Site icon Vistara News

HD Kumaraswamy : ನಾನು ಹೇಳಿದ ಹಾಗೆ ಮಾಡ್ತೀರಾ?; ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ಕುಮಾರಸ್ವಾಮಿ ನೀಡಿದ 3 ಸಲಹೆಗಳು

HD Kumaraswamy at KRS

ಮೈಸೂರು: ಬಿಜೆಪಿ ನಾಯಕರ ಜತೆ ಮೈತ್ರಿ ಮಾತುಕತೆಗಾಗಿ (BJP-JDS Alliance) ದಿಲ್ಲಿಗೆ ತೆರಳಿದ್ದ ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ(HD Kumaraswamy) ಅವರು ಅಲ್ಲಿಂದ ಮರಳುತ್ತಲೇ ಕಾವೇರಿ ಹೋರಾಟದ ಕಣಕ್ಕೆ (Cauvery dispute) ಧುಮುಕಿದ್ದಾರೆ. ಶನಿವಾರ ದಿಲ್ಲಿಯಿಂದ ಬಂದವರೇ ನೇರವಾಗಿ ಮಂಡ್ಯದ ಕೆಆರ್‌ಎಸ್‌ ಅಣೆಕಟ್ಟೆಗೆ (KRS Dam) ಭೇಟಿ ನೀಡಿ ಅಲ್ಲಿನ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ಮಂಡ್ಯದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ (Protest at Mandya) ಪಾಲ್ಗೊಂಡರು.

ಸರ್ಕಾರಕ್ಕೆ ಎಚ್.ಡಿ.ಕುಮಾರಸ್ವಾಮಿ ಮಹತ್ವದ ಮೂರು ಸಲಹೆ

ಕೆಆರ್‌ಎಸ್‌ ಅಣೆಕಟ್ಟೆಗೆ ಭೇಟಿ ನೀಡಿದ ಅವರು ಅಲ್ಲಿನ ಪರಿಸ್ಥಿತಿಯನ್ನು ಕಂಡು ಈ ಪರಿಸ್ಥಿತಿಯಲ್ಲಿ ನೀರು ಬಿಡುವುದು ಸಾಧ್ಯವೇ ಎಂದು ಕೇಳಿದರು. ಕೆಆರ್‌ಎಸ್ ಅಣೆಕಟ್ಟೆಗೆ ಭೇಟಿ ನೀಡಿದ ಜೆಡಿಎಸ್ ನಿಯೋಗದಲ್ಲಿ ಕುಮಾರಸ್ವಾಮಿ ಅವರ ಜತೆ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಡಿ.ಸಿ.ತಮ್ಮಣ್ಣ ಸೇರಿದಂತೆ ಪ್ರಮುಖರು ಇದ್ದರು.

ಅಣೆಕಟ್ಟೆ ಅವಲೋಕನ ಮಾಡಿದ ಬಳಿಕ ಮಾತನಾಡಿದ ಅವರು ಮೂರು ಸಲಹೆಗಳನ್ನು ನೀಡಿದರು.

  1. ಪಾಲಿಸಲಾಗದ ಆದೇಶ ಪಾಲಿಸದೇ ಇದ್ದರೆ ನ್ಯಾಯಾಂಗ ನಿಂಧನೆ ಆಗಲ್ಲ. ಈ ಸಂಬಂಧ 2016ರಲ್ಲಿ ಸುಪ್ರೀಂಕೋರ್ಟ್ ತೀರ್ಪು ಇದೆ. ಇದರ ಆಧಾರದ ಮೇಲೆ ನೀರು ನಿಲ್ಲಿಸಿ ಸುಪ್ರೀಂಕೋರ್ಟ್‌ನಲ್ಲಿ ಚಾಲೆಂಜ್ ಮಾಡಿ.
  2. ಮೂವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಾಜ್ಯದಲ್ಲಿ ಇದ್ದಾರೆ. 6 ನ್ಯಾಯಾಲಯಗಳು, ಅಕ್ವೋಕೇಟ್ ಜನರಲ್ ಆಗಿದ್ದವರು ಇದ್ದಾರೆ. ಅವರ ಸಭೆ ಮಾಡಿ ಕಾನೂ‌ನು ಹೋರಾಟಕ್ಕೆ ಸಲಹೆ ಪಡೆಯಿರಿ.
  3. ಸಂಕಷ್ಟ ಸೂತ್ರ ರಚಿಸಲು ಇದು ಸಕಾಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮಾರ್ಗಸೂಚಿ ಸಿದ್ಧಪಡಿಸಿ.
Kumaraswamy and team at KRS dam

ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಸರಕಾರಕ್ಕೆ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಸಮರ್ಥರವಾಗಿ ಬಳಸಿಕೊಳ್ಳಬೇಕು. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಸಲಹೆ ನೀಡಿದರು.

ಪ್ರಾಧಿಕಾರಕ್ಕೆ ಮಾಹಿತಿ ನೀಡುವಲ್ಲಿ ಸರ್ಕಾರ ವಿಫಲ ಎಂದ ಎಚ್‌ಡಿಕೆ

ಮಂಡ್ಯದಲ್ಲಿ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಬಂದ್‌ ಮತ್ತು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಚ್.ಡಿ ಕುಮಾರಸ್ವಾಮಿ ಅವರು, ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ ಮುಂದೆ ಸೂಕ್ತ ಮಾಹಿತಿ ಕೊಡವಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ʻʻಸರ್ಕಾರ ಆರಂಭಿಕ ದಿನಗಳಲ್ಲಿ ವಿಷಯ ಪ್ರಸ್ತಾಪಿಸುವಾಗ ಲಘುವಾಗಿ ತೆಗೆದುಕೊಂಡಿದ್ದಾರೆ. ಕಾವೇರಿ ನಿರ್ವಹಣಾ ಪ್ರಾಧಿಕಾರದ ಮುಂದೆ ಮನವರಿಕೆ ಮಾಡಿಕೊಡುವುದರಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಸಮಸ್ಯೆ ಉದ್ಭವವಾಗಿದೆ ಎಂದರು.

ನಾನು, ಬಸವರಾಜ ಬೊಮ್ಮಾಯಿಯವರು ನೀರು ಬಿಡಬೇಡಿ ಎಂದು ಹೇಳಿದೆವು. ಆದರೂ ಕಾನೂನು ತಜ್ಞರ ಮಾತು ಕೇಳಿ ನೀರು ಬಿಟ್ಟಿದ್ದಾರೆ. ಈಗ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದರು.

ಇದನ್ನೂ ಓದಿ: Cauvery Protest: ಬೆಂಗಳೂರು ಬಂದ್‌ ಮಾಡುವುದು ಬೇಡ ಎಂದ ಡಿಕೆಶಿ, ಪ್ರತಿಭಟನೆ ಹಕ್ಕಿಗೆ ವಿರೋಧವಿಲ್ಲ ಎಂದ ಸಿದ್ದರಾಮಯ್ಯ

ʻʻಬಂಗಾರಪ್ಪನವರು ಚಿಟಿಕೆ ಹೊಡೆದಂಗೆ ಸಮಸ್ಯೆ ಬಗೆಹರಿಸಿದ್ರು ಅಂತ ಮಧು ಬಂಗಾರಪ್ಪ ಹೇಳಿದ್ದಾರೆ. ಯಾವ ಸಮಸ್ಯೆ ಪರಿಹರಿಸಿದ್ರು? ಬೆಂಗಳೂರಿನಲ್ಲಿ ಬಂದ್ ಹೆಸರಲ್ಲಿ ಲೂಟಿ ಮಾಡಿಸಿದರು. ಬಂದ್ ಹೆಸರಲ್ಲಿ ಏನೇನಾಯ್ತು ಅಂತ ನಾವು ನೋಡಿದ್ದೇವೆ. ಮುಗ್ಧ ಜನರ ವಿಷಯದಲ್ಲಿ ನಾವು ಆಟ ಆಡಬಾರದು. ಇದರಲ್ಲಿ ತಾಂತ್ರಿಕ ವಿಷಯಗಳಿವೆʼʼ ಎಂದರು.

Exit mobile version