Site icon Vistara News

ಧಾರವಾಡದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

Crime news

ಧಾರವಾಡ: ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ (Murder Case) ಮಾಡಿರುವ ಘಟನೆ ಧಾರವಾಡದ ಕೊಪ್ಪದಕೇರಿಯ ಶಿವಾಲಯದ ಬಳಿ ನಡೆದಿದೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ (60) ಹತ್ಯೆಗೀಡಾದ ವ್ಯಕ್ತಿ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೋಕರ್ಣ ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲು

ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ನೀರುಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಗೋಕರ್ಣ ಕಡಲತೀರದಲ್ಲಿ (Drown in Sea) ನಡೆದಿದೆ. ಇದೇ ವೇಳೆ ಗಂಭೀರಗೊಂಡ ಮತ್ತೊಬ್ಬ ಪ್ರವಾಸಿಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | ತಮ್ಮ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸುಟ್ಟು ಹಾಕಿ ಎಂದ ಭವಾನಿ ರೇವಣ್ಣ! ವಿಡಿಯೊ ನೋಡಿ

ಕಲಬುರಗಿ ಮೂಲದ ಅಭಿಷೇಕ್, ಆಕಾಶ್ ಮೃತ ಪ್ರವಾಸಿಗರು. ಕಲಬುರಗಿಯಿಂದ ಐವರು ಸ್ನೇಹಿತರು ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು. ಸಮುದ್ರದಲ್ಲಿ ಮೂವರು ಈಜಲು ತೆರಳಿದ್ದಾಗ ಅಲೆಗಳಿಗೆ ಸಿಲುಕಿ ಮುಳುಗಿದ್ದರು. ಈ ವೇಳೆ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದು, ಒಬ್ಬನನ್ನು ರಕ್ಷಣೆ ಮಾಡಲಾಗಿದೆ. ಗಂಭೀರಗೊಂಡ ಪ್ರವಾಸಿಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version