Site icon Vistara News

Murder Case: ಬಳ್ಳಾರಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

Crime scene

#image_title

ಬಳ್ಳಾರಿ: ನಡುರಸ್ತೆಯಲ್ಲಿ ಮಚ್ಚು ಸೇರಿ ವಿವಿಧ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಗುಗ್ಗರಹಟ್ಟಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಗುಗ್ಗರಹಟ್ಟಿಯ ಕಾರ್ಪೆಂಟರ್ ಬಾಷಾ (40) ಮೃತರು. ರಿಯಲ್ ಎಸ್ಟೇಟ್ ಹಿನ್ನೆಲೆಯಲ್ಲಿ ಕೊಲೆಯಾಗಿರುವ (Murder Case) ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರಿಂದ ಕೈ, ಎದೆ ಭಾಗದಲ್ಲಿ ಗಂಭೀರ ಗಾಯಗಳಾಗಿ ಬಾಷಾ ಮೃತಪಟ್ಟಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮತ್ತು ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Terrorists in Bengaluru : ಜೈಲಲ್ಲಿ ಟ್ರೇನಿಂಗ್‌, ಹಿಂದು ಮನೆಯಲ್ಲಿ ವಾಸ; ಏನಿದು ಬೆಂಗಳೂರು ಸ್ಫೋಟದ ಉಗ್ರ ಸಂಚು?

ಚಳ್ಳಕೆರೆಯಲ್ಲಿ ಆಟೋ ಪಲ್ಟಿಯಾಗಿ 6 ವಿದ್ಯಾರ್ಥಿಗಳಿಗೆ ಗಾಯ

ಚಿತ್ರದುರ್ಗ: ಆಟೋ ಪಲ್ಟಿಯಾಗಿ ಆರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ (Auto Rickshaw Accident) ಚಳ್ಳಕೆರೆ ನಗರದ ಬಳಿ ನಡೆದಿದೆ. ಆದರ್ಶ ವಿದ್ಯಾಲಯದಿಂದ ಚಳ್ಳಕೆರೆಗೆ ಬರುವಾರ ಬಸ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಆಟೋ ಪಲ್ಟಿಯಾಗಿದೆ.

ವಿದ್ಯಾರ್ಥಿ ವೆಂಕಟೇಶ್, ಶ್ರೀಧರ್ ಕೈ, ಕಾಲಿಗೆ ಗಂಭೀರ ಗಾಯಗಳಾಗಿದ್ದು, ಯುವರಾಜ್, ಮಧುಸೂಧನ್, ರೋಹಿತ್, ಕೀರ್ತಿ ಗೌಡಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರ್ಶ ಶಾಲೆ ಹಾಗೂ ಪದವಿ ವಿದ್ಯಾರ್ಥಿಗಳು ನಿತ್ಯ ಹಾಸ್ಟೆಲ್‌ನಿಂದ ಕಾಲೇಜಿಗೆ ಓಡಾಟ ನಡೆಸುತ್ತಾರೆ. ಹಾಸ್ಟೆಲ್ ಹಾಗೂ ಶಾಲೆ ಬಳಿ ಸರ್ಕಾರಿ ಬಸ್ ನಿಲ್ಲಿಸದ ಕಾರಣ ವಿದ್ಯಾರ್ಥಿಗಳು ಆಟೋಗಳಲ್ಲಿ ಪ್ರಯಾಣ ಮಾಡುತ್ತಾರೆ.

ಹಾಸ್ಟೆಲ್ ಹಾಗೂ ಸ್ಕೂಲ್ ಬಳಿ ಬಸ್ ಸ್ಟಾಪ್ ಕೊಡುವಂತೆ ಶಾಸಕ ಟಿ.ರಘುಮೂರ್ತಿ ಹಾಗೂ ಡಿಪೋ ಮ್ಯಾನೇಜರ್‌ಗೆ ಹಲವು ಬಾರಿ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ | Chikkaballapur News: ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

ಬೃಹತ್‌ ಮರ ಬಿದ್ದು ಕಾರು ಜಖಂ

ಚಿಕ್ಕೋಡಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಈ ನಡುವೆ ಜಿಲ್ಲೆಯ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಗಾಳಿಸಹಿತ ಮಳೆಗೆ ಬೃಹತ್‌ ಮರ ಬಿದ್ದು ನಿಂತಿದ್ದ ಕಾರೊಂದು ಜಖಂಗೊಂಡಿದೆ. ವಿನಯ್ ಕುಮಾರ್ ರಜಪೂತ ಎಂಬುವರ ಕಾರಿಗೆ ಹಾನಿಯಾಗಿದೆ. ರಸ್ತೆ ಬದಿ ಕಾರು ನಿಲ್ಲಿಸಿ ಕೆಲಸದ ನಿಮಿತ್ತ ಮಾಲೀಕ ಹೊರಗಡೆ ಹೋಗಿದ್ದರು. ಹೀಗಾಗಿ ಅದೃಷ್ಟವಶಾತ್‌ ಪ್ರಾಣಾಪಾಯ ತಪ್ಪಿದೆ.

Exit mobile version