Site icon Vistara News

Kodagu News: ಮ್ಯಾನೇಜರ್‌ ಕಿರುಕುಳ; ಬಸ್‌ ಡಿಪೋದಲ್ಲೇ ವಿಷ ಸೇವಿಸಿದ ನೌಕರ

Abhishek

ಕೊಡಗು: ಜಿಲ್ಲೆಯ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೋದಲ್ಲಿ (Kodagu News) ಅಧಿಕಾರಿ ಕಿರುಕುಳಕ್ಕೆ ಬೇಸತ್ತು ಸಾರಿಗೆ ನೌಕರನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ. ಡಿಪೋ ಮ್ಯಾನೇಜರ್‌ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ.

ಕಿರಿಯ ಸಹಾಯಕ ಅಭಿಷೇಕ್ (27) ವಿಷ ಸೇವಿಸಿದ ನೌಕರ. ಮಡಿಕೇರಿ ಡಿಪೋ ಮ್ಯಾನೇಜರ್ ಗೀತಾ‌ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಬಸ್ ಮ್ಯಾನೇಜರ್‌ ಗೀತಾ ಹಾಗೂ‌ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಕ(ಡಿಸಿ) ಜಯಕರಶೆಟ್ಟಿ ಎದುರು ನೌಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಎಂಟು ವರ್ಷದಿಂದ ವ್ಯವಸ್ಥಾಪಕಿಯಾಗಿರುವ ಗೀತಾ ಅವರು ಸಿಬ್ಬಂದಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವದೆ. ಇತ್ತೀಚೆಗೆ ಅವರು ವರ್ಗಾವಣೆಯಾದರೂ ರಿಲೀವ್ ಆಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ | ಅಪಹೃತ ವಿದ್ಯಾರ್ಥಿಯ ಕೊನೆ ಆಸೆಯಂತೆ ರಸಗುಲ್ಲಾ ತಿನ್ನಿಸಿದ್ರು, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ರು ಸಹಪಾಠಿಗಳು!

12ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣವಾಯ್ತಾ ಮಾನಸಿಕ ಖಿನ್ನತೆ

ಬೆಂಗಳೂರು: ವಿದ್ಯಾರ್ಥಿನಿಯೊಬ್ಬಳು 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್ಮೆಂಟ್‌ನಲ್ಲಿ (Student death) ನಡೆದಿದೆ. ಜೆಸ್ಸಿಕಾ (15) ಮೃತ ದುರ್ದೈವಿ.

ಮೃತ ವಿದ್ಯಾರ್ಥಿನಿ ಜೆಸ್ಸಿಕಾ

ಮಂಗಳವಾರ ಬೆಳಗ್ಗೆ 10:30ರ ಸುಮಾರಿಗೆ ಘಟನೆ ನಡೆದಿದೆ. ಜೆಸ್ಸಿಕಾ ಪೋಷಕರು ಮೂಲತಃ ತಮಿಳುನಾಡಿನವರು. ಜೆಸ್ಸಿಕಾ ತಂದೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷದಿಂದ ಕ್ಲಾಸಿಕ್ ಅಪಾರ್ಟ್ಮೆಂಟ್‌ನ 11ನೇ ಮಹಡಿಯಲ್ಲಿ ಇದ್ದರು.

ಇದನ್ನೂ ಓದಿ: Lokayukta raid : ತಂದೆ ನೋಡಲು ಜೈಲಿಗೆ ಬಂದವನ ಬಳಿ ಲಂಚ ಕೇಳಿದ ಜೈಲರ್‌!

ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಜೆಸ್ಸಿಕಾ, ಇತ್ತೀಚೆಗೆ ಶಾಲೆಗೂ ಸರಿಯಾಗಿ ಹೋಗುತ್ತಿರಲಿಲ್ಲ. ಕಳೆದ ಮೂರು ತಿಂಗಳಲ್ಲಿ 6 ದಿನ ಮಾತ್ರ ತರಗತಿಗೆ ಹೋಗಿದ್ದಳು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸದ್ಯ ಘಟನೆ ಸಂಬಂಧ ಬೆಳ್ಳಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆಸ್ಸಿಕಾ ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದ್ದು, ಬೆಳ್ಳಂದೂರು ಪೊಲೀಸರಿಂದ ತನಿಖೆ ಮುಂದುವರೆದಿದೆ.

Police visit the spot

ವೈಟ್ ಫೀಲ್ಡ್‌ನ ಡಿಸಿಪಿ ಗಿರೀಶ್ ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ಕ್ಲಾಸಿಕ್ ಅಪಾರ್ಟ್‌ಮೆಂಟ್‌ನಲ್ಲಿ 14 ವರ್ಷದ ಹುಡುಗಿ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ತಂದೆ ಸಾಫ್ಟ್‌ವೇರ್ ಇಂಜಿನಿಯರ್, ತಾಯಿ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದಾರೆ. ಮಂಗಳವಾರ ಬೆಳಗ್ಗೆ ಬಾಲಕಿ ಶಾಲೆಗೆ ಹೋಗಿ ಪುನಃ ವಾಪಸ್ ಬಂದಿದ್ದಾಳೆ. ನಂತರ ಶಾಲೆಯವರು ಜೆಸ್ಸಿಕಾ ತಾಯಿಗೆ ಕರೆ ಮಾಡಿ ಮಗಳು ಶಾಲೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ನಂತರ ಪೋಷಕರು ಪರಿಶೀಲನೆ ಮಾಡಿದಾಗ ವಿಚಾರ ತಿಳಿದಿದೆ. ಸದ್ಯ ಈ ಸಂಬಂಧ ತನಿಖೆಯನ್ನು ಮುಂದುವರಿಸಲಾಗುತ್ತಿದೆ ಎಂದು ಗಿರೀಶ್‌ ಮಾಹಿತಿ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version