Site icon Vistara News

Elephant Attack | ಕಾಡಾನೆ ದಾಳಿಗೆ ಸಕಲೇಶಪುರದಲ್ಲಿ ಮತ್ತೊಬ್ಬ ರೈತ ಬಲಿ!

elephant news india

ಹಾಸನ: ಆಹಾರವನ್ನು ಹುಡುಕಿ ಕಾಡಿನಿಂದ ನಾಡಿಗೆ ಬರುವ ಕಾಡಾನೆಗಳಿಂದ ದಾಳಿ (Elephant Attack) ಹೆಚ್ಚಾಗುತ್ತಿದೆ. ಸಕಲೇಶಪುರ ತಾಲೂಕಿನ‌ ಸುಳ್ಳಕ್ಕಿ ಮೇಲಕೆರೆ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಕಾಡಾನೆ ದಾಳಿ ಮಾಡಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ಬೆಳಗ್ಗೆ ಗದ್ದೆ ಕೆಲಸಕ್ಕೆ ಹೋಗಿದ್ದಾಗ ಮಂಜುನಾಥ್‌ (50) ಎಂಬುವವರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಜೂನ್‌ 5ರಂದು ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು ಮೃತಪಟ್ಟಿದ್ದರು. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಾಗೂ ಮೃತ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.

ಆರು ತಿಂಗಳಲ್ಲಿ ಕಾಡಾನೆಗೆ ಐವರು ಬಲಿ; ಬಂದ್‌ಗೆ ಕರೆ

ಮೃತದೇಹವನ್ನು ಸ್ಥಳದಿಂದ ಕೊಂಡೊಯ್ಯಲು ಬಿಡದ ಸ್ಥಳೀಯರು, ಅರಣ್ಯ ಸಚಿವರು, ಉಸ್ತುವಾರಿ ಸಚಿವರು ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದರು. ನಿರಂತರ ಕಾಡಾನೆ ದಾಳಿಯಾದರೂ ಸರ್ಕಾರದ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದು, ಸೂಕ್ತ ಕ್ರಮವನ್ನು ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ವಿವಿಧ ಸಂಘಟನೆಗಳಿಂದ ಸಕಲೇಶಪುರ ತಾಲೂಕು ಬಂದ್‌ಗೆ ಸೋಮವಾರ ಕರೆ ನೀಡಲಾಗಿದೆ. ಆರು ತಿಂಗಳ‌ ಅಂತರದಲ್ಲಿ ಇದು ಐದನೇ ಬಲಿಯಾಗಿದ್ದು, ನಿತ್ಯವೂ ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿರುವ ನಮಗೆ ಶಾಶ್ವತ ಪರಿಹಾರ ಒದಗಿಸಿ ಎಂದು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ | ಕಾಡಂಚಿನ ಗ್ರಾಮಗಳಲ್ಲಿ ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಸೆರೆ, ರೇಡಿಯೊ ಕಾಲರ್‌ ಅಳವಡಿಕೆ

Exit mobile version