Site icon Vistara News

Shivaraj Kumar: ಡಿ.ಕರಡೀಗೌಡರ 10ನೇ ಪುಣ್ಯ ಸ್ಮರಣೆ; ರಾಜಕೀಯ ಬೇಡ, ಸಿನಿಮಾ ರಂಗವೇ ಸಾಕು ಎಂದ ಶಿವಣ್ಣ!

10th Anniversary of D. Karadeegowda shivarajkumar

ಮಂಡ್ಯ: ಸ್ವಾತಂತ್ರ್ಯ ಹೋರಾಟಗಾರ ಡಿ.ಕರಡೀಗೌಡರ 10ನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ 10ನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ವಳಗೆರೆಹಳ್ಳಿ ಗ್ರಾಮದ ಎಸ್.ಡಿ.ಜಯರಾಮ್ ಕ್ರೀಡಾಂಗಣದಲ್ಲಿ ನಡೆಯಿತು. ಡಿ.ಕರಡೀಗೌಡ ಪ್ರತಿಷ್ಠಾನದ ವತಿಯಿಂದ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ ನಟ ಡಾ.ಶಿವರಾಜ್ ಕುಮಾರ್ (Shivaraj Kumar), ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ , ಉಚ್ಚನ್ಯಾಯಾಲಯದ ನ್ಯಾಯಾಧೀಶರಾದ ಟಿ.ಜಿ. ಶಿವಶಂಕರೇಗೌಡ ಭಾಗಿಯಾಗಿದ್ದರು.

ಪೂರ್ಣ ಕುಂಭದೊಂದಿಗೆ ಬೆಳ್ಳಿರಥದ ಮೂಲಕ ನಟ ಶಿವರಾಜ್ ಕುಮಾರ್ ಅವರಿಗೆ ಸ್ವಾಗತಿಸಿ ವೇದಿಕೆರೆ ಗ್ರಾಮಸ್ಥರು ಕರೆ ತಂದರು. ಈ ವೇಳೆ ಶಿವಣ್ಣ ಮಾತನಾಡಿ ʻʻಸ್ವಾತಂತ್ರ್ಯ ಹೋರಾಟಗಾರ ಹೆಸರಲ್ಲಿ ನನಗೆ ಪ್ರಶಸ್ತಿ ಬಂದಿರುವುದು ಸಂತೋಷ. ಬಹಳ ಸಂತೋಷದಿಂದ ನಾನು ಪ್ರಶಸ್ತಿ ಸ್ವೀಕರಿಸಿದ್ದೇನೆ. ಘೋಸ್ಟ್ ಸಿನಿಮಾ ಬಿಡುಗಡೆಯಾಗಿದೆ ಉತ್ತಮ ರೆಸ್ಪಾನ್ಸ್ ಸಿಕ್ತಿದೆ. ವಿಭಿನ್ನ ರೀತಿಯ ಚಿತ್ರ. ಜನರ ಪ್ರೋತ್ಸಾಹ ಸಿಕ್ಕಿದ್ರೆ ಸಿನಿಮಾ ಮಾಡಲು ಸಾಧ್ಯ. ಮಾಮೂಲಿ ಸಿನಿಮಾ ಮಾಡೋದು ಬೇರೆ ಈ ಸಿನಿಮಾ ಬೇರೆ. ನಮಗೆ ಜನರಿಂದ ಪ್ರೊತ್ಸಾಹ ಸಿಕ್ಕಿದೆ. ಹೊರ ರಾಜ್ಯದಲ್ಲೂ ರೆಸ್ಪಾನ್ಸ್ ಸಿಕ್ತಿದೆ. ಕೆಜಿಎಫ್ ಬಳಿಕ ಕಾಂತಾರ,ವೇದಾ ಎಲ್ಲಾ ಸಿನಿಮಾ ಬೇರೆ ಮಟ್ಟಕ್ಕೆ ಹೋಗಿದೆ. ಘೋಸ್ಟ್ ಕೂಡ ದೊಡ್ಡ ಮಟ್ಟಕ್ಕೆ ಹೋಗುತ್ತಿದೆʼʼಎಂದರು.

