Site icon Vistara News

Doctor death : ಮಂಡ್ಯದ ಮತ್ತೊಬ್ಬ ಡಾಕ್ಟರ್‌ ಆತ್ಮಹತ್ಯೆ; ಭ್ರೂಣ ಹತ್ಯೆಗೆ ಸಂಬಂಧ ಇದ್ಯಾ?

Dr Nataraj Suicide

ಬೆಂಗಳೂರು/ ಮಂಡ್ಯ: ಮೈಸೂರು ಜಿಲ್ಲೆ ಕೊಣಸೂರು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಮಂಡ್ಯ ಮೂಲದ ಡಾ. ಸತೀಶ್‌ (Dr. Sathish death) ಅವರು ಶುಕ್ರವಾರ ತಾವು ಪ್ರಯಾಣಿಸುತ್ತಿದ್ದ ಕಾರಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ ಬೆನ್ನಿಗೇ ಮಂಡ್ಯದ ಮತ್ತೊಬ್ಬ ವೈದ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ (Mandya district health office) ಕಚೇರಿಯಲ್ಲಿ ಫ್ಯಾಮಿಲಿ ಪ್ಲಾನಿಂಗ್ ವಿಭಾಗದ ಮುಖ್ಯಸ್ಥರಾಗಿ (Family planning department head) ಕೆಲಸ ಮಾಡುತ್ತಿದ್ದ ಡಾ. ನಟರಾಜ್‌ (Dr. Nataraj Suicide) ಅವರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಮನೆಯಲ್ಲಿ ಶುಕ್ರವಾರ ರಾತ್ರಿ ನೇಣು ಬಿಗಿದುಕೊಂಡು ಪ್ರಾಣ (Doctor death) ಕಳೆದುಕೊಂಡಿದ್ದಾರೆ.

ಡಾ. ಸತೀಶ್‌ ಅವರು ಕಾರಿನಲ್ಲಿ ಮೃತಪಟ್ಟಾಗ ಅದು ಹೃದಯಾಘಾತವೋ, ಆತ್ಮಹತ್ಯೆಯೋ ಎನ್ನುವ ಬಗ್ಗೆ ಗೊಂದಲವಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅದು ದೃಢಪಡಬೇಕಾಗಿದೆ. ಈ ನಡುವೆ, ಅವರ ಹೆಸರು ಭ್ರೂಣ ಹತ್ಯೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿತ್ತು. ಅದರ ಜತೆಗೇ ಅವರು ಒಳ್ಳೆಯವರು, ಭ್ರೂಣಹತ್ಯೆ ಮಾಡಿಸುವವರಲ್ಲ. ತಮ್ಮ ಮೇಲೆ ಇಂಥ ಆಪಾದನೆ ಬಂತಲ್ಲ ಎಂಬ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಮಾತುಗಳೂ ಇವೆ. ಈಗ ಕುಟುಂಬ ಕಲ್ಯಾಣ ವಿಭಾಗದಲ್ಲೇ ಕೆಲಸ ಮಾಡುತ್ತಿರುವ ಡಾ. ನಟರಾಜ್‌ ಸಾವು ಕೂಡಾ ಅದೇ ಅನುಮಾನಗಳನ್ನು ಹುಟ್ಟು ಹಾಕಿದೆ. ಆದರೆ, ಡಾ. ನಟರಾಜ್‌ ಅವರ ಪ್ರಕರಣವೇ ಬೇರೆ ಎನ್ನುವ ವಿವರಣೆಯೂ ಇದೆ.

ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದ ಡಾ. ಸತೀಶ್‌

ಡಾ. ನಟರಾಜ್‌ ಅವರು ಕಳೆದ ಕೆಲವು ಸಮಯದಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಅವರು ಮಹಾಲಕ್ಷ್ಮಿ ಲೇಔಟ್‌ನ ಮನೆಯಲ್ಲಿ ವಾಸವಾಗಿದ್ದು, ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಡೆಯುತ್ತಿರೋ ಮರಣೋತ್ತರ ಪರೀಕ್ಷೆ ನಡೆದಿದೆ.

ಹಲವು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೇ ಗೈರಾಗಿದ್ದ ಅವರು ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳೋ ಪ್ರಯತ್ನದಲ್ಲಿದ್ದರು. ಈ ಹಿಂದೆಯೂ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.

ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಕಿರುಕುಳ ಆರೋಪ

ಈ ನಡುವೆ, ಡಾ. ನಟರಾಜ್‌ ಅವರು ಕೆಲಸ ಮಾಡುತ್ತಿದ್ದ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಡಿಎಚ್‌ಒ ನೀಡಿದ ಕಿರುಕುಳದಿಂದ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಆಪಾದನೆಯೂ ಕೇಳಿಬಂದಿದೆ. ಆದರೆ, ಡಿಎಚ್‌.ಒ ಡಾ. ಮೋಹನ್‌ ಅವರು ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಡಾ. ನಟರಾಜ್‌ ಹಲವು ಸಮಯದಿಂದ ಮಾನಸಿಕವಾಗಿ ಸಮಸ್ಯೆಯಲ್ಲಿದ್ದಾರೆ. ಅದೇ ಕಾರಣಕ್ಕಾಗಿ ಈ ರೀತಿ ಮಾಡಿಕೊಂಡಿರಬಹುದು ಎಂದಿದ್ದಾರೆ. ಜತೆಗೆ ಕೆಲವು ದಾಖಲೆಗಳನ್ನೂ ನೀಡಿದ್ದಾರೆ.

