Site icon Vistara News

Fire Accident : ಕೊಂಡ ಹಾಯುವಾಗ ಮುಗ್ಗರಿಸಿ ಬಿದ್ದ ಪೂಜಾರಿ; ಮತ್ತೊಬ್ಬ ಅರ್ಚಕ ಜಸ್ಟ್‌ ಮಿಸ್‌

Fire Accident

ಮಂಡ್ಯ: ಬಸವೇಶ್ವರ ಕೊಂಡೋತ್ಸವದ ವೇಳೆ ಕೊಂಡ ಹಾಯುವಾಗ ವೀರಗಾಸೆ ಪೂಜಾರಿಯೊಬ್ಬರು ಎಡವಿ ಬಿದ್ದ ಘಟನೆ (Fire Accident) ನಡೆದಿದೆ. ಕೊಂಡ ಹಾಯುವ ವೇಳೆ ಬಿದ್ದರಿಂದ ಮೈ-ಕೈ ಸುಟ್ಟುಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಬಸವೇಶ್ವರ ಜಾತ್ರಾಮಹೋತ್ಸವದ ಅಗ್ನಿ ಕೊಂಡೋತ್ಸವದಲ್ಲಿ ಈ ಅವಘಡ (Fire Accident) ನಡೆದಿದೆ. ಹುಳಗನಹಳ್ಳಿ ಗ್ರಾಮದಲ್ಲಿ ಬಸವೇಶ್ವರನ ಕೊಂಡೋತ್ಸವ ನಡೆಯುತ್ತಿತ್ತು. ಈ ವೇಳೆ ಕೊಂಡ ಹಾಯಲು ಓಡಿ ಬರುವಾಗ ವೀರಗಾಸೆ ಪೂಜಾರಿ ಮುಗ್ಗರಿಸಿ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಬೆಂಕಿದಿಂದ ಮೇಲೆತ್ತಿದ್ದಾರೆ.

Farmer dies after trying to douse fire in farm

ಇದಾದ ಮೇಲೂ ಮುಂಜಾಗ್ರತಾ ವಹಿಸಿದೇ ಮತ್ತೊಬ್ಬ ಪೂಜಾರಿ ದೇವರನ್ನು ಹೊತ್ತುಕೊಂಡು ಕೊಂಡ ಹಾಯಲು ಮುಂದಾಗಿದ್ದಾರೆ. ಈ ವೇಳೆ ಆತನೂ ಕೆಂಡಕ್ಕೆ ಬೀಳುವಾಗ ಕೈಯಲ್ಲಿದ್ದ ದೇವರನ್ನೆ ಬಿಟ್ಟು ಪಾರಾಗಿದ್ದಾರೆ. ಕೂದಲೆಳೆ ಅಂತರದಲ್ಲಿ ಪೂಜಾರಿ ಪಾರಾಗಿದ್ದಾರೆ. ಇನ್ನೂ ಗಾಯಗೊಂಡಿರುವ ವೀರಗಾಸೆ ಪೂಜಾರಿಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಂಕಿ ಆರಿಸಲು ಹೋಗಿ ಸುಟ್ಟು ಕರಕಲಾದ ರೈತ

ಹಾಸನ: ಬೆಂಕಿ ಆರಿಸಲು ಹೋದ ರೈತ ಬೆಂಕಿಗಾಹುತಿಯಾದ ದಾರುಣ ಘಟನೆ ಹಾಸನದ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೇವು ಗ್ರಾಮದಲ್ಲಿ ನಡೆದಿದೆ. ಕೃಷ್ಣೇಗೌಡ (62) ಮೃತ ದುರ್ದೈವಿ.

ಮಂಗಳವಾರ ಸಂಜೆ ಕೃಷ್ಣೇಗೌಡ ತಮ್ಮ ಜಮೀನಿಗೆ ತೆರಳಿದ್ದಳು. ಈ ವೇಳೆ ಜಮೀನಿನ ಬದುವಿನಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿತ್ತು. ತೋಟಕ್ಕೆಲ್ಲಾ ಬೆಂಕಿ ವ್ಯಾಪಿಸುತ್ತದೆ ಎಂದು ಆತಂಕಗೊಂಡ ಕೃಷ್ಣೇಗೌಡರು ಬೆಂಕಿ ನಂದಿಸಲು ಹೋಗಿದ್ದರು.

