Site icon Vistara News

Attack on Shop : ಯುವತಿಯ ಚುಡಾವಣೆ ಪ್ರಶ್ನಿಸಿದ ಅಂಗಡಿ ಮಾಲೀಕನಿಗೆ ಪುಂಡರಿಂದ ಹಲ್ಲೆ, 40,000 ರೂ. ಲೂಟಿ

Attack on shop in Pandavapur

ಮಂಡ್ಯ: ಯಾವ ಕಾಲ ಬಂದೋಯ್ತು ನೋಡಿ.. ಯುವತಿಯೊಬ್ಬಳನ್ನು ಸಾರ್ವಜನಿಕವಾಗಿ ಚುಡಾಯಿಸಿದ್ದನ್ನು (Molesting girl in public) ಪ್ರಶ್ನಿಸಿದ ಹಿರಿಯರೊಬ್ಬರಿಗೆ ಪುಂಡರು ಹಲ್ಲೆ ಮಾಡಿದ್ದಾರೆ. ಅವರ ಅಂಗಡಿಯನ್ನೇ ಪುಡಿ (team destroys General store) ಮಾಡಿದ್ದಾರೆ. ಹಿಂದೆ ಯಾರೋ ಒಬ್ಬರು ಹಿರಿಯರು ಇಂಥ ಪುಂಡಾಟಿಕೆಯನ್ನು ಪ್ರಶ್ನಿಸಿ ಹುಡುಗಿಯರ ರಕ್ಷಣೆಗೆ ನಿಂತರೆ ಹುಡುಗರು ದೂರ ಸರಿಯುತ್ತಿದ್ದರು. ಆದರೆ, ಈ ಪ್ರಕರಣದಲ್ಲಿ ಆ ಹಿರಿಯರನ್ನೇ ಹಿಡಿದು ಹೊಡೆದಿದ್ದಾರೆ.

ಈ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆಯ ಪಾಂಡವಪುರ ಬಸ್‌ ನಿಲ್ದಾಣದ (Pandavapura Bus stand) ಬಳಿ. ಇಲ್ಲಿನ ಪ್ರಾವಿಷನ್‌ ಸ್ಟೋರ್‌ಗೆ (Provistion store) ಬಂದಿದ್ದ ಯುವತಿಯೊಬ್ಬಳನ್ನು ಅಲ್ಲಿದ್ದ ಪುಂಡರ ಗುಂಪು ಕೆಣಕಿದೆ. ಹುಡುಗಿ ಅಸಹಾಯಕವಾಗಿ ಅಂಗಡಿ ಮಾಲೀಕರತ್ತ ನೋಡಿದ್ದಾಳೆ. ತನ್ನ ಅಂಗಡಿಯಲ್ಲಿ ವ್ಯಾಪಾರಕ್ಕೆ ಬಂದ ಹುಡುಗಿಗೆ ಹೀಗೆ ಮಾಡುವುದನ್ನು ಪ್ರಶ್ನಿಸುವ ಹೊಣೆಗಾರಿಕೆ ತನಗೂ ಇದೆ ಎಂಬ ಕಾಳಜಿಯಿಂದ ಆ ಅಂಗಡಿ ಮಾಲೀಕರು ಯುವಕರನ್ನು ಪ್ರಶ್ನೆ ಮಾಡಿದ್ದಾರೆ. ಆದರೆ, ಆ ಹುಡುಗರು ಆ ಹಿರಿಯರನ್ನೂ ಬಿಡದೆ ತಮ್ಮ ಕ್ರೌರ್ಯ ಮೆರೆದಿದ್ದಾರೆ. ಅವರಿಗೆ ಹಲ್ಲೆ ಮಾಡಿದ್ದು ಮಾತ್ರವಲ್ಲ, ಅಂಗಡಿಯನ್ನೇ (Attack on Shop) ಪುಡಿಗಟ್ಟಿದ್ದಾರೆ.

ಅಂಗಡಿಯನ್ನು ಪುಡಿಗಟ್ಟಿರುವುದು.

ಪ್ರಾವಿಷನ್ ಸ್ಟೋರ್ ಮಾಲೀಕ ಚಂದ್ರಶೇಖರ್ ಅವರು ಹಲ್ಲೆಗೆ ಒಳಗಾದವರು. ಅವರ ಅಂಗಡಿಗೆ ಯುವತಿಯೊಬ್ಬಳು ಆಗಮಿಸಿ ಸಾಮಗ್ರಿ ಖರೀದಿಸುತ್ತಿದ್ದಾಗ ಹಿರೇಮರಳಿ ಗ್ರಾಮದ ರಕ್ಷಿತ್ ಎಂಬಾತ ಯುವತಿಯನ್ನು ರೇಗಿಸಿದ್ದಾರೆ. ಈ ವೇಳೆ ಚಂದ್ರಶೇಖರ್‌ ಅವರು ʻʻಈ ರೀತಿ ಹುಡುಗಿಯನ್ನು ರೇಗಿಸಬೇಡ. ಇಲ್ಲಿಂದ ದೂರ ಹೋಗುʼʼ ಎಂದು ಬುದ್ಧಿವಾದ ಹೇಳಿದ್ದಾರೆ.

