Site icon Vistara News

Kidnap Case : ಹೆಂಡತಿಯನ್ನು ʻಅವನುʼ ಕಿಡ್ನ್ಯಾಪ್‌ ಮಾಡಿದ್ದಾನೆ, ದಯವಿಟ್ಟು ಹುಡುಕಿಕೊಡಿ ಎಂದ ಗಂಡ

wife kidnapped

#image_title

ಬೆಂಗಳೂರು: ನನ್ನ ಹೆಂಡತಿಯನ್ನು ಅವನು ಕಿಡ್ನ್ಯಾಪ್‌ (Kidnap Case) ಮಾಡಿದ್ದಾನೆ, ದಯವಿಟ್ಟು ಹುಡುಕಿಕೊಡಿ ಎಂದ ಗಂಡ) ಮಾಡಿದ್ದಾನೆ. ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ. ದಯವಿಟ್ಟು ಅವಳನ್ನು ಹುಡುಕಿಕೊಡಿ: ಹೀಗೆಂದು ವ್ಯಕ್ತಿಯೊಬ್ಬ ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಬೆಂಗಳೂರು ಪೊಲೀಸರ ಅಧಿಕೃತ ಟ್ವಿಟರ್‌ ಖಾತೆಗೆ ತನ್ನ, ತನ್ನ ಹೆಂಡತಿಯ ಮತ್ತು ಕಿಡ್ನಾಪ್‌ ಮಾಡಿದವನ ವಿವರಗಳನ್ನು ಟ್ಯಾಗ್‌ ಮಾಡಿ ಸಹಾಯ ಯಾಚಿಸಿದ್ದಾನೆ.

ಅಂದ ಹಾಗೆ ಈ ರೀತಿ ಮನವಿ ಮಾಡಿದವರು ಛತ್ತೀಸ್‌ಗಢದ ಕುಂತಳ್ ಬ್ಯಾನರ್ಜಿ. ಅಲ್ಲಿಂದಲೇ ಬೆಂಗಳೂರು ಪೊಲೀಸರನ್ನು ಟ್ವಿಟರ್‌ ಮೂಲಕ ಸಂಪರ್ಕಿಸಿ ಮನವಿ ಮಾಡಿದ್ದಾರೆ. ಕಿಡ್ನ್ಯಾಪ್‌ ಮಾಡಿದವನು ಹೆಂಡತಿಯನ್ನು ಬೆಂಗಳೂರಿಗೆ ಹಾರಿಸಿಕೊಂಡು ಹೋಗಿದ್ದಾನೆ ಎನ್ನುವ ಸಣ್ಣ ಗುಮಾನಿ ಇರುವುದರಿಂದ ಈ ರೀತಿಯ ಸಹಾಯ ಯಾಚಿಸಲಾಗಿದೆ.

ಕುಂತಳ್‌ ಬ್ಯಾನರ್ಜಿ ತನ್ನ ಟ್ವೀಟ್‌ನಲ್ಲಿ ಅವಿನಭಾ ಚಕ್ರವರ್ತಿ ಎಂಬಾತ ತನ್ನ ಪತ್ನಿಯನ್ನು ಕಿಡ್ನ್ಯಾಪ್‌ ಮಾಡಿದ್ದಾಗಿ ಆರೋಪಿಸಿದ್ದು, ಆಕೆಯನ್ನು ಅವನ ಕೈಯಿಂದ ರಕ್ಷಿಸಿ ಎಂದು ಮನವಿ ಮಾಡಿದ್ದಾರೆ. ಅವಿನಭಾ ಚಕ್ರವರ್ತಿಯ ಫೋಟೊವನ್ನು ಕೂಡಾ ಹಾಕಿರುವ ಕುಂತಳ್‌ ಬ್ಯಾನರ್ಜಿ ಹೆಂಡತಿ ಮತ್ತು ಅವಿನಭಾನ ಫೋನ್‌ ನಂಬರ್‌ ಕೂಡಾ ಹಾಕಿದ್ದಾರೆ.

ಆಕೆ ಈಗ ಬೆಂಗಳೂರಿನಲ್ಲಿದ್ದಾಳೆ ಎಂಬ ಮಾಹಿತಿ ಇದೆ. ದಯವಿಟ್ಟು ಆಕೆಯನ್ನು ರಕ್ಷಿಸಿಕೊಡಿ ಎನ್ನುವುದು ಅವನ ಮನವಿ. ಆದರೆ, ಆಕೆಗೂ ಅವಿನಭಾಗೂ ಏನು ಸಂಬಂಧ? ನಿಜಕ್ಕೂ ಆಕೆ ಅಪಹರಣ ಆಗಿದ್ದಾ? ಆಕೆಯೇ ಅವನ ಹೋಗಿದ್ದಾ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ.

ಬೆಂಗಳೂರು ನಗರ ಪೊಲೀಸರು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದು ಹೆಂಡತಿಯ ಕಿಡ್ನಾಪ್‌ ಪ್ರಕರಣದ ಬಗ್ಗೆ ಸಮೀಪದ ಠಾಣೆಗೆ ದೂರು ನೀಡಿ, ಬಳಿಕ ಇಲ್ಲಿ ಫೋಲೋಅಪ್‌ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Child Kidnapping case: ನರ್ಸ್‌ ರೂಪದಲ್ಲಿ ಬಂದು ಶಿಶು ಕದ್ದವಳು ಠಾಣೆಯಲ್ಲಿ ಪ್ರತ್ಯಕ್ಷ; ಮಕ್ಕಳಾಗದಿರುವುದೇ ಕಿಡ್ನ್ಯಾಪ್‌ಗೆ ಕಾರಣ

Exit mobile version