ಜೋರಾಗಿ ಉರಿಯುತ್ತಿದ್ದ ಬೆಂಕಿಗೆ ಸಿಲುಕಿ ಕೃಷ್ಣೇಗೌಡರು ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಕೂಡಲೇ ಗ್ರಾಮಸ್ಥರು ಗಾಯಾಳುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೊಳೆನರಸೀಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೃಷ್ಣೇಗೌಡರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Fraud Case : ಬಾಳು ಕೊಡುವುದಾಗಿ ನಂಬಿಸಿ ಹಣ ಲೂಟಿ; ತಮಟೆ ಹಿಡಿದು ನೊಂದ ಮಹಿಳೆಯ ಧರಣಿ

ಅನಿಲ ಸೋರಿಕೆಯಿಂದ ಬೆಂಕಿ; ಅಡುಗೆ ಮನೆಯಲ್ಲೇ ಸುಟ್ಟು ಕರಕಲಾದ ಮಹಿಳೆ

ಧಾರವಾಡ: ಅಡುಗೆ ಮನೆಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ (Gas leakage from cylinder) ಮನೆಗೆ ಬೆಂಕಿ ಹತ್ತಿಕೊಂಡು (Fire Accident at House) ಆ ಬೆಂಕಿಯಲ್ಲಿ ಮಹಿಳೆಯೊಬ್ಬರು ದಹಿಸಿ (Woman Burnt Alive) ಹೋದ ಭೀಕರ ಘಟನೆ ಧಾರವಾಡ (Dharwad News) ತಾಲೂಕಿನ ಕಲ್ಲೆ ಗ್ರಾಮದಲ್ಲಿ ನಡೆದಿದೆ.

ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಈ ಮನೆಯ ಅಡುಗೆ ಮನೆಯಲ್ಲಿ ಇದ್ದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಗ್ಯಾಸ್‌ ಸ್ಟವ್‌ನಿಂದ ಬೆಂಕಿ ಹತ್ತಿಕೊಂಡಿತು. ಆಗ ಅಡುಗೆ ಮನೆಯಲ್ಲಿದ್ದ ಮಹಾದೇವಿ ಒಗೆನ್ನವರ(28) ಅವರಿಗೆ ಬೆಂಕಿ ಹತ್ತಿಕೊಂಡಿತು. ಬೆಳಗ್ಗೆ ಬೆಳಗ್ಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆಗೆ ಹೊರಗೆ ಬರಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಅವರಿಗೆ ತುಂಬಾ ಸುಟ್ಟ ಗಾಯಗಳಾದವು.

ಈ ನಡುವೆ, ಆಕೆಯನ್ನು ರಕ್ಷಿಸಲು ಇನ್ನೂ ಕೆಲವು ಮಹಿಳೆಯರು ಮುಂದಾಗಿದ್ದು, ಅವರಿಗೂ ಸುಟ್ಟ ಗಾಯಗಳಾಗಿವೆ. ಮಹಾದೇವಿ ಸೇರಿದಂತೆ ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾದೇವಿ ಅವರು ಮೃತಪಟ್ಟರೆ ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ಆರಿಸುವಲ್ಲಿ ನೆರವಾದರು.

Farmer dies after trying to douse fire in farm

ಚಾರ್ಜ್‌ ಹಾಕಿದ್ದ ವೇಳೆ ಶಾರ್ಟ್‌ ಸರ್ಕ್ಯೂಟ್; ಹೊತ್ತಿ ಉರಿದ ವಾಹನಗಳು

ಬೇಸಿಗೆ ಶುರುವಾಗುತ್ತಿದ್ದಂತೆ ಅಗ್ನಿ ಅವಘಡಗಳು ಹೆಚ್ಚಾಗುತ್ತಿದೆ. ಎಲೆಕ್ಟ್ರಿಕ್ ಬೈಕ್‌ಗೆ ಚಾರ್ಜ್ ಹಾಕಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ನಂತರೆ ಪಕ್ಕದಲ್ಲೇ ಇದ್ದ ಮತ್ತೊಂದು ಬೈಕ್, ಕಾರಿಗೂ ಬೆಂಕಿ ಆವರಿಸಿ ಭಸ್ಮವಾಗಿದೆ. ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಘಟನೆ ನಡೆದಿದೆ. ಗುಂಡಪ್ಪ ಎಂಬುವವರಿಗೆ ಸೇರಿದ ವಾಹನ ಸುಟ್ಟು ಕರಕಲಾಗಿದೆ. ಬೆಂಕಿಯು ಒಮ್ಮೆಲೆ ಆವರಿಸಿದ ಕಾರಣಕ್ಕೆ ಮನೆಗೂ ಹಾನಿಯಾಗಿದೆ. ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version