ತುಮಕೂರು: ಎಣ್ಣೆ ಪಾರ್ಟಿ ವೇಳೆ ಜಮೀನು ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ.ವಾಗಿರುವ ಘಟನೆ ನಗರದ ಭೀಮಸಂದ್ರ ಬಳಿಯಿರುವ ಬೆತ್ತಲೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ. ಕ್ರಿಸ್ ಮಸ್ ಹಬ್ಬದ ಹಿನ್ನೆಲೆಯಲ್ಲಿ ಸ್ನೇಹಿತರೆಲ್ಲರೂ ಸೇರಿ ಎಣ್ಣೆ ಪಾರ್ಟಿ ಮಾಡುತ್ತಿದ್ದಾಗ ಹತ್ಯೆ (Murder Case) ನಡೆದಿದೆ.
ನಿರಂಜನ್ (35) ಕೊಲೆಯಾದ ಯುವಕ. ಮಧು (40) ಆರೋಪಿ. ಬೆತ್ತಲೂರು ನಿವಾಸಿಗಳಾದ ಮಧು ಹಾಗೂ ನಿರಂಜನ್ ಇಬ್ಬರೂ ಸಂಬಂಧಿಕರಾಗಿದ್ದು, ಜಮೀನು ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಮಧು ಮತ್ತು ಸಹಚರರು, ಮಾರಕಾಸ್ತ್ರಗಳಿಂದ ಕೊಚ್ಚಿ ನಿರಂಜನ್‌ನ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಆರೋಪಿ ಮಧು ರೌಡಿಶೀಟರ್ ಎನ್ನಲಾಗಿದೆ. ಕೊಲೆಯಾದ ನಿರಂಜನ್ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿದ್ದ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ | Mangalore News: ಕೇರಳದ ಅನ್ಯಕೋಮಿನ ವಿದ್ಯಾರ್ಥಿ ಜೋಡಿಗೆ ಹಿಂದು ಕಾರ್ಯಕರ್ತರ ತರಾಟೆ
ಬರ್ಬರ ಕೊಲೆಗೈಯ್ದು ಶವ ಸುಟ್ಟ ಪ್ರಕರಣ: ನಾಲ್ವರು ಹಂತಕರ ಬಂಧನ
ಕಲಬುರಗಿ: ಯುವಕನ ಬರ್ಬರ ಹತ್ಯೆಗೈಯ್ದು ಶವ ಸುಟ್ಟ ಪ್ರಕರಣದಲ್ಲಿ ನಾಲ್ವರು ಹಂತಕರನ್ನು ಚಿತ್ತಾಪುರ ಪೊಲೀಸರು ಬಂಧಿಸಿದ್ದಾರೆ. ಆಸಿಫ್, ಬಾಬುಮೀಯಾ, ಅಲ್ತಾಫಶಾ, ಮಹ್ಮದ್ ಕೈಫ್ ಬಂಧಿತ ಆರೋಪಿಗಳು. ಡಿ.23 ರಂದು ಚಿತ್ತಾಪುರದಲ್ಲಿ ದಾವಲಸಾಬ್ (22) ಎಂಬ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಬಳಿಕ, ಪೆಟ್ರೋಲ್ ಹಾಕಿ ಶವ ಸುಟ್ಟು ಹಾಕಲಾಗಿತ್ತು.
