Site icon Vistara News

Actor Darshan : ನಾವಷ್ಟೇ ಕಾಣ್ಸೋದಾ? ಹೇಳಿಕೆಯಿಂದ ರೈತರ ಕೆಂಗಣ್ಣಿಗೆ ಗುರಿಯಾದ ನಟ ದರ್ಶನ್‌; ಕ್ಷಮೆ ಯಾಚನೆಗೆ ಆಗ್ರಹ

protest against Actor Darshan

ಮಂಡ್ಯ: ಕಾವೇರಿ ಹೋರಾಟ (Cauvery protest) ಎಂದ ಕೂಡಲೇ ನಿಮ್ಮ ಕಣ್ಣಿಗೆ ದರ್ಶನ್, ಸುದೀಪ್ , ಶಿವಣ್ಣ, ಯಶ್, ಅಭಿ ಮಾತ್ರ ಕಾಣೋದಾ? ಬೇರೆ ತಮಿಳು ಚಿತ್ರದಲ್ಲಿ ಕೋಟಿ ಕೋಟಿ ಮಾಡಿದವನು ಕಾಣ್ತಿಲ್ವ? ಎಂಬ ನಟ ದರ್ಶನ್‌ (Actor Darshan) ಅವರ ಹೇಳಿಕೆ ಮಂಡ್ಯದ ರೈತರ (Farmers of Mandya) ಕೆಂಗಣ್ಣಿಗೆ ಗುರಿಯಾಗಿದೆ.

ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ (Mandya Jilla raitha hitha rakshana samiti) ಮಂಡ್ಯದಲ್ಲಿ ನಡೆಸುತ್ತಿರುವ ಧರಣಿಯಲ್ಲಿ ದರ್ಶನ್‌ ಅವರ ಹೇಳಿಕೆ ಪ್ರಸ್ತಾಪವಾಗಿದೆ. ಇದೊಂದು ಬೇಜವಾಬ್ದಾರಿತನ ಹೇಳಿಕೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲ, ನಟ ದರ್ಶನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆಯುತ್ತಿರುವ ಹೋರಾಟ ವೇಳೆ ಮಾತನಾಡಿದ ಪ್ರತಿಭಟನಾಕಾರರು, ದರ್ಶನ್‌ ಅವರು ರೀತಿ ಮಾತನಾಡಬಾರದಿತ್ತು. ನಾವು ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ದರ್ಶನ್ ಬಂದ್ರೆ ಬಲಸಿಗುತ್ತದೆ ಎಂದು ಭಾವಿಸಿದ್ದೆವು. ಆದರೆ, ನೀವು ನಮ್ಮನ್ನೇ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದೀರಿʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಹೋರಾಟಕ್ಕೆ ನೀಡಿದ ಆಮಂತ್ರಣವನ್ನೇ ತಪ್ಪಾಗಿ ಭಾವಿಸಿ ಈ ರೀತಿಯಾಗಿ ಮಾತನಾಡಿದ್ದು ತಪ್ಪು. ಕಾವೇರಿ ಕೊಳ್ಳದ ಜಿಲ್ಲೆಯವರಾಗಿ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಬಾರದು ಎಂದು ಹೇಳಿದ ಪ್ರತಿಭಟನಾಕಾರರು, ನಟ ದರ್ಶನ್ ಅವರು ಕೂಡಲೇ ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಒಬ್ಬ ಜವಾಬ್ದಾರಿಯುತ ನಟನಾಗಿ ಹೋರಾಟಕ್ಕೆ ದನಿಗೂಡಿಸಿ ಎಂದು ಆಗ್ರಹಿಸಿದರು.

ಏನು ಹೇಳಿದ್ದರು ನಟ ದರ್ಶನ್‌?

ಕಾವೇರಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಚಿತ್ರ ನಟರು ಯಾರೂ ಯಾಕೆ ಭಾಗವಹಿಸುತ್ತಿಲ್ಲ, ಅವರೇಕೆ ಮೌನ ಎಂದು ಕನ್ನಡ ಪರ ಹೋರಾಟಗಾರರು ಪ್ರಶ್ನೆ ಮಾಡಿದ್ದರು. ಈ ಮಾತು ಬರುತ್ತಿದ್ದಂತೆಯೇ ಚಿತ್ರ ನಟರೆಲ್ಲ ಟ್ವೀಟ್‌ ಮಾಡುವ ಮೂಲಕ ಬೆಂಬಲ ಸಾರಿದ್ದರು. ನಟ ದರ್ಶನ್‌ ಕೂಡಾ ತಮ್ಮ ಬೆಂಬಲ ನೀಡಿದ್ದರು.

