ಮಂಡ್ಯ: ಮುಂದಿನ 15 ದಿನಗಳ ಕಾಲ ಪ್ರತಿದಿನವೂ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಬೇಕು (Daily 5000 Cusec water to Tamilnadu) ಎಂಬ ಸುಪ್ರೀಂಕೋರ್ಟ್ ಆದೇಶ (Supreme Court Order) ದಿಂದ ರಾಜ್ಯ ಅತಿ ದೊಡ್ಡ ಇಕ್ಕಟ್ಟಿಗೆ ಸಿಲುಕಲಿದೆ. ಒಂದು ವೇಳೆ ಸುಪ್ರೀಂಕೋರ್ಟ್‌ನ ತೀರ್ಪನ್ನು (Cauvery Dispute) ಪಾಲನೆ ಮಾಡಿದರೆ ಮುಂದಿನ 15 ದಿನದ ಒಳಗೆ ಮಂಡ್ಯ ಜಿಲ್ಲೆಯಲ್ಲಿರುವ ಕೆ.ಆರ್.ಎಸ್. ಜಲಾಶಯ (KRS Reservior) ಬರಿದಾಗಲಿದೆ. ಬಳಿಕ ನೀರಾವರಿಗೆ ಬಿಡಿ, ಕುಡಿಯುವ ನೀರಿಗೂ ತತ್ವಾರ ಬರಲಿರುವುದು ಖಚಿತ.
ಗುರುವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ಪ್ರಾಧಿಕಾರದ ಆದೇಶವನ್ನೇ ಎತ್ತಿಹಿಡಿದಿದೆ. ಕಳೆದ ಸೆ. 13ರಂದು ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದಿನ 15 ದಿನಗಳ ಕಾಲ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂದು ಆದೇಶಿಸಿತ್ತು. ರಾಜ್ಯ ಸರ್ಕಾರ ಸರ್ವ ಪಕ್ಷ ಸಭೆ ನಡೆಸಿ ನೀರು ಬಿಡಲಾಗದು ಎಂದು ಹೇಳಿತ್ತು. ಆದರೂ ಕೆ.ಆರ್.ಎಸ್ ಮತ್ತು ಇತರ ಜಲಾಶಯಗಳಿಂದ ನೀರು ತಮಿಳುನಾಡಿಗೆ ಹರಿದಿದೆ. ಸೆ. 18ರಂದು ನಡೆದ ಪ್ರಾಧಿಕಾರದ ಸಭೆ ಸಮಿತಿಯ ತೀರ್ಪನ್ನೇ ಎತ್ತಿಹಿಡಿಯಿತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋದರೆ ಅಲ್ಲೂ ರಾಜ್ಯಕ್ಕೆ ಆಘಾತವೇ ಒದಗಿಬಂದಿದೆ.
ನಿಜವೆಂದರೆ ಯಾರೇ ಹೇಳಿದರೂ ತಮಿಳುನಾಡಿಗೆ ಪ್ರತಿ ದಿನ 5000 ಕ್ಯೂಸೆಕ್ ನೀರು ಬಿಡುವ ಸ್ಥಿತಿಯಲ್ಲಿ ರಾಜ್ಯ ಇಲ್ಲವೇ ಇಲ್ಲ. ಕೆಆರ್‌ಎಸ್ ಜಲಾಶಯದ ಸ್ಥಿತಿಯನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.
-ಕೆಆರ್‌ಎಸ್ ಜಲಾಶಯದ ಗರಿಷ್ಠಮಟ್ಟ 124.80 ಅಡಿ(ಸಾಮಾನ್ಯವಾಗಿ ಈ ಕಾಲದಲ್ಲಿ ಅದು ತುಂಬಿರುತ್ತದೆ)
– ಆದರೆ ಇಂದಿನ ನೀರಿನ ಮಟ್ಟ ಕೇವಲ 97.02 ಅಡಿ
– ಕೆಆರ್‌ಎಸ್‌ನ ಗರಿಷ್ಠ ಸಾಮರ್ಥ್ಯ 49.452 tmc
– ಇಂದಿನ ನೀರಿನ ಸಂಗ್ರಹ 20.563 tmc.
