ವಿಜಯಪುರ: ನಗರದ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ ಜನವರಿ ೧೭ರ ರಾತ್ರಿ ಯುವತಿಯೊಬ್ಬಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರ ಎಸಗಿದ ಆರೋಪಿ ರಾಹೀಲ್ ಹಾಗೂ ಈತನಿಗೆ ಸಹಾಯ ಮಾಡಿದ ಇಬ್ಬರು ಆರೋಪಿಗಳಾದ ಅಯಾಜ್ ಜಮಾದಾರ ಮತ್ತು ಉಮರ್ ಫಾರೂಖ್‌ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Drunken Teacher: ಶಾಲೆಗೆ ಕುಡಿದು ಟೈಟ್ ಆಗಿ ಬಂದ ಶಿಕ್ಷಕ; ಕ್ರಮಕ್ಕೆ ಸ್ಥಳೀಯರ ಆಗ್ರಹ
ಏನಿದು ಪ್ರಕರಣ?
ನಗರದ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ ನಿಂತಿದ್ದ ಯುವತಿಯನ್ನು ಪುಸಲಾಯಿಸಿದ ಈ ಮೂವರು ಅಲ್ಲಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆಗೆ ಬೆದರಿಸಿ ರಾಹೀಲ್ ಅತ್ಯಾಚಾರ ಎಸಗಿದ್ದಾನೆ. ಇದಕ್ಕೆ ಉಳಿದ ಇಬ್ಬರು ಸಹಕರಿಸಿದ್ದಾರೆ. ಬಳಿಕ ಯುವತಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.
ಇದರಿಂದ ಯುವತಿಯು ತೀವ್ರ ಆಘಾತಕ್ಕೊಳಗಾಗಿದ್ದಳು. ಅಲ್ಲದೆ, ಅತ್ಯಾಚಾರಕ್ಕೊಳಗಾದ ಪ್ರದೇಶದಲ್ಲಿಯೇ ನರಳುತ್ತಾ ಬಿದ್ದುಕೊಂಡಿದ್ದಳು. ಇದು ಜನವರಿ 18ರ ಮುಂಜಾನೆ ಸ್ಥಳೀಯರ ಗಮನಕ್ಕೆ ಬಂದಿದೆ. ಅವರು ಕೂಡಲೇ ಪೊಲೀಸರಿಗೆ ಕರೆ ಮಾಡಿ, ಯುವತಿಯೊಬ್ಬಳು ರಸ್ತೆ ಪಕ್ಕದ ನಿರ್ಜನ ಪ್ರದೇಶದಲ್ಲಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ವಿಜಯಪುರ ಮಹಿಳಾ ಠಾಣೆ ಪೊಲೀಸರು ಆಕೆಯನ್ನು ವಿಚಾರಿಸಿದಾಗ ಅತ್ಯಾಚಾರ ನಡೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಅಲ್ಲದೆ, ಆಕೆಗೆ ಆಶ್ರಯ ವ್ಯವಸ್ಥೆಯನ್ನೂ ಮಾಡಿದ್ದರು.
ಇದನ್ನೂ ಓದಿ: ಸಕಲೇಶಪುರದಲ್ಲಿ ರಾಜಕೀಯ ವಿಚಾರಕ್ಕೆ ಶುರುವಾದ ಜಗಳ; ಮಚ್ಚಿನಿಂದ ಸ್ನೇಹಿತನ ಎಡಗೈಯನ್ನೇ ಕಡಿದ
ತನಿಖೆ ಕೈಗೊಂಡ ಮಹಿಳಾ ಠಾಣೆ ಪೊಲೀಸರು, ಸಂತ್ರಸ್ತೆಯಿಂದ ಮಾಹಿತಿಯನ್ನು ಕಲೆಹಾಕಿದ್ದರು. ಒಬ್ಬ ಯುವಕ ತನ್ನ ಮೇಲೆ ಅತ್ಯಾಚಾರ ಮಾಡಿದ್ದು, ಉಳಿದ ಇಬ್ಬರು ಆತನಿಗೆ ಸಹಕಾರ ಕೊಟ್ಟಿದ್ದಾರೆ ಎಂದು ವಿಷಯವನ್ನು ತಿಳಿಸಿದ್ದಳು. ಜತೆಗೆ ಅವರ ಚಹರೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ಯುವತಿ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಅತ್ಯಾಚಾರ ನಡೆದ ೫ ದಿನಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.