ಈ ನಡುವೆ ಮೈಸೂರಿನ ಟಿ. ನರಸೀಪುರದ ಬನ್ನೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು ವಿವಾದಕ್ಕೆ ತಿರುಗಿದೆ. ನನ್ನ ಈ ಮಾತು ವಿವಾದಕ್ಕೆ ಒಳಗಾಗುತ್ತದೆ, ವಿವಾದಾತ್ಮಕ ಮಾತನ್ನೇ ಆಡುತ್ತೇನೆ ಎಂದೇ ಪ್ರಸ್ತಾವಿಸಿ ಈ ಮಾತುಗಳನ್ನು ಹೇಳಿದ್ದರು.

ಇದನ್ನೂ ಓದಿ: Actor Darshan : ಕಾವೇರಿ ಹೋರಾಟಕ್ಕೆ ನಾನು, ಸುದೀಪ್‌, ಶಿವಣ್ಣ, ಯಶ್ ಮಾತ್ರಾ ಕಾಣ್ಸೋದಾ?; ನಟ ದರ್ಶನ್‌ ಆಕ್ರೋಶ

ನಟ ದರ್ಶನ್‌ ಅವರು ಹೇಳಿದ್ದು ಇಷ್ಟು….

  1. ದರ್ಶನ್, ಸುದೀಪ್ , ಶಿವಣ್ಣ, ಯಶ್, ಅಭಿ ಮಾತ್ರ ನಿಮ್ಮ‌ ಕಣ್ಣಿಗೆ ಕಾಣೋದಾ? ಬೇರೆ ತಮಿಳು ಚಿತ್ರದಲ್ಲಿ ಕೋಟಿ ಕೋಟಿ ಮಾಡಿದವನು ಕಾಣ್ತಿಲ್ವ?
  2. ಇತ್ತೀಚೆಗೆ ತಮಿಳು ಸಿನಿಮಾ ಬಿಡುಗಡೆಯಾಯಿತು. ಆ ಸಿನಿಮಾವನ್ನು ಕನ್ನಡದ ವಿತರಕರೊಬ್ಬರು ಕರ್ನಾಟಕ‌ ಹಂಚಿಕೆಗೆ 6 ಕೋಟಿ ರೂ. ಖರೀದಿ ಮಾಡಿದರು (ಜೈಲರ್‌ ಸಿನಿಮಾ ವಿತರಣೆ ಮಾಡಿದ್ದು ಜಯಣ್ಣ). ಆದರೆ ಅವರು 36-37 ಕೋಟಿ ರೂ. ಸಂಪಾದಿಸಿದರು. ಕನ್ನಡದವರು ತಮಿಳು ಸಿನಿಮಾಗೆ 37 ಕೋಟಿ ರೂ. ಕೊಂಡೊಯ್ಯಲು ಬಿಟ್ಟು ಈಗ ಕನ್ನಡ ಕಲಾವಿದರನ್ನು ಮಾತ್ರ ಹೋರಾಟಕ್ಕೆ ಕರೆಯೋದು ಯಾವ ನ್ಯಾಯ?
  3. 3.ತಮಿಳು ಸಿನಿಮಾಕ್ಕೆ 37 ಕೋಟಿ ರೂ. ಕೊಟ್ರಲ್ಲಾ ಅವರನ್ನು ಹೋರಾಟಕ್ಕೆ ಕರೆಯಿರಿ. ಕನ್ನಡಿಗರು ಕನ್ನಡ ಸಿನಿಮಾನೆ ನೋಡಲ್ಲ. ತಮಿಳು ಸಿನಿಮಾಗೆ 37 ಕೋಟಿ ಕೊಡ್ತೀರಿ. ಇಷ್ಟೆಲ್ಲ ಹಣ ಕನ್ನಡಿಗರು ಸಿನಿಮಾ ನೋಡಿದ್ರಿಂದ‌ ತಾನೆ ಬಂದಿದ್ದು. ಕನ್ನಡಿಗರು ಸಿನಿಮಾ ಮಾಡಿದ್ರೆ ಅದನ್ನ ನೀವು ನೋಡಲ್ಲ. ನೀವು ಬೇರೆ ಭಾಷೆಗೆ ತೋರಿಸುವ ಪ್ರೀತಿ ನಮ್ಮ ಸಿನಿಮಾಗೂ ತೋರಿಸಿ. ಆ ಮೇಲೆ ಕನ್ನಡ ಕಲಾವಿದರನ್ನು ಕರೆಯಿರಿ

Exit mobile version