ಆರೋಪಿ ಆಸಿಫ್ ಸಹೋದರಿಯನ್ನು ಚುಡಾಯಿಸುತ್ತಿದ್ದ ಹಿನ್ನೆಲೆಯಲ್ಲಿ ದಾವಲ್‌ಸಾಬ್‌ನನ್ನು ಕೊಲೆ ಮಾಡಲಾಗಿದೆ. ಚಿತ್ತಾಪುರ ಸಿಪಿಐ ಚಂದ್ರಶೇಖರ್ ತಿಗಡಿ ನೇತೃತ್ವದಲ್ಲಿ ಹಂತಕರನ್ನು ಬಂಧಿಸಲಾಗಿದೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಣ್ಣೆ ವಿಷ್ಯ; ತಲೆ ಮೇಲೆ ಕಲ್ಲು ಹೊತ್ತು ಹಾಕಿ ನಿವೃತ್ತ ಎಎಸ್‌ಐ ಪುತ್ರನ ಕೊಲೆ
ರಾಮನಗರ: ಕುಡಿತದ ಕಾರಣಕ್ಕಾಗಿ (liquor Party) ನಿತ್ಯವೂ ಹತ್ತಾರು ಕೊಲೆಗಳು (Murder Case) ಸಂಭವಿಸುತ್ತಿವೆ. ಕುಡಿತದ ಮತ್ತಿನಲ್ಲಿ ಕೊಲೆ ಮಾಡುವುದು, ಕುಡಿಯುವುದಕ್ಕಾಗಿ ಕರೆದುಕೊಂಡು ಹೋಗಿ ಕೊಲೆ ಮಾಡುವುದು, ಕುಡಿಸಿ ಕೊಲೆ ಮಾಡುವುದು, ಮದ್ಯ ಸೇವನೆ ಮಾಡಿಲ್ಲ ಎಂದು ಕೊಲ್ಲುವುದು.. ಹೀಗೆ ಹಲವಾರು ಅನಾಹುತಗಳು ನಡೆಯುತ್ತಿವೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಲ್ಕೆರೆ ದೊಡ್ಡಿ ಗ್ರಾಮದಲ್ಲಿ ಎಎಸ್‌ಐ ಒಬ್ಬರ ಪುತ್ರನನ್ನು (Son of Retired ASI Killed) ಇದೇ ರೀತಿ ಕೊಲೆ ಮಾಡಲಾಗಿದೆ.
ನಿವೃತ್ತ ಎಎಸ್ಐ ಮಗನಾಗಿರುವ ಬೆಂಗಳೂರು ಮೂಲದ ದೀಪಕ್ (23) ಎಂಬಾತನನ್ನು ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಈ ಕೊಲೆಯನ್ನು ಮಾಡಿದ ಆರೋಪಿ ಪ್ರಸಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Murder Case: ಆಕೆಗಾಗಿಯೇ ಲಿಂಗ ಬದಲಾಯಿಸಿಕೊಂಡರೂ ಸಿಗದವಳನ್ನು ಜೀವಂತ ಸುಟ್ಟು ಕೊಂದ!
ದೀಪಕ್ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ನಿವಾಸಿ. ಆತ ಕನಕಪುರ ತಾಲೂಕಿನ ಕಲ್ಕೆರೆ ದೊಡ್ಡಿ ಗ್ರಾಮಕ್ಕೆ ಹೋಗಿದ್ದ. ಅಲ್ಲಿ ಪ್ರಸಾದ್‌ನನ್ನು ಭೇಟಿಯಾಗಿದ್ದ. ಅವರಿಬ್ಬರು ಅಲ್ಲಿನ ಶೆಡ್ ಒಂದರಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು. ಈ ನಡುವೆ ಅವರ ಮಧ್ಯೆ ಜಗಳವಾಗಿದೆ ಎಂದು ಹೇಳಲಾಗಿದೆ. ಕುಡಿತದ ಮತ್ತಿನಲ್ಲಿ ರಾತ್ರಿ ಶೆಡ್‌ನಲ್ಲೇ ಮಲಗಿದ್ದ ದೀಪಕ್‌ನ ತಲೆ ಮೇಲೆ ಪ್ರಸಾದ್ ಕಲ್ಲು ಹೊತ್ತು ಹಾಕಿದ್ದಾನೆ. ಹೀಗಾಗಿ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕನಕಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಸಾದ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯ ಹಿಂದಿನ ನಿಜವಾದ ಕಾರಣ ಇನ್ನಷ್ಟೇ ಬಯಲಾಗಬೇಕಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