Site icon Vistara News

Ghati Subramanya: ಘಾಟಿ ಸುಬ್ರಹ್ಮಣ್ಯದಲ್ಲಿ ಸಾರಿಗೆ ಬಸ್‌ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

KSRTC bus

ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವದಲ್ಲಿ ರಥದ ಚಕ್ರದಡಿ ಸಿಲುಕಿದ ಮಹಿಳೆ ಅಪಾಯದಿಂದ ಪಾರಾದ ಬೆನ್ನಲ್ಲೇ ರಥೋತ್ಸವ ನೋಡಿಕೊಂಡು‌ ವಾಪಸ್‌ ಬರುವಾಗ ವ್ಯಕ್ತಿಯೊಬ್ಬರು ಸಾರಿಗೆ ಬಸ್‌ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸಮೀಪದ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ಸಮೀಪ ಘಟನೆ ನಡೆದಿದೆ.

ಘಾಟಿಯಲ್ಲಿ ರಥೋತ್ಸವ ನೋಡಿಕೊಂಡು‌ ಭಕ್ತನೊಬ್ಬ ಬಸ್‌ನಲ್ಲಿ ವಾಪಸ್ ಬರುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್‌ನಿಂದ ತರಾತುರಿಯಲ್ಲಿ ಇಳಿಯುವಾಗ ಹಿಂಬದಿ ಚಕ್ರಕ್ಕೆ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತನ ಗುರುತು ಪತ್ತೆಯಾಗಿಲ್ಲ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಪ್ರಕರಣ ದಾಖಲಾಗಿದೆ.

ರಥದಡಿ ಸಿಲುಕಿದ ಮಹಿಳೆ ಪವಾಡ ಸದೃಶ ಪಾರು

Man ends life for not getting bride

ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವದ (Ghati BrahmaRathotsava) ವೇಳೆ ಭಾರಿ ಅನಾಹುತವೊಂದು ತಪ್ಪಿದ್ದು, ರಥ ಎಳೆಯುವಾಗ ಚಕ್ರದಡಿ ಸಿಲುಕಿದ ಮಹಿಳೆಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಮಹಿಳೆ ಕೆಳಗೆ ಬಿದ್ದಾಗ, ತಕ್ಷಣ ಆಕೆಯನ್ನು ಪೊಲೀಸರು ಹಾಗೂ ಸಿಬ್ಬಂದಿ ಎಳೆದುಕೊಂಡಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ರಥ ಎಳೆಯುವಾಗ ನೂಕುನುಗ್ಗಲು ಉಂಟಾಗಿದ್ದರಿಮದ ಚಕ್ರದ ಬಳಿ ಮಹಿಳೆಯೊಬ್ಬಳು ಸಿಲುಕಿದ್ದಳು. ಕೂಡಲೇ ಎಚ್ಚೆತ್ತ ಪೊಲೀಸ್ ಹಾಗೂ ಸಿಬ್ಬಂದಿ, ಮಹಿಳೆಯನ್ನು ಪಕ್ಕಕ್ಕೆ ಎಳಿದುಕೊಂಡಿದ್ದಾರೆ. ಇದರಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ | Road Accident : ಸಂಕ್ರಾಂತಿ ಸಂಭ್ರಮ ಮುಗಿಸಿ ಬರುವಾಗ ಅಪಘಾತ; ತಂದೆ, ಪುಟ್ಟ ಮಗಳು ಮೃತ್ಯು

ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಸರ್ಪ ದೋಷ ಪರಿಹಾರ ಸೇರಿದಂತೆ ನಾಗಾರಾಧನೆಗೆ ಇದು ಪ್ರಸಿದ್ಧವಾಗಿದೆ. ಪುಷ್ಪ ಶುದ್ಧ ಷಷ್ಟಿ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಬ್ರಹ್ಮರಥೋತ್ಸವಕ್ಕೆ ಭಕ್ತ ಸಾಗರ ಹರಿದು ಬಂದಿತ್ತು. 12 ಗಂಟೆಗೆ ಸುಬ್ರಹ್ಮಣ್ಯ ರಥವನ್ನು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಎ.ಎಚ್.ಮುನಿಯಪ್ಪ ಎಳೆಯುವ ಮೂಲಕ ಚಾಲನೆ ನೀಡಿದರು. ಈ ವೇಳೆ ರಥಕ್ಕೆ ಬಾಳೆಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು.