ಈ ವೇಳೆ ರಕ್ಷಿತ್‌ ಪೋನ್ ಮಾಡಿ ತನ್ನ ಕೆಲವು ಸ್ನೇಹಿತರನ್ನ ಕರೆಸಿಕೊಂಡಿದ್ದಾನೆ. ಅವರೆಲ್ಲ ಬಂದಾಗ ʻʻನನಗೆ ಬುದ್ದಿ ಹೇಳ್ತಿಯಾʼʼ ಎಂದು ಸ್ನೇಹಿತರ ಜೊತೆಗೆ ಸೇರಿ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಲಾಗಿದೆ. ಅಂಗಡಿಯಲ್ಲಿದ್ದ ಕಂಪ್ಯೂಟರ್ ಧ್ವಂಸಗೊಳಿಸಿ, 40 ಸಾವಿರ ರೂ ದೋಚಿ ಪರಾರಿಯಾಗಿದೆ ರಕ್ಷಿತ್‌ ಮತ್ತು ಟೀಮ್‌.

ಗಾಯಗೊಂಡಿರುವ ಚಂದ್ರಶೇಖರ್‌ ಅವರಿಗೆ ಪಾಂಡವಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಿತ್, ಬೋರಾಶೆಟ್ಟಿ, ವಿನಯ್ ಕುಮಾರ್ ಸೇರಿದಂತೆ ಹಲವರ ವಿರುದ್ಧ ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹನೆಯನ್ನೇ ಕಳೆದುಕೊಳ್ಳುತ್ತಿರುವ ಯುವಕರು

ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಕಾರಣಗಳಿಗಾಗಿ ದೊಡ್ಡ ದೊಡ್ಡ ಅನಾಹುತಗಳು ನಡೆಯುತ್ತಿವೆ. ಯುವಕರು ಯಾವುದೇ ಕಾರಣವಿಲ್ಲದೆ ಕಂಡಕಂಡವರ ಮೇಲೆ ಏರಿ ಹೋಗುವುದು, ಹಲ್ಲೆ ನಡೆಸುವುದು ಎಗ್ಗಿಲ್ಲದೆ ನಡೆಯುತ್ತಿದೆ. ಏನೇ ನಡೆದರೂ ಯಾರೂ ಪ್ರಶ್ನಿಸಿದರೂ ಸಿನಿಮಾ ಶೈಲಿಯಲ್ಲಿ ಬಂದು ಗದರಿಸುವುದು ಕೂಡಾ ಹೆಚ್ಚಾಗುತ್ತಿದೆ.

ಅದರಲ್ಲೂ ಮುಖ್ಯವಾಗಿ ವಾಹನಗಳಲ್ಲಿ ಹೋಗುವಾಗ ಹೆದರಿಸುವುದು, ದಾರಿಯಲ್ಲಿ ಕಂಡಕಂಡವರ ಮೇಲೆ ರೇಗುವುದು, ಬಾಯಿಗೆ ಬಂದಂತೆ ಬಯ್ಯುವುದು ಹೆಚ್ಚಾಗುತ್ತಿದೆ. ಇದನ್ನು ಹೊರಗಿನವರು ಮಾತ್ರವಲ್ಲ, ಮನೆ ಮಂದಿಯೂ ಪ್ರಶ್ನೆ ಮಾಡುವಂತಿಲ್ಲ. ಮನೆಯವರನ್ನೂ ಬೆದರಿಸುವ ಜಾಯಮಾನ ಹೆಚ್ಚುತ್ತಿದೆ.

ಇದನ್ನೂ ಓದಿ: Rowdy Murder: ರೌಡಿ ಮಹೇಶ್ ಹತ್ಯೆ; ಸಿದ್ದಾಪುರ ಕಿಂಗ್‌ ಪಟ್ಟಕ್ಕಾಗಿ ನಡೆಯಿತು ಕೊಲೆ! ಮತ್ತೆ ಶುರುವಾಯ್ತಾ ಗ್ಯಾಂಗ್‌ವಾರ್‌ ಯುಗ?

Exit mobile version