Site icon Vistara News

ನಾವು 5 ವರ್ಷ ಇರ್ತಿವೋ ಇರಲ್ವೋ ಗೊತ್ತಿಲ್ಲ; ಸರ್ಕಾರದ ಆಯಸ್ಸಿನ ಬಗ್ಗೆ ಆತಂಕ ಹೊರಹಾಕಿದ ಮಂಡ್ಯ ಶಾಸಕ!

ಮಂಡ್ಯ: ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಆಡಳಿತದಲ್ಲಿ ಇರುವುದಿಲ್ಲ ಎಂದು ವಿರೋಧ ಪಕ್ಷಗಳ ನಾಯಕರು ಹೇಳುತ್ತಿರುವುದನ್ನು ನೋಡಿದ್ದೇವೆ. ಆದರೆ, ಕಾಂಗ್ರೆಸ್‌ನ ಶಾಸಕರೇ ಸರ್ಕಾರದ ಆಯಸ್ಸಿನ ಆತಂಕ ಹೊರಹಾಕಿರುವುದು ಕಂಡುಬಂದಿದೆ. ನಾನು, ಚಲುವರಾಯ ಸ್ವಾಮಿ 5 ವರ್ಷ ಇರ್ತಿವೋ ಇರಲ್ವೋ ಗೊತ್ತಿಲ್ಲ? ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ಆಯಸ್ಸಿನ ಬಗ್ಗೆ ಮಂಡ್ಯ ಶಾಸಕ ರವಿಕುಮಾರ್‌ ಗಣಿಗ ಮಾತನಾಡಿರುವುದು ಕುತೂಹಲ ಮೂಡಿಸಿದೆ.

ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಗೃಹಜ್ಯೋತಿ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ರವಿಕುಮಾರ್ ಗಣಿಗ, ಪದೇ ಪದೆ ನಾವು ಇರುತ್ತೇವೋ ಇರಲ್ಲವೋ ಎಂದು ಹೇಳುತ್ತಿದ್ದರು. ಈ ವೇಳೆ ಪಕ್ಷದ ಮೇಲೆ ನಂಬಿಕೆ ಇಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ | HD Kumaraswamy : ನಿಲ್ಲದ ಎಚ್‌ಡಿಕೆ ದಾಳಿ; ನಾಯಕರ ಹೆಸರು ಹೇಳಿ ಹೇಳಿ ಅಟ್ಯಾಕ್‌; ಮೋದಿ ಕೈಗೆ ಕೊಡ್ತಾರಾ ನೈಸ್‌ ದಾಖಲೆ?

ನಮ್ಮದು ಐದು ವರ್ಷದ ಸರ್ಕಾರ. ಯಾಕೊ ಗೊತ್ತಿಲ್ಲ ರವಿಕುಮಾರ್ ಗಣಿಗ ಆ ಮಾತನ್ನಾಡುತ್ತಿದ್ದಾರೆ. ಇಷ್ಟೆಲ್ಲಾ ಕಾರ್ಯಕ್ರಮ ಕೊಟ್ಟು ಕಾಂಗ್ರೆಸ್ ಸರ್ಕಾರ, ಮುಂದುವರಿಸಲ್ಲ ಎನ್ನುವ ಅಪನಂಬಿಕೆ ಯಾಕೆ ಬರುತ್ತಿದೆ. ಪಾಪ ಇನ್ನು ಗೊತ್ತಿಲ್ಲ ಅವನಿಗೆ. ಇನ್ನು ಮುಂದೆ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಬಿಜೆಪಿ-ಜೆಡಿಎಸ್‌ನಿಂದ ಸಾಧ್ಯವಿಲ್ಲ. ಶಾಶ್ವತವಾದ ತೀರ್ಮಾನ ತೆಗೆದುಕೊಳ್ಳುವ ಯೋಜನೆಯನ್ನು ನಾವು ಕೊಟ್ಟಿದ್ದೇವೆ. ನಾವು ಅಭಿವೃದ್ಧಿ, ರೈತರ ಪರ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ವರ್ಗದ ಜನರ ಪರ ನಾವು ನಿಲ್ಲುತ್ತೇವೆ ಎಂದು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

Exit mobile version