ಕಾವೇರಿ ಹೋರಾಟ

ಕಾವೇರಿಗಾಗಿ ರೈತರ ಹೋರಾಟದ ವಿಚಾರ ಬಗ್ಗೆಶಿವಣ್ಣ ಮಾತನಾಡಿ ʻʻಸರ್ಕಾರಕ್ಕೆ ನಾವು ಒತ್ತಡ ತರಬೇಕು. ಯಾವ ರೀತಿ ತರಬೇಕು ಎನ್ನುವುದನ್ನು ಎಲ್ಲರೂ ತೀರ್ಮಾನ ಮಾಡಿದರೆ ಮಾಡಬಹುದು. ಇಬ್ಬರು ಸರ್ಕಾರ ಸೇರಿ ಮಾಡಿದ್ರೆ ಸಮಸ್ಯೆ ಬಗೆಹರಿಯುತ್ತೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಭಾಗಿಯಾಗಬೇಕು. ಕೇಂದ್ರ ಮಧ್ಯೆ ಪ್ರವೇಶ ಮಾಡಿದ್ರೆ ಮಾತ್ರ ಸಮಸ್ಯೆ ಇತ್ಯರ್ಥವಾಗುತ್ತದೆ. ಖಂಡಿತವಾಗಿಯೂ ನಾವು ರೈತರ ಜತೆ ಇರುತ್ತೇವೆ ನಮ್ಮ ಹೋರಾಟ ದೊಡ್ಡದಾಗಿರಬೇಕು ಬರಿ ಪ್ರತಿಮೆಗಳಿಗೆ ಬೆಂಕಿ ಹಚ್ಚುವುದಲ್ಲ. ನಮಗೆ ಕಿಚ್ಚು ಇರುತ್ತೆ ತಾಳ್ಮೆಯಿಂದ ಹೋರಾಟ ಮಾಡಬೇಕು. ನಾನು ಒಬ್ಬ ಕಲಾವಿದ ದೊಡ್ಡವರು ಸಹ ಕುಳಿತು ರೈತರ ಸಮಸ್ಯೆಗೆ ಪರಿಹಾರ ಹುಡುಕಬೇಕುʼʼಎಂದರು.

ಇದನ್ನೂ ಓದಿ: Shivaraj kumar: ಚಿತ್ರರಂಗಕ್ಕೆ ಬಂದು 37 ವರ್ಷ: ಅಭಿಮಾನಿಗಳಿಗೆ ಪತ್ರ ಬರೆದ ಶಿವಣ್ಣ

ಸಿನಿಮಾ ರಂಗವೇ ಸಾಕು

ʻʻನಾನು ಖಂಡಿತವಾಗಿಯೂ ರಾಜಕೀಯಕ್ಕೆ ಬರುವುದಿಲ್ಲ. ಸಿನಿಮಾ ರಂಗವೇ ನಮಗೆ ಸಾಕು. ಗೀತಾ ಶಿವರಾಜ್ ಕುಮಾರ್ ರಾಜಕೀಯಕ್ಕೆ ಬರುತ್ತಾರೆ. ಅವರು ಯಾವ ಕ್ಷೇತ್ರದಲ್ಲಿ ಸ್ವರ್ಧೆ ಮಾಡುತ್ತಾರೋ ಗೊತ್ತಿಲ್ಲ. ಖಂಡಿತವಾಗಿಯೂ ಸ್ಪರ್ಧೆ ಮಾಡ್ತಾರೆ. ಅವರ ಜತೆ ನಾನು ಇದ್ದೆ ಇರುತ್ತೇನೆʼʼಎಂದರು.

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ ʻʻಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿ ತೋರಿಸಿದ ವ್ಯಕ್ತಿಗಳನ್ನ ಗುರುತಿಸಿ ಸನ್ಮಾನ ಮಾಡುವುದು ಅರ್ಥಪೂರ್ಣ. ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮ ಒಳ್ಳೆಯದು. ಡಾ.ಶಿವರಾಜ್ ಕುಮಾರ್ ಅವರು ಉತ್ತಮ ಸಾಧಕ. ಅವರ ಮೇಲೆ ಜನರು ಸಾಕಷ್ಟು ಪ್ರೀತಿ ಇಟ್ಟಿದ್ದಾರೆ.
ಕರ್ನಾಟಕ ಸೇರಿ ಹಲವು ಭಾಗದಲ್ಲಿ ಒಳ್ಳೆಯ ಪ್ರೀತಿಗಳಿಸಿದ್ದಾರೆ. ಕರ್ನಾಟಕ ಲೊಕಾಯುಕ್ತಕ್ಕೆ ಬಂದ ಮೇಲೆ ಸಮಾಜದ ಬಗ್ಗೆ ತಿಳಿಯಿತು.ಸಮಾಜ ತಪ್ಪು ಮಾಡಿದವರನ್ನ ಶಿಕ್ಷಿಸುತ್ತಿತ್ತು. ಜೈಲಿಗೆ ಹೋದವರ ಜತೆ ಹೋಗಬೇಡ ಅಂತಿದ್ದರು. ಇವತ್ತು ಶ್ರೀಮಂತಿಕೆ ಗೌರವಿಸುವ ಕೆಲಸ ಆಗುತ್ತಿದೆ. ಶ್ರೀಮಂತ ನಾಗುವುದು ತಪ್ಪಿಲ್ಲ, ಇನ್ನೊಬ್ಬರ ಜೇಬಿಗೆ ಕೈ ಹಾಗಬಾರದು. ಸಮಾಜ ಬದಲಾವಣೆಯಾಗಬೇಕು. ತೃಪ್ತಿ ಇದ್ದರೆ ಯಾವ ರೋಗ ಬರುವುದಿಲ್ಲ. ಮಾನವೀಯತೆ ನಮ್ಮ ಹಿರಿಯರು ಕಟ್ಟಿದ ಮೌಲ್ಯ.. ಮೊದಲು ಮಾನವನಾಗಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಬರಲಿʼʼಎಂದರು.

Exit mobile version