ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಭೀಕರ ಕೊಲೆ (Murder Case) ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ನಗರದ ರವಿ (31) ಕೊಲೆಯಾದ ವ್ಯಕ್ತಿ. ಆರ್ ಆರ್ ಬಾರ್ ಕ್ಯಾಷಿಯರ್ ಹೇಮಂತ್ ಕೊಲೆ ಆರೋಪಿಯಾಗಿದ್ದಾನೆ. ಚಿಂತಾಮಣಿ-ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ಎಚ್‌ಪಿ ಪೆಟ್ರೋಲ್ ಬಂಕ್ ಬಳಿ ಕೊಲೆ ನಡೆದಿದೆ. ಸ್ಥಳಕ್ಕೆ ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ರೈತರ ಮೇಲೆ ಕಾಡಾನೆಗಳ ಹಿಂಡು ದಾಳಿ
ರಾಮನಗರ: ಬೈಕ್ ಸವಾರರ ಮೇಲೆ ಆನೆಗಳ ಹಿಂಡು ದಾಳಿ ಮಾಡಿದ ಘಟನೆ ಕನಕಪುರ ತಾಲೂಕಿನ ಬೆಟ್ಟೇಗೌಡನದೊಡ್ಡಿಯಲ್ಲಿ ನಡೆದಿದೆ. ಗುರುವಾರ ರಾತ್ರಿ 30ಕ್ಕೂ ಹೆಚ್ಚು ಆನೆಗಳ ಹಿಂಡು ಗ್ರಾಮದ ಬಳಿ ಕಾಣಿಸಿಕೊಂಡಿದ್ದು, ರೈತರು ಓಡಿ ಹೋಗಿ ಜೀವ ರಕ್ಷಣೆ ಮಾಡಿಕೊಂಡಿದ್ದಾರೆ.
ಕಾಡಿನೆಡೆಗೆ ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಓಡಿಸಿದ್ದರು. ಈ ವೇಳೆ ಹೊಲದಲ್ಲಾದ ಹಾನಿ ನೋಡಲು ರೈತರು ತರೆಳಿದ್ದ ವೇಳೆ ಏಕಾಏಕಿ ಕಾಡಾನೆ ನುಗ್ಗಿ ಬಂದಿದೆ. ಹೀಗಾಗಿ ಬೈಕ್ ಬಿಟ್ಟು ಬೆಟ್ಟದ ಕಡೆ ಇಬ್ಬರು ರೈತರು ಓಡಿದ್ದಾರೆ ಸಿಟ್ಟಿನಲ್ಲಿ ಬೈಕ್ ಅನ್ನು ಕಾಡಾನೆಗಳ ಹಿಂಡು ಪುಡಿಗಟ್ಟಿದೆ.
ಇದನ್ನೂ ಓದಿ | Namma Metro: ಮೆಟ್ರೋದಲ್ಲಿ ಯುವತಿಯ ಹಿಂದೆ ನಿಂತು ಲೈಂಗಿಕ ಕಿರುಕುಳ; ಆರೋಪಿ ಅರೆಸ್ಟ್
ಬನ್ನೇರುಘಟ್ಟದ ಬಿಳಿಕಲ್ ಅರಣ್ಯ ಕಡೆಯಿಂದ ಕಾಡಾನೆ ಹಿಂಡು ಬಂದಿದ್ದು, ಹಲವು ಆನೆಗಳ ಪೈಕಿ ಮರಿಗಳೇ ಹೆಚ್ಚಿವೆ. ಕನಕಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆ ನಾಶ ಮಾಡುತ್ತಿರುವುದರಿಂದ ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಡೆಕೊರೇಷನ್ ಮಳಿಗೆಗೆ ಬೆಂಕಿ
ರಾಯಚೂರು: ಮಾನ್ವಿ ಪಟ್ಟಣದ ಡೆಕೊರೇಷನ್ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಟ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಅಮರಶೆಟ್ಟಿ ಅವರ ಮಳಿಗೆಯಲ್ಲಿ ಅವಘಡ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