆ (Opposition Meet) ಎಂದು ಎಲ್ಲ ಪ್ರತಿಪಕ್ಷಗಳಿಗೆ ಕರೆ ನೀಡಿದೆ.

ಮೈತ್ರಿಕೂಟದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದಾರೆ. ಪ್ರಾಸ್ತಾವಿಕ ಮಾತನ್ನಾಡಿರುವ ಖರ್ಗೆ, ಕೆಲವು ರಾಜ್ಯಗಳಲ್ಲಿ ನಮ್ಮ ನಮ್ಮ ಪಕ್ಷಗಳ ನಡುವೆ ಭಿನ್ನ ಅಭಿಪ್ರಾಯಗಳಿವೆ. ಆದರೆ ನಾವೆಲ್ಲರೂ ಕೂಡ ಈ ಸಂದರ್ಭದಲ್ಲಿ ಒಟ್ಟಾಗಿ ನಿಲ್ಲಬೇಕಿದೆ.

ಸಾಮಾನ್ಯ ಜನರ ಸಂಕಷ್ಟದ ಸಲುವಾಗಿ ನಮ್ಮ ಭಿನ್ನಾಭಿಪ್ರಾಯ ದೂರವಿಟ್ಟು ಕೆಲಸ ಮಾಡಬೇಕಿದೆ. ದಲಿತರು, ಆದಿವಾಸಿಗಳ ಸಲುವಾಗಿ ನಮ್ಮ ಭೇದಗಳನ್ನು ದೂರವಿಟ್ಟು ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Opposition Meet : ವಿಪಕ್ಷಗಳ ರಣತಂತ್ರ ಸಭೆ ಆರಂಭ; ಇಂದೇ ಬದಲಾಗುತ್ತಾ UPA ಹೆಸರು, ಕ್ಯಾಪ್ಟನ್‌ ಯಾರು?

ಮೈತ್ರಿಕೂಟಕ್ಕೆ ಮೂರು ಹೆಸರು
ಮೈತ್ರಿಕೂಟಕ್ಕೆ ಹೊಸ ಹೆಸರು ಸೂಚಿಸುವುದೂ ಸಭೆಯ ಅಜೆಂಡಾಗಳಲ್ಲಿ ಒಂದು. ಈಗಾಗಲೆ ಇರುವ ಯುಪಿಎ ಎಂಬ ಹೆಸರನ್ನು ಇರಿಸಿಕೊಳ್ಳಬಹುದು. ಆದರೆ ಅದು ಈ ಹಿಂದಿನ ಯುಪಿಎಯ ಮುಂದುವರಿಕೆ ಆಗುತ್ತದೆ. ಅಲ್ಲಿ ಕಾಂಗ್ರೆಸ್‌ ಪಕ್ಷದ ಕೆಳಗೆ ಉಳಿದವರೆಲ್ಲರೂ ಒಟ್ಟಾಗಿದ್ದರು. ಆದರೆ ಈಗ ಸಾಮೂಹಿಕ ನಾಯಕತ್ವ ಚಿಂತನೆ ಇದೆ.

ಪಿಡಿಎ ( ಪ್ರೊಗ್ರೆಸ್ಸಿವ್ ಡೆಮಾಕ್ರಟಿಕ್ ಅಲೈನ್ಸ್), ಎನ್‌ಪಿಎ ( ನ್ಯಾಷನಲ್ ಪ್ರೊಗ್ರೆಸ್ಸಿವ್ ಅಲೈನ್ಸ್), ಐಡಿಎ ( ಇಂಡಿಯಾ ಡೆಮಾಕ್ರಟಿಕ್ ಅಲೈನ್ಸ್ ) ಹೆಸರನ್ನು ಸೂಚಿಸಲಾಗಿದೆ. ಯುಪಿಎ-3 ಎಂಬ ಹೆಸರುಗಳನ್ನೂ ಶಿಫಾರಸು ಮಾಡಲಾಗಿದೆ. ಚರ್ಚೆಯ ನಂತರ ಹೆಸರು ಅಂತಿಮಗೊಳ್ಳಲಿದೆ ಎನ್ನಲಾಗಿದೆ.

ಮೈತ್ರಿಕೂಟದ ನಾಯಕತ್ವದ ಬಗ್ಗೆಯೂ ಮಾತುಕತೆ ನಡೆದಿದೆ. ಸೋನಿಯಾ ಗಾಂಧಿ, ಶರತ್ ಪವಾರ್, ನಿತೀಶ್ ಕುಮಾರ್ ಹೆಸರು ಮುಂಚೂಣಿಯಲ್ಲಿ ಚರ್ಚೆ ಆಗುತ್ತಿದೆ. ಅಂತಿಮವಾಗಿ ಮೂರ್ನಾಲ್ಕು ಸುತ್ತಿನ ಸಭೆಯ ಬಳಿಕ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Exit mobile version