Site icon Vistara News

ಹಾಡಹಗಲೇ ಯುವತಿ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ: ಆರೋಪಿ ಪೊಲೀಸ್‌ ವಶಕ್ಕೆ

ಲೈಂಗಿಕ ದೌರ್ಜನ್ಯ ಆರೋಪ

ಬೆಂಗಳೂರು : ಬೆಳ್ಳಂಬೆಳಗ್ಗೆ ವಿವೇಕ್‌ ನಗರದ ಈಜಿಪುರ ವ್ಯಾಪ್ತಿಯಲ್ಲಿ ನೆಲೆಸಿದ್ದ ನರ್ಸಿಂಗ್ ವಿದ್ಯಾರ್ಥಿನಿ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದು, ಆತ ಈಗ ಪೊಲೀಶ್‌ ವಶದಲ್ಲಿದ್ದಾನೆ.

ಮಸೂರ್‌ ಅಲ್‌ ಶೇಖ್‌ ಎಂಬಾತನೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯಾಗಿದ್ದಾನೆ. ಸಂತ್ರಸ್ತೆ ಒಬ್ಬಂಟಿಯಾಗಿರುವುದನ್ನು ತಿಳಿದಿದ್ದ ಆರೋಪಿಯು ಆಕೆಯ ಮನೆ ಬಾಗಿಲಿಗೆ ಬಂದು ಹಲವು ಬಾರಿ ಕಾಲಿಂಗ್ ಬೆಲ್ ಒತ್ತಿದ್ದಾನೆ. ನಂತರ ಬಾಗಿಲು ತೆರೆದ ಸಂತ್ರಸ್ತೆಯನ್ನು ತಳ್ಳಿ ಒಳಗೆ ನುಗ್ಗಿದ್ದಾನೆ. ಆಕೆಗೆ ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲಿ ಬಾಗಿಲು ಮುಚ್ಚಿದ ಮಸೂರ್‌ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಏಕಾಏಕಿ ಆತ ದಾಳಿ ಮಾಡಿದ್ದರಿಂದ ಯುವತಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಕೊನೆಗೆ ಆತನನ್ನು ವಿರೋಧಿಸಿದ್ದಾಳೆ. ʻಹಣ ನೀಡುತ್ತೇನೆ ಹೊರಟು ಹೋಗುʼ ಎಂದು ಕೇಳಿಕೊಂಡಿದ್ದಾನೆ. ಆದರೆ, ಆತ ಮಾತ್ರ ಇದ್ಯಾವುದಕ್ಕೂ ಬಗ್ಗಲಿಲ್ಲ. ಹಣವನ್ನು ನಿರಾಕರಿಸಿ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾಗ ಸಂತ್ರಸ್ತೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಆಕೆಯ ಕಿರುಚಾಟ ಕೇಳಿದ ಅಕ್ಕ ಪಕ್ಕದ ಮನೆಯವರು ಅಲ್ಲಿಗೆ ಬಂದು ಬಾಗಿಲು ಒಡೆದು ಮನೆ ಪ್ರವೇಶ ಮಾಡಿ ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಸಂತ್ರಸ್ತೆ ನೀಡಿದ ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ | 11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕೇರಳದ ಮದರಸಾ ಶಿಕ್ಷಕ, 67 ವರ್ಷ ಜೈಲು ಶಿಕ್ಷೆ

ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ

೨ ದಿನದಿಂದ ಹಿಂಬಾಲಿಸುತ್ತಿದ್ದ ಆರೋಪಿ

ʻಎರಡು ದಿನಗಳಿಂದ ಆರೋಪಿ ಹಿಂಬಾಲಿಸುತ್ತಿದ್ದ. ಆರೋಪಿ ಬಹಳಷ್ಟು ಬಾರಿ ಬೆಲ್‌ ಒತ್ತಿದ್ದಾನೆ. ಯುವತಿ ಬಾಗಿಲು ತೆರೆದ ತಕ್ಷಣ ಆತ ಒಳಗೆ ನುಗ್ಗಿದ್ದು, ಕಿರುಚಿಕೊಂಡಿದ್ದಾಳೆ. ನಾವು ಬಂದು ಬಾಗಿಲು ಒಡೆದು ಆಕೆಯನ್ನು ರಕ್ಷಿಸಿದ್ದೇವೆʼ ಎಂದು ಪಕ್ಕದ ಮನೆಯವರು ಹೇಳಿಕೆ ನೀಡಿದ್ದಾರೆ.

ʻಯುವತಿ ಜತೆ ಆರೋಪಿ ಅನುಚಿತವಾಗಿ ವರ್ತಿಸಿದ್ದಾನೆ. ಅಕ್ಕಪಕ್ಕದ ಮನೆಯವರು ರಕ್ಷಿಸಿದ ಕಾರಣ ಏನೂ ಅಚಾತುರ್ಯ ಸಂಭವಿಸಿಲ್ಲ. ಅವನನ್ನು ಈಗಾಗಲೇ ಬಂಧಿಸಲಾಗಿದೆ. ಸಂತ್ರಸ್ತೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಇದೀಗ ತನಿಖೆ ಕೈಗೊಂಡಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದುʼ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | ಯುವ ನಟಿಗೆ ಲೈಂಗಿಕ ಕಿರುಕುಳ: ಮಲಯಾಳಂ ನಟ ವಿಜಯ್‌ ಬಾಬು ಅರೆಸ್ಟ್

Exit mobile version