Site icon Vistara News

Sexual Harrassment on cow | ಮೇಯಲು ಕಟ್ಟಿದ್ದ ಹಸುವಿನ ಮೇಲೆ ದೌರ್ಜನ್ಯ ನಡೆಸುತ್ತಿದ್ದವ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ!

ಮಡಿಕೇರಿ: ಮೇಯಲು ಕಟ್ಟಿ ಹಾಕಿದ್ದ ಹಸುವಿನ ಮೇಲೆ ಹೇಯ ಕೃತ್ಯ ಎಸಗುತ್ತಿದ್ದ (Sexual Harrassment on cow) ವ್ಯಕ್ತಿಯೊಬ್ಬನನ್ನು ಸ್ಥಳೀಯ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಅಂದಗೋವೆ ಎಂಬಲ್ಲಿ ನಡೆದಿದೆ. ನವೆಂಬರ್ 27ರಂದು ಈ ಹೇಯ ಕೃತ್ಯ ನಡೆದಿದ್ದು, ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದ ಸಿ.ಎ. ದೇವಯ್ಯ ಅವರಿಗೆ ಸೇರಿದ ಹಸುವನ್ನು ಮೇಯಲು ಬಿಡಲಾಗಿತ್ತು. ದೇವಯ್ಯ ಅವರು ಸಂತೆಗೆ ಹೋಗಿ ವಾಪಸ್ ಬರುವ ಸಂದರ್ಭ ತಮ್ಮ ಗದ್ದೆಯ ದಾರಿಯಲ್ಲಿ ಮೋಟಾರ್ ಬೈಕ್‌ ನಿಂತಿದ್ದನ್ನು ಗಮನಿಸಿದ್ದಾರೆ.

ದೇವಯ್ಯ ಮನೆ ಹೋಗಿ ಸಾಮಗ್ರಿಗಳನ್ನು ಇಟ್ಟು ಮೇಯಲು ಬಿಟ್ಟಿದ್ದ ಹಸುವನ್ನು ವಾಪಾಸು ಕೊಟ್ಟಿಗೆಗೆ ತರಲು ಹೋದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಸುವಿನ ಮೇಲೆ ಪೈಶಾಚಿ ಕೃತ್ಯ ಎಸಗುತ್ತಿರುವುದನ್ನು ಕಂಡರು. ಕೂಡಲೇ ಆತನನ್ನು ಹಿಡಿದು ವಿಚಾರಿಸಿದಾಗ ಆತ ಸುಂಟಿಕೊಪ್ಪ ಪಂಪ್ ಹೌಸ್ ನಿವಾಸಿ ಅಬೂಬಕ್ಕರ್ ಸಿದ್ಧಿಕ್ ಎಂದು ತಿಳಿದುಬಂತು.

ಪೊಲೀಸರಿಗೆ ದೂರು ನೀಡಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಭಾರತೀಯ ದಂಡ ಸಂಹಿತೆ ಕಲಂ 377 ಪ್ರಕಾರ ಮೊಕದ್ದಮೆ ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಸಂದರ್ಭದಲ್ಲಿ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಇದನ್ನೂ ಓದಿ | ವಿಕೃತ ಕಾಮಿಯ ದೌರ್ಜನ್ಯಕ್ಕೆ ನರಳಿದ ಹಸು; ಕೂಗು ಕೇಳಿ ಹೋದ ಮಾಲೀಕ ದೃಶ್ಯ ನೋಡಿ ಬೆಚ್ಚಿ ನಿಂತಿದ್ದ !

Exit mobile version