ಮಂಡ್ಯ: ಸಕ್ಕರೆ ನಾಡು, ಚಳವಳಿಗಳ ತವರೂರು ಮಂಡ್ಯ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗಣಿಗ ರವಿಕುಮಾರ್ (60845) ಅವರು ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ನ ಬಿಆರ್ ರಾಮಚಂದ್ರು (58996) ವಿರುದ್ಧ 1849 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಕಳೆದ ಬಾರಿ ಜೆಡಿಎಸ್‌ನ ಎಂ ಶ್ರೀನಿವಾಸ್ 69,421 ಮತ್ತು ರವಿಕುಮಾರ್ ಗೌಡ 47,813 ಮತ ಪಡೆದಿದ್ದರು. ಜೆಡಿಎಸ್ 21,608 ಮತಗಳ ಅಂತರದಿಂದ ಗೆದ್ದಿತ್ತು.
ಒಟ್ಟು 2,18,991 ಮತದಾರರಿರುವ ಮಂಡ್ಯ ಕ್ಷೇತ್ರದಲ್ಲಿ 1,07,882 ಪುರುಷ, 1,11,079 ಮಹಿಳಾ ಮತದಾರರಿದ್ದಾರೆ. ಒಕ್ಕಲಿಗ ಮತದಾರರ ಸಂಖ್ಯೆ ಹೆಚ್ಚಿದೆ. 90 ಸಾವಿರ ಒಕ್ಕಲಿಗರು, 13 ಸಾವಿರ ಲಿಂಗಾಯತ, 17 ಸಾವಿರ ಮುಸ್ಲಿಮರು, 28 ಸಾವಿರ ಎಸ್‌ಸಿ, 8 ಸಾವಿರ ಎಸ್‌ಟಿ 12 ಸಾವಿರ ಕುರುಬ ಸಮುದಾಯದವರಿದ್ದಾರೆ.
ಇದನ್ನೂ ಓದಿ: Karnataka Election 2023: ಕರುನಾಡಿನೆಲ್ಲೆಡೆ ಸಂಭ್ರಮದ ಚುನಾವಣೆ; ವಧು-ವರರಿಂದಲೂ ಹಕ್ಕು ಚಲಾವಣೆ
ಒಂದು ಉಪಚುನಾವಣೆ ಸೇರಿ ಮಂಡ್ಯದಲ್ಲಿ ಇದುವರೆಗೆ 16 ವಿಧಾನಸಭೆ ಚುನಾವಣೆ ನಡೆದಿದೆ. ಬಹುತೇಕ ಬಾರಿ ಒಕ್ಕಲಿಗ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದು ಕ್ಷೇತ್ರದಲ್ಲಿ ಒಕ್ಕಲಿಗರ ಪಾರಮ್ಯ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.