ಇದನ್ನೂ ಓದಿ: Cauvery Dispute : ರಾಜ್ಯಕ್ಕೆ ಸುಪ್ರೀಂ ಕೋರ್ಟಲ್ಲೂ ಶಾಕ್; ಕಾವೇರಿ ಪ್ರಾಧಿಕಾರ ಆದೇಶವೇ ಸರಿ ಎಂದ ಪೀಠ, ನ್ಯಾಯ ಎಲ್ಲಿದೆ?
ಸಮಸ್ಯೆಯ ಲೆಕ್ಕಾಚಾರ ಹೀಗಿದೆ ನೋಡಿ..
- ಒಂದು ವೇಳೆ ಸುಪ್ರಿಂ ತೀರ್ಪು ಪಾಲನೆ ಮಾಡಿದ್ದೇ ಆದರೆ ದಿನಕ್ಕೆ 5 ಸಾವಿರದಂತೆ 15 ದಿನಕ್ಕೆ 75 ಸಾವಿರ ಕ್ಯೂಸೆಕ್ ನೀರು ಹರಿದು ಹೋಗಲಿದೆ.
- 11 ಸಾವಿರ ಕ್ಯೂಸೆಕ್ ಗೆ 1 tmc ಅಂದ್ರೆ 50 ಸಾವಿರ ಕ್ಯೂಸೆಕ್ ಗೆ ಸುಮಾರು 7 tmc ನೀರು ಖಾಲಿಯಾಗಲಿದೆ.
- ಈಗ ಕೆಆರ್‌ಎಸ್‌ನಲ್ಲಿರುವ ನೀರು 20 tmcಯಲ್ಲಿ 5 tmc ಡೆಡ್ ಸ್ಟೋರೇಜ್. ಅದನ್ನು ಯಾವುದಕ್ಕೂ ಬಳಸಲು ಆಗುವುದಿಲ್ಲ. ಉಳಿದ 13 tmc ಯಲ್ಲಿ 5 tmc ನೀರು ತಮಿಳುನಾಡಿಗೆ ಬಿಟ್ಟರೆ ನಮ್ಮ ಬಳಕೆಗೆ ಉಳಿಯೋದು ಕೇವಲ 8 tmc ನೀರು.
- ಈ 8 tmc ನೀರಲ್ಲಿ ಬೆಂಗಳೂರು, ಮೈಸೂರು ಹಾಗೂ ಮಂಡ್ಯ ನಗರಗಳ ಜನರಿಗೆ ಕುಡಿಯುವ ನೀರಿಗೆ ತಿಂಗಳಿಗೆ 2 tmc ನೀರು ಬೇಕು.
- 8 ಟಿಎಂಸಿಯಲ್ಲಿ ನಾಲ್ಕು ತಿಂಗಳಿಗಷ್ಟೇ ನೀರು ಬಳಕೆ ಸಾಧ್ಯ.
- ಇದು ಕೇವಲ ಕುಡಿಯುವ ನೀರಿನ ಲೆಕ್ಕಾಚಾರ. ನೀರಾವರಿಯ ಯಾವ ಲೆಕ್ಕವನ್ನೂ ಇದು ಒಳಗೊಂಡಿಲ್ಲ.
- ಇದರ ಜತೆಗೆ ಕೆಆರ್‌ಎಸ್‌ನಿಂದ ಈಗಾಗಲೇ ಸಾಕಷ್ಟು ಹೊರಹರಿವು ಇದೆ. ಈ ಮೂಲಕ ಕಳೆದುಹೋಗುವ ನೀರಿನ ಲೆಕ್ಕ ಕೊಟ್ಟಿಲ್ಲ. ಅದೆಲ್ಲವನ್ನೂ ಸೇರಿಸಿದರೆ ಕೆ.ಆರ್.ಎಸ್ ಬರಿದಾಗುವುದು ಗ್ಯಾರಂಟಿ.