Site icon Vistara News

Mandya News: ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲ್ಲಿಸಿ ಎಂದ ಸಾಧುಕೋಕಿಲ

comedy actor Sadhukokila campaign for Star Chandru in kr Pete

ಕೆ.ಆರ್. ಪೇಟೆ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಹಾಸ್ಯ ನಟ ಸಾಧುಕೋಕಿಲ ಅವರು ಮತಪ್ರಚಾರ (Mandya News) ನಡೆಸಿದರು.

ಕೆ.ಆರ್.ಪೇಟೆಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಎದುರಾಳಿ ಯಾರಾದರೇನು? ಎಲ್ಲಾ ಕಡೆ ಕಾಂಗ್ರೆಸ್ ಶಾಸಕರಿರುವಾಗ ಸಂಸದರು ಕೂಡ ಕಾಂಗ್ರೆಸ್‌ನವರೇ ಆಗಬೇಕಲ್ವ? ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಜನಸೇವೆ ಮಾಡಲೆಂದು ಬಂದಿದ್ದಾರೆ. ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿ, ಚಲುವರಾಯಸ್ವಾಮಿ ಕೈ ಬಲಪಡಿಸಿ ಎಂದು ತಿಳಿಸಿದರು.

ಇದನ್ನೂ ಓದಿ: Money Guide: ಮೊಬೈಲ್‌ನಲ್ಲಿಯೇ ಪಿಎಫ್‌ ಮೊತ್ತ ಪರಿಶೀಲಿಸಬೇಕೆ?; ಜಸ್ಟ್‌ ಹೀಗೆ ಮಾಡಿ ಸಾಕು

ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಇದು ಸ್ವಾಭಿಮಾನದ ಚುನಾವಣೆ ಆಗಬೇಕು. ಅಭಿವೃದ್ಧಿಗೆ ಮತ ಹಾಕಬೇಕು. ಕಾಂಗ್ರೆಸ್ ಕೊಟ್ಟ ಕಾರ್ಯಕ್ರಮಗಳಿಗೆ ಕೆಆರ್ ಪೇಟೆಯಲ್ಲಿ ನಮಗೆ ಅನ್ಯಾಯ ಆಗಬಾರದು. ಮನಸ್ತಾಪ, ಭಿನ್ನಾಭಿಪ್ರಾಯ ಬಿಟ್ಟು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಎಂದು ಕರೆಕೊಟ್ಟರು.

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಚಲುವರಾಯಸ್ವಾಮಿ ಸೇರಿದಂತೆ ಎಲ್ಲಾ ನಾಯಕರು ಒಮ್ಮತದಿಂದ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಕ್ಷೇತ್ರದ ಜನತೆ ಕೂಡ ಒಮ್ಮತದಿಂದ ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Vastu Tips: ಬಾತ್‌ರೂಮ್‌ನ ವಾಸ್ತು ದೋಷ ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು; ನಿವಾರಣೆಗೆ ಇಲ್ಲಿದೆ ಟಿಪ್ಸ್‌

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಮಾಜಿ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿದರು.

Exit mobile version