ಮಂಡ್ಯ: ಪರಪುರುಷನ ಪತ್ನಿಯನ್ನು ಸರಸವಾಡಲು ಮನೆಗೆ ಕರೆಸಿ ಮಾಜಿ ಶಾಸಕರ ಸಹೋದರ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ಕೂರಿಸಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯಲ್ಲಿ ಈ ಘಟನೆ ಕಾಂಗ್ರೆಸ್ಗೆ ಮುಜುಗರ ಸೃಷ್ಟಿಸಿದೆ. ಕೆ.ಆರ್ ಪೇಟೆಯ ಮಾಜಿ ಶಾಸಕ, ಕಾಂಗ್ರೆಸ್ನ ಕೆ.ಬಿ ಚಂದ್ರಶೇಖರ್ ಅವರ ಸಹೋದರ ರವಿ ಎಂಬವರೇ ಸಿಕ್ಕಿಬಿದ್ದವರು. ವಿವಾಹಿತ ಮಹಿಳೆಯನ್ನು ಯಾರೂ ಇಲ್ಲದಾಗ ಕೆ.ಆರ್ ಪೇಟೆಯಲ್ಲಿರುವ ಮನೆಗೆ ರವಿ ಕರೆಸಿಕೊಂಡಿದ್ದರು.
ತಮ್ಮ ಪತ್ನಿ ರವಿಯ ಮನೆಯಲ್ಲಿರುವಾಗಲೇ ಸಂಬಂಧಿಕರ ಜೊತೆಗೆ ಅಲ್ಲಿಗೆ ಮಹಿಳೆಯ ಪತಿ ದಾಳಿ ಮಾಡಿದ್ದಾರೆ. ಮನೆಯೊಳಗಿದ್ದ ಇಬ್ಬರನ್ನೂ ಹಿಡಿದು ಕೆ.ಆರ್ ಪೇಟೆ ಪಟ್ಟಣ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಪ್ರಕರಣ ಬಗೆಹರಿಸಲು ಮಾತುಕತೆ ನಡೆಯುತ್ತಿದೆ.
ಇದನ್ನೂ ಓದಿ: Fraud Case: ತಾನು ಗರ್ಭಿಣಿ ಎಂದು ನಂಬಿಸಿ ಮದುವೆಯಾದ ಯುವತಿ, ವಂಚನೆ ಕೇಸ್ ದಾಖಲು