Site icon Vistara News

Misbehaviour: ಬಸ್ಸಿನಲ್ಲಿ ಹಿಂದು ಮಹಿಳೆಯ ಜಡೆ ಎಳೆದು ಬೆನ್ನು ಸವರಲು ಯತ್ನಿಸಿದ ಹಮೀದ್‌

Man misbehaves with woman

#image_title

ಮಂಗಳೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಎದುರು ಸೀಟಿನಲ್ಲಿ ಕುಳಿತ ಮಹಿಳೆಯ ಜಡೆ ಎಳೆದು ಬೆನ್ನು ಸವರಲು ಯತ್ನಿಸಿದ ಘಟನೆ ನಡೆದಿದ್ದು, (Misbehaviour) ಇದರ ವಿಡಿಯೊ ವೈರಲ್‌ (video viral) ಆಗಿದೆ.

ಮಂಗಳೂರು- ಧರ್ಮಸ್ಥಳ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (KSRTC BUS) ನಡೆದ ಘಟನೆ ಇದಾಗಿದೆ. ಬಸ್ಸಿನ ಮುಂದಿನ ಸೀಟಿನಲ್ಲಿ ಒಬ್ಬ ಮಹಿಳೆ ಕುಳಿತಿದ್ದರೆ ಹಿಂದಿನ ಸೀಟಿನಲ್ಲಿ ಒಬ್ಬ ಪುರುಷ ಕುಳಿತಿದ್ದಾನೆ. ಅದು ಸೀಟಿನಲ್ಲಿ ತಲೆ ಇಡುವ ವ್ಯವಸ್ಥೆ ಇರುವ ಅರೆ ಐಷಾರಾಮಿ ಬಸ್‌. ಸೀಟಿನಲ್ಲಿ ತಲೆ ಇಡುವ ಜಾಗದ ಮಧ್ಯೆ ಅಂತರವಿರುತ್ತದೆ. ಎದುರು ಸೀಟಿನಲ್ಲಿರುವ ಮಹಿಳೆಯ ತಲೆ ಭಾಗ ಎರಡು ಸೀಟುಗಳ ತಲೆ ಇರುವ ಜಾಗದ ಮಧ್ಯೆ ಇದೆ.

ಹಿಂಬದಿಯಲ್ಲಿ ಕುಳಿತ ವ್ಯಕ್ತಿ ಆ ಸಣ್ಣ ಜಾಗದಲ್ಲಿ ಕೈ ಹಾಕಿ ಮುಂದಿರುವ ಮಹಿಳೆಯ ಜಡೆಯನ್ನು ಎಳೆಯುವುದಲ್ಲದೆ ಅದನ್ನು ಸರಿಸಿ ಬೆನ್ನು ಸವರಲು ಪ್ರಯತ್ನಿಸುತ್ತಾನೆ. ಒಂದೆರಡು ಬಾರಿ ಹೀಗೆ ಮಾಡಿದ್ದನ್ನು ನೋಡಿದ ಪಕ್ಕದ ಸೀಟಿನ ವ್ಯಕ್ತಿ ಈ ಅಸಭ್ಯ ನಡವಳಿಕೆಯನ್ನು ವಿಡಿಯೊ ಮಾಡಿದ್ದಾನೆ.

ಹಿಂಬದಿ ಸೀಟಿನಲ್ಲಿ ಕುಳಿತು ಈ ರೀತಿ ಮಾಡಿದವನು ಸುಮಾರು 55 ವರ್ಷದ ವ್ಯಕ್ತಿಯಾಗಿದ್ದು, ತಲೆಗೆ ಟೋಪಿ ಧರಿಸಿದ್ದ. ವಿಡಿಯೊ ಮಾಡಿದ ವ್ಯಕ್ತಿ ಇದನ್ನು ಬಂಟ್ವಾಳದ ಹಿಂದು ಜಾಗರಣ ವೇದಿಕೆಗೆ ಕಳುಹಿಸಿದ್ದಾನೆ.

ಇದೀಗ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಹೀಗೆ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿ ಬಂಟ್ವಾಳ ತಾಲೂಕಿನ ನಾವೂರು ನಿವಾಸಿ ಹಮೀದ್‌ ಎಂದು ಪತ್ತೆ ಹಚ್ಚಿ ಆತನ ವಿರುದ್ಧ ಬಂಟ್ವಾಳ ಠಾಣೆಗೆ ದೂರು ನೀಡಿದ್ದಾರೆ.

ಬಂಟ್ವಾಳ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷರು ನೀಡಿದ ದೂರಿನಲ್ಲಿ ಹಮೀದ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಎರಡೇ ದಿನದ ಅವಧಿಯಲ್ಲಿ ಎರಡು ನೈತಿಕ ಪೊಲೀಸ್‌ಗಿರಿ ಪ್ರಕರಣ

ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿ, ಹಿಂದು ಮುಸ್ಲಿಂ ವಿವಾದಗಳು ಒಮ್ಮಿಂದೊಮ್ಮೆಗೇ ಜಾಸ್ತಿಯಾಗಿದೆ. ಎರಡು ದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಹೋಟೆಲ್‌ ಒಂದಕ್ಕೆ ಹೋಗಿದ್ದಾಗ ಹಿಂಬಾಲಿಸಿ ಹೋದ ಮುಸ್ಲಿಂ ಯುವಕರ ತಂಡ ಅವರಿಬ್ಬರ ಮೇಲೆ ಹಲ್ಲೆ ನಡೆಸಿತ್ತು. ಹಲ್ಲೆ ನಡೆಸಿದವರಲ್ಲಿ ಇಬ್ಬರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ಇತ್ತ ಚಿಕ್ಕಮಗಳೂರಿನ ಬಣಕಲ್‌ನಲ್ಲಿ ಹಿಂದು ಯುವಕನೊಬ್ಬ ಮುಸ್ಲಿಂ ಯುವತಿಯ ಜತೆ ಸ್ನೇಹಾಚಾರ ಹೊಂದಿದ್ದ ಎಂಬ ಕಾರಣಕ್ಕೆ ಆತ ಮುಂಜಾನೆ ಉದ್ಯೋಗಕ್ಕೆ ಹೋಗುವ ಸಂದರ್ಭದಲ್ಲಿ ಕಾದು ನಿಂತು ಮುಖ, ಎದೆ, ಕಾಲು ಮತ್ತಿತರ ಜಾಗಗಗಳಿಗೆ ತೀವ್ರವಾಗಿ ಹೊಡೆಯಲಾಗಿದೆ. ಪೊಲೀಸರು ಬಂದು ಆತನನ್ನು ರಕ್ಷಿಸಬೇಕಾಯಿತು. ಇದಕ್ಕೆ ಸಂಬಂಧಿಸಿ ಮುಸ್ಲಿಂ ಯುವಕರ ಮೇಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Moral policing: ಚಿಕ್ಕಬಳ್ಳಾಪುರದ ಬಳಿಕ ಚಿಕ್ಕಮಗಳೂರು; ಮುಸ್ಲಿಂ ಯುವತಿ ಸ್ನೇಹ ಹೊಂದಿದ್ದ ಹಿಂದು ಯುವಕನಿಗೆ ಹಲ್ಲೆ

Exit mobile version