Site icon Vistara News

Cauvery Water Dispute : ತಮಿಳುನಾಡಿಗೆ ಇನ್ನೂ 15 ದಿನ 3000 ಕ್ಯೂಸೆಕ್‌ ನೀರು ಬಿಡಲು CWRC ಆದೇಶ

Water beind released from KRS Dam

ನವದೆಹಲಿ: ಕಾವೇರಿ ಜಲ ವಿವಾದದಲ್ಲಿ (Cauvery Water Dispute) ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water regulation Committee) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಬಿಡಲು ಶಿಫಾರಸು ಮಾಡಿದೆ. ಮಳೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ರಾಜ್ಯಕ್ಕೆ ಮತ್ತೆ ನಿರಾಸೆಯಾಗಿದೆ.

ಅಕ್ಟೋಬರ್ 16ರಿಂದ 15 ದಿನಗಳ ಕಾಲ ನೀರು ಬಿಡುವಂತೆ ಸೂಚನೆ ನೀಡಿದ್ದು, ಪ್ರತಿ ದಿನ 3000 ಕ್ಯೂಸೆಕ್ ನೀರು ಬಿಡುವಂತೆ ಶಿಫಾರಸಿನಲ್ಲಿ ತಿಳಿಸಿದೆ.

ಕರ್ನಾಟಕದ ವಾದ ಏನಿತ್ತು?

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery water Management Authority) ಜತೆ ನಡೆದ ಸಭೆಯಲ್ಲಿ ಕರ್ನಾಟಕವು ವಾದ ಮಂಡಿಸಿತ್ತು. ಯಾವುದೇ ಕಾರಣಕ್ಕೂ ನೀರು ಬಿಡಲು ಆಗುವುದಿಲ್ಲ. ದಿನಾಂಕ 10.10.2023ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು ಶೇಕಡಾ 50.891 ರಷ್ಟು ಇದೆ. ಹೀಗಾಗಿ ನೀಡು ಬಿಡುವುದು ಕಷ್ಟ ಎಂದು ಕರ್ನಾಟಕ ವಾದ ಮಂಡಿಸಿದೆ.

ಸಂಕಷ್ಟದ ಹರಿವುಗಳು ಸೇರಿದಂತೆ ಈಗ ಆಗುತ್ತಿರುವ ಜಲ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಗಮನಿಸಿದರೆ ಕರ್ನಾಟಕ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಳ ಆಗುತ್ತದೆ ಎಂಬ ಭರವಸೆಯನ್ನು ಇಟ್ಟುಕೊಳ್ಳುವುದು ಹಾಗೂ ಆ ಅಂದಾಜಿನ ಭರವಸೆ ಮೇಲೆ ನೀರು ಬಿಡುವುದು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ಅನಿಯಂತ್ರಿತ ಜಲಾನಯನದಿಂದ ಉಂಟಾಗುವ ಕೊಡುಗೆಯನ್ನು ಹೊರತುಪಡಿಸಿ ಬಿಳಿಗುಂಡ್ಲುವಿಗೆ ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಾದವನ್ನು ಮಂಡಿಸಿದೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು, ಮುಂದಿನ 15 ದಿನಗಳವರೆಗೆ ಕರ್ನಾಟಕವು 16,000 ಕ್ಯೂಸೆಕ್ (20.75 ಟಿಎಂಸಿ) ಅನ್ನು ಬಿಡುಗಡೆ ಮಾಡಬೇಕೆಂದು ಆದೇಶಿಸಿತು.

ಇದನ್ನೂ ಓದಿ: Karnataka Politics : ಡಿಕೆಶಿ ಕಾಲಿಗೆ ಬಿದ್ದಿದ್ದೇನೆ; ಅನುದಾನ ಕೊಡದಿದ್ದರೆ ಉಗ್ರ ಪ್ರತಿಭಟನೆ ಎಂದ ಮುನಿರತ್ನ

ಪ್ರಾಧಿಕಾರ ಯಾವತ್ತು ರಾಜ್ಯದ ಪರ ಇರಲಿಲ್ಲ

ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಸಹ ರಾಜ್ಯದ ಪರವಾಗಿ ಯಾವತ್ತೂ ಇಲ್ಲ. ಹೀಗಾಗಿ ಈ ಆದೇಶವನ್ನು ಮತ್ತೆ ಪ್ರಾಧಿಕಾರಕ್ಕೆ ಪ್ರಶ್ನೆ ಮಾಡಿದರೂ ಪ್ರಯೋಜನ ಇಲ್ಲದಂತೆ ಆಗುತ್ತದೆ. ಕಳೆದ ಬಾರಿ ಪ್ರಾಧಿಕಾರದ ಕದ ತಟ್ಟಿದಾಗಲೂ ಕರ್ನಾಟಕದ ಕೈ ಹಿಡಿದಿರಲಿಲ್ಲ. ಮೊದಲು ಆಗಸ್ಟ್‌ 26ರಂದು 5000 ಕ್ಯೂಸೆಕ್‌, ಬಳಿಕ ಸೆ. 12ರಂದು ಮತ್ತೆ ಐದು ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ಮಾಡಿತ್ತು. ಬಳಿಕ ಸೆಪ್ಟೆಂಬರ್‌ 29ರಂದು ಸಹ ನೀರು ಬಿಡಲು ಆದೇಶಿಸಿತ್ತು. ಎಲ್ಲ ಬಾರಿ ಮನವಿ ಮಾಡಿದಾಗಲೂ CWRC ಹೇಳಿದ್ದೇ ಸರಿ ಎಂದು ಹೇಳಿತ್ತು.

Exit mobile version