ಬೆಂಗಳೂರು: ರಾಜಧಾನಿಯ ಕೋಣನಕುಂಟೆಯಲ್ಲಿ ಭೀಕರ ಕೃತ್ಯವೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಪುಟಾಣಿ ಮಕ್ಕಳನ್ನು ವಿಷ ಉಣಿಸಿ ಕೊಂದು (Murder of family) ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ನಾಗೇಂದ್ರ ಎಂಬಾತನೇ ಈ ರೀತಿಯಾಗಿ ಇಡೀ ಕುಟುಂಬವನ್ನು ನಾಶ ಮಾಡಲು ಹೊರಟವನು. ಅವನ ಈ ಕೃತ್ಯಕ್ಕೆ ಪತ್ನಿ ವಿಜಯ (28), ಪುಟ್ಟ ಮಕ್ಕಳಾದ ನಿಷಾ(7), ದೀಕ್ಷಾ (5) ಪ್ರಾಣ ಕಳೆದುಕೊಂಡಿದ್ದಾರೆ. ನಾಗೇಂದ್ರ ಊಟದಲ್ಲಿ ತಿಗಣೆ ಹಾಗೂ ಇಲಿ ಔಷಧ ಬೆರೆಸಿ ಹೆಂಡತಿ ಮತ್ತು ಮಕ್ಕಳನ್ನು ಕೊಲೆ ಮಾಡಿದ್ದಾನೆ.
ಬುಧವಾರ ರಾತ್ರಿ ಘಟನೆ ನಡೆದಿದ್ದು, ಗುರುವಾರ ಮಧ್ಯಾಹ್ನದ ಹೊತ್ತಿಗೆ ಬೆಳಕಿಗೆ ಬಂದಿದೆ. ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಉಣಿಸಿರುವ ನಾಗೇಂದ್ರ ಬಳಿಕ ತಾನು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಾಗೇಂದ್ರ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿಜಯ ಮತ್ತು ಮಕ್ಕಳ ಮೃತದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾಗೇಂದ್ರ
2014ರಲ್ಲಿ ನಾಗೇಂದ್ರ ಹಾಗೂ ವಿಜಯ ಮದುವೆಯಾಗಿದ್ದರು. ವಿಪರೀತ ಕುಡಿತದ ದಾಸನಾಗಿದ್ದ ನಾಗೇಂದ್ರ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಮನೆಯ ಜವಾಬ್ದಾರಿಯನ್ನೆಲ್ಲ ಪತ್ನಿ ವಿಜಯ ನೋಡಿಕೊಳ್ಳುತ್ತಿದ್ದರು. ಮೆಡಿಕಲ್ ಶಾಪ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಜಯ ತನ್ನ ತಾಯಿ ಮನೆ ಸಮೀಪವೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ವಡ್ಡರಪಾಳ್ಯದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಬ್ಬರು ಓದುತ್ತಿದ್ದರು.
ಸದ್ಯ ನಾಗೇಂದ್ರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಪ್ರಕರಣ ದಾಖಲಾಗಿದೆ.
ರಸ್ತೆಯಲ್ಲಿ ಮಲಗುವ ವಿಚಾರಕ್ಕೆ ಕಿರಿಕ್; ಬಿಹಾರಿಯಿಂದ ನಾಲ್ವರ ಮೇಲೆ ಹಲ್ಲೆ, ಒಬ್ಬ ಸ್ಥಳದಲ್ಲೇ ಸಾವು
ಬೆಂಗಳೂರು: ಮೆಜೆಸ್ಟಿಕ್ ಸಮೀಪದ ಕಪಾಲಿ ಗಲ್ಲಿಯಲ್ಲಿ ರಸ್ತೆ ಬದಿಯಲ್ಲಿ ಮಲಗುವ ಜಾಗದ ವಿಚಾರಕ್ಕೆ ಗಲಾಟೆ ನಡೆದಿದ್ದು, ಒಬ್ಬನ ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಸಂದೀಪ್ (33) ಮೃತ ದುರ್ದೈವಿ ಆಗಿದ್ದಾನೆ.
ರಸ್ತೆ ಬದಿಯಲ್ಲಿ ಸಂದೀಪ್, ರವಿ, ಶಂಕರ್ ಮತ್ತು ಕೆಂಚ ಎಂಬುವವರು ಮಲಗಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಮೊಹಮ್ಮದ್ ತೆಹಸಿನ್ ಎಂಬಾತ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆಗ ಈ ನಾಲ್ವರು ಸೇರಿ ಮೊಹಮ್ಮದ್‌ನನ್ನು ಥಳಿಸಿ ಕಳುಹಿಸಿದ್ದಾರೆ.
ಹೊಡೆತ ತಿಂದವ ಮತ್ತೆ ಬಂದ
ಹೊಡೆತ ತಿಂದು ಅಲ್ಲಿಂದ ಹೋಗಿದ್ದ ಮೊಹಮ್ಮದ್ ಪುನಃ ಮಾರ್ಚ್ 1ರ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಅದೇ ಸ್ಥಳಕ್ಕೆ ಬಂದಿದ್ದಾನೆ. ಜತೆಗೆ ಕೈಯಲ್ಲಿ ಬಡಿಗೆಯನ್ನೂ ಹೊತ್ತು ತಂದಿದ್ದಾನೆ. ಬಂದವನೇ ಮಲಗಿದ್ದ ನಾಲ್ವರ ಮೇಲೆ ಏಕಾಏಕಿ ಹಿಗ್ಗಾಮುಗ್ಗ ಥಳಿಸಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಸಂದೀಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಸ್ಥಳಕ್ಕಾಗಮಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ರವಿ (30), ಶಂಕರ್(42) ಮತ್ತು ಕೆಂಚ ಎಂಬುವವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿ ಮೊಹಮ್ಮದ್ ತೆಹಸಿನ್ (23) ಬಿಹಾರ ಮೂಲದವನಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : Murder case : ಎಷ್ಟು ಪೌಡರ್ ಹಾಕಿದರೂ ಬಿಳಿ ಆಗಲ್ಲ ಎಂದು ಹೆಂಡತಿಯನ್ನೇ ಕತ್ತು ಹಿಸುಕಿ ಕೊಂದ ಗಂಡ