ಯಾರೂ ಹೆಣ್ಣು ಕೊಡುತ್ತಿಲ್ಲ ಎಂಬ ಬೇಸರ; ವಿಷ ಸೇವಿಸಿ ಪ್ರಾಣಬಿಟ್ಟ ಯುವಕ

Man ends life for not getting bride

ವಿಜಯನಗರ: ಮದುವೆಯಾಗಲು ಯಾರೂ ಹೆಣ್ಣು ಕೊಡುತ್ತಿಲ್ಲ (No one giving bride) ಎಂಬ ಬೇಸರದಿಂದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ವಿಜಯನಗರ ಜಿಲ್ಲೆಯಲ್ಲಿ (Vijaya Nagara News) ನಡೆದಿದೆ. ಕಳೆದ ಜನವರಿ 5ರಂದೇ ಆತ ವಿಷ ಸೇವಿಸಿದ್ದು, ಜನವರಿ 15ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದ್ದಾನೆ. ಆತ ಮೃತಪಟ್ಟ ಬಳಿಕವಷ್ಟೇ ಆತನ ಸಾವಿನ ನಿಜ ಕಾರಣ ಬೆಳಕಿಗೆ ಬಂದಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ನಿವಾಸಿಯಾಗಿರುವ ಬಿ.ಮಧುಸೂಧನ (26) ಎಂಬಾತನೇ ವಿಷ ಸೇವಿಸಿ ಮೃತಪಟ್ಟ ಯುವಕ. ಮದುವೆ ವಯಸ್ಸಾಗಿದ್ದರೂ ನನಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂಬ ಬೇಸರದಿಂದ ಇದ್ದ ಆತ ಕೊನೆಗೆ ಜೀವವನ್ನೇ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದ.

ಆತನಿಗೆ ಮದುವೆಗೆ ಹುಡುಗಿ ಸಿಗದೆ ಇರಲು ಅನ್ಯ ಕಾರಣಗಳು ಏನಿದ್ದವೋ ಗೊತ್ತಿಲ್ಲ. ಆದರೆ, ಪ್ರಮುಖವಾಗಿ ಆತನ ತಂದೆ ಮಾನಸಿಕ ಅಸ್ವಸ್ಥರಾಗಿದ್ದು ಒಂದು ಪ್ರಮುಖ ಕಾರಣವಾಗಿದೆ. ಮಾನಸಿಕ ಅಸ್ವಸ್ಥರಾಗಿರುವ ತನ್ನ ತಂದೆಯನ್ನು ನೋಡಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಆತ ಬೇಸರಿಸಿಕೊಂಡಿದ್ದ.

ಈತನನ್ನು ಮೇಲ್ನೋಟಕ್ಕೆ ನೋಡಿದ ಕೆಲವರು ಹುಡುಗಿ ಕೊಡಲು ಒಪ್ಪಿದ್ದರೂ ಬಳಿಕ ಮನೆಗೆ ಬಂದಾಗ ಅಲ್ಲಿ ತಂದೆಯ ಮಾನಸಿಕ ಅಸ್ವಸ್ಥತೆಯನ್ನು ಕಂಡು ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಮಧುಸೂದನ ಗ್ರಾಮದ ಹೊರವಲಯದ ವೇಣಿ ಈರಪ್ಪನ ಮಠದ ಬಳಿ ಹೋಗಿ ವಿಷ ಸೇವಿಸಿದ್ದಾನೆ.

ವಿಷಯ ತಿಳಿದ ತಕ್ಷಣ ಆತನನ್ನು ಗುಡೇಕೋಟೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೇ ಸಾವು ಸಂಭವಿಸಿದೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version