ಕಿರುಕುಳ ಆರೋಪಕ್ಕೆ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ

ಮಂಡ್ಯದಲ್ಲಿ ಡಿಎಚ್‌ಒ ಡಾ ಮೋಹನ್ ಹೇಳಿಕೆ ನೀಡಿ, ನನ್ನ ವಿರುದ್ದ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು. ಅವರು ಈ ಬಗ್ಗೆ ಸ್ಪಷ್ಟನೆಯ ಜತೆಗೆ ಡಾ. ನಟರಾಜ್‌ ಅವರು ತಮಗೆ ಕೌಟುಂಬಿಕ ಸಮಸ್ಯೆ ಇರುವುದು, ಮಾನಸಿಕವಾಗಿ ನೊಂದಿದ್ದು ಮತ್ತು ವರ್ಗಾವಣೆಗೆ ಪ್ರಯತ್ನಿಸುತ್ತಿರುವ ಬಗ್ಗೆ ನೀಡಿದ ಪತ್ರಗಳ ಎಲ್ಲ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಡಾ. ನಟರಾಜ್‌ ವರ್ಗಾವಣೆ ಕೋರಿ ಬರೆದ ಪತ್ರಗಳು ಮತ್ತು ಶಿಫಾರಸು ಪತ್ರ

1.ಡಾ ನಟರಾಜ್ ಮಂಡ್ಯ ಡಿಎಚ್ ಒ‌ ಕಚೇರಿಯಲ್ಲಿ ಫ್ಯಾಮಿಲಿ ಪ್ಲಾನಿಂಗ್ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದರು. ನಟರಾಜ್ ನಮ್ಮ ಕಚೇರಿಗೆ ಬಂದು 3 ತಿಂಗಳಾಗಿದೆ.

2.ನವೆಂಬರ್‌ 2ರಂದು ಅವರು ನನಗೆ ಹೃದಯಾಘಾತವಾಗಿದೆ ಎಂದು ಪತ್ರ ಬರೆದು ರಜೆ ಕೇಳಿದ್ದರು. ನಂತರ ನಾನು ಅವರಿಗೆ 15 ದಿನ ರಜೆ ನೀಡಿದ್ದೆ. ಬಳಿಕ ನವೆಂಬರ್‌ 17ರಂದು ಮತ್ತೆ ನನಗೆ ಪತ್ರ ಬರೆದು ಇಲ್ಲಿ ಕೆಲಸ ಮಾಡಲು ಆಗ್ತಿಲ್ಲ ತಿಳಿಸಿದ್ದರು.

3. ಕೌಟುಂಬಿಕ ಹಾಗೂ ಅನಾರೋಗ್ಯದ ಕಾರಣದಿಂದ ಹಿಂದೆ ಕೆಲಸ ಮಾಡ್ತಿದ್ದ ಜಾಗಕ್ಕೆ ವರ್ಗಾವಣೆ ಮಾಡಲು ಕೋರಿದ್ದರು. ಅವರು ವರ್ಗಾವಣೆ ಬಯಸಿದ್ದ ಕುಣಿಗಲ್ ಕ್ಷೇತ್ರದ ಶಾಸಕರ ಬಳಿಯ ಶಿಫಾರಸು ಪತ್ರ ಕೂಡ ನೀಡಿದ್ದಾರೆ.

ಇದನ್ನೂ ಓದಿ: Gender Detection : ಕಾರಿನೊಳಗೆ ವೈದ್ಯನ ಶವ ಪತ್ತೆ: ಭ್ರೂಣ‌ ಹತ್ಯೆ ತನಿಖೆಗೆ ಹೆದರಿ ಆತ್ಮಹತ್ಯೆ?

4. ನಟರಾಜ್ ಖಿನ್ನತೆಗೆ ಒಳಾಗಾಗಿದ್ದರು. ಈಗಾಗಲೇ ನಾಲ್ಕೈದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೌಟುಂಬಿಕ ಕಲಹದಿಂದ ಖಿನ್ನತೆಗೆ ಒಳಗಾಗಿದ್ದರು. ನನ್ನ ಮೇಲಿನ ಆರೋಪ ಒಂದು ಪಿತೂರಿಯಾಗಿದೆ. ಇನ್ಮುಂದೆ ನನ್ನ ವಿರುದ್ದ ಯಾರು ಪಿತೂರಿ ಮಾಡ್ತಿದ್ದಾರೆ ಎಂದು ತಿಳಿದುಕೊಂಡು ಎಚ್ಚರಿಕೆ ವಹಿಸುತ್ತೇನೆ.

5. ಹೆಣ್ಣು ಭ್ರೂಣ ಪತ್ತೆ, ಹತ್ಯೆ ಪ್ರಕರಣಕ್ಕೂ ಮೃತ ನಟರಾಜ್ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್‌ ತಿಳಿಸಿದ್ದಾರೆ.

Exit mobile version