ಬಳ್ಳಾರಿ: ಪತ್ನಿ ಹಾಗೂ ಮಕ್ಕಳು ಸೇರಿ ಐವರನ್ನು ಕೊಲೆ ಮಾಡಿದ್ದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದ ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನ ಧಾರವಾಡ ಪೀಠ ಎತ್ತಿ ಹಿಡಿದಿದೆ. ಪತ್ನಿಯ ಶೀಲ ಶಂಕಿಸಿ ಪತ್ನಿ,, ಪತ್ನಿಯ ತಂಗಿ, ಹೆತ್ತ ಮೂವರು ಮಕ್ಕಳು ಸೇರಿ ಒಟ್ಟು ಐವರನ್ನು ಕೊಲೆ ಮಾಡಿದ ಹಿನ್ನೆಲೆಯಲ್ಲಿ ಅಪರಾಧಿಗೆ ಮರಣ ದಂಡನೆ ಶಿಕ್ಷೆ (Bellary News) ನೀಡಲಾಗಿದೆ.
ಜಿಲ್ಲೆಯ ಕಂಪ್ಲಿಯ ಚಪ್ಪರದಳ್ಳಿ ವಡ್ಡರ ತಿಪ್ಪೇಸ್ವಾಮಿ ಮನೆ ಬಳಿ 2017ರ ಫೆಬ್ರವರಿ 25 ರಂದು ಬೈಲೂರು ತಿಪ್ಪಯ್ಯ, ಐವರನ್ನು ಕೊಚ್ಚಿ ಕೊಲೆ ಮಾಡಿದ್ದ. ಪತ್ನಿ ಫಕೀರಮ್ಮ (36), ಪತ್ನಿಯ ತಂಗಿ ಗಂಗಮ್ಮ (30), ಮಕ್ಕಳಾದ ಬಸಮ್ಮ (9), ರಾಜಪ್ಪ(8), ಪವಿತ್ರ(6) ಹತ್ಯೆಯಾಗಿದ್ದರು.
ಇದನ್ನೂ ಓದಿ | Murder Case: ರೂಮಿನಲ್ಲಿ ಬೆಚ್ಚಗೆ ಮಲಗಿದ್ದವಳ ಕತ್ತು ಕೊಯ್ದ ಪ್ರಿಯಕರ!
ತಿಪ್ಪಯ್ಯನಿಗೆ 2019ರ ಡಿಸೆಂಬರ್ 3ರಂದು ಬಳ್ಳಾರಿ ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಹೀಗಾಗಿ ಧಾರವಾಡ ಹೈಕೋರ್ಟ್‍ನಲ್ಲಿ ಈತ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆದು ಬಳ್ಳಾರಿ ಸೆಷೆನ್ಸ್ ನ್ಯಾಯಾಲಯದ ತೀರ್ಪನ್ನೇ ಹೈಕೋರ್ಟ್‌ನ ಧಾರವಾಡ ಪೀಠ ಹಿಡಿದು ಮರಣ ದಂಡನೆ ಶಿಕ್ಷೆ ಖಚಿತಪಡಿಸಿದೆ.