Vastu Tips: ಬಾತ್‌ರೂಮ್‌ನ ವಾಸ್ತು ದೋಷ ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು; ನಿವಾರಣೆಗೆ ಇಲ್ಲಿದೆ ಟಿಪ್ಸ್‌ - Vistara News

ಲೈಫ್‌ಸ್ಟೈಲ್

Vastu Tips: ಬಾತ್‌ರೂಮ್‌ನ ವಾಸ್ತು ದೋಷ ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು; ನಿವಾರಣೆಗೆ ಇಲ್ಲಿದೆ ಟಿಪ್ಸ್‌

Vastu Tips: ಮನೆಯ ಮುಖ್ಯ ಭಾಗಗಳಲ್ಲಿ ಬಾತ್‌ರೂಮ್‌ ಕೂಡ ಒಂದು. ಕೆಲವೊಮ್ಮೆ ನಾವು ಬಾತ್‌ರೂಮ್‌ ವಿಚಾರದಲ್ಲಿ ಇರಿಸುವ ತಪ್ಪು ಹೆಜ್ಜೆ ಬಹು ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾದರೆ ನಾವು ಯಾವೆಲ್ಲ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

vastu tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಾತ್‌ರೂಮ್‌-ಮನೆಯ ಬಹು ಮುಖ್ಯ ಭಾಗಗಳಲ್ಲಿ ಒಂದು. ದಿನವಿಡೀ ಹೊರಗಿದ್ದು ದಣಿದು ಬರುವವರು ಬಾತ್‌ರೂಮ್‌ಗೆ ತೆರಳಿ ಷವರ್‌ ಕೆಳಗೆ ನಿಂತರೆ ಅಥವಾ ಮೈಗೆ ನೀರು ಸುರಿದುಕೊಂಡರೆ ಸಾಕು ನೆಮ್ಮದಿಯ ಅನುಭವವಾಗುತ್ತದೆ. ಅದುವರೆಗಿನ ಸುಸ್ತು ಮೈಗೆ ಬಿದ್ದ ನೀರಿನಂತೆ ಹೊರಟು ಹೋಗುತ್ತದೆ. ಹೀಗಾಗಿಯೇ ನಮ್ಮ ಹಿರಿಯರು ಮನೆಯ ಜತೆಗೆ ಬಾತ್‌ರೂಮ್‌ಗೂ ಪ್ರಧಾನ್ಯತೆ ನೀಡಿದ್ದರು. ಇಂದಿನ ವಾಸ್ತು ಟಿಪ್ಸ್‌ (Vastu Tips)ನಲ್ಲಿ ನೀವು ಬಾತ್‌ರೂಮ್‌ ವಿಚಾರದಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ವಿವರಿಸುತ್ತೇವೆ.

ನೆಮ್ಮದಿಯ ಭಾವ ಮೂಡಿಸುವ ಬಾತ್‌ರೂಮ್‌ ವಿಚಾರದಲ್ಲಿ ನಾವು ಸಾಕಷ್ಟು ಮುನ್ನೆಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ. ಇದು ನಕಾರಾತ್ಮಕತೆಯನ್ನೂ ಸೃಷ್ಟಿಸುವುದರಿಂದ ವಾಸ್ತು ಪ್ರಕಾರ ಕೆಲವೊಂದು ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು. ಶೌಚಾಲಯ ಮತ್ತು ಸ್ನಾನಗೃಹಗಳ ವಿಚಾರದಲ್ಲಿ ನಾವು ಇಡುವ ಕೆಲವೊಂದು ತಪ್ಪು ಹೆಜ್ಜೆಗಳು ಆತಂಕ, ಅಪಘಾತ, ಆರೋಗ್ಯ ಸಮಸ್ಯೆ ತಂದಿಡಬಹುದು. ಅಲ್ಲದೆ ಸಂಪತ್ತು ಮತ್ತು ಅಭಿವೃದ್ಧಿಗೆ ಅಡೆ ತಡೆ ಎದುರಾಗುವ ಸಾಧ್ಯತೆಯೂ ಇದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ದಿಕ್ಕು: ಸ್ನಾನಗೃಹವು ಮನೆಯ ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ದಕ್ಷಿಣ, ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಾಣ ಮಾಡುವುದು ವಾಸ್ತು ಪ್ರಕಾರ ಸರಿಯಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅಲ್ಲದೆ ವಾಸ್ತು ಪ್ರಕಾರ ಬಾತ್‌ರೂಮ್‌ ಎಂದಿಗೂ ಅಡುಗೆಮನೆಯ ಎದುರು ಅಥವಾ ಅದರ ಪಕ್ಕದಲ್ಲಿರಬಾರದು. ಟಾಯ್ಲೆಟ್ ಸೀಟ್ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು.

ಬಕೆಟ್‌: ಬಕೆಟ್ ಅಥವಾ ಟಬ್ ಯಾವಾಗಲೂ ನೀರಿನಿಂದ ತುಂಬಿರಬೇಕು. ಒಂದು ವೇಳೆ ಬಕೆಟ್ ಖಾಲಿಯಾಗಿದ್ದರೆ ಅದನ್ನು ಯಾವಾಗಲೂ ತಲೆಕೆಳಗಾಗಿ ಇರಿಸಿ. ಇದು ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಬಣ್ಣ: ಬಚ್ಚಲು ಮನೆಯಲ್ಲಿ ನೀಲಿ ಬಣ್ಣಕ್ಕೆ ಮಹತ್ವವಿದೆ. ನೀಲಿ ಬಣ್ಣವು ಸಂತೋಷವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಬಾತ್‌ರೂಮ್‌ನಲ್ಲಿ ನೀಲಿ ಬಣ್ಣದ ಬಕೆಟ್ ಮತ್ತು ಮಗ್ ಇಡುವುದು ಉತ್ತಮ. ಗೋಡೆಗಳಿಗೆ ತಿಳಿ ಬಣ್ಣವನ್ನೇ ಬಳಿಯಿರಿ.

ಕನ್ನಡಿ: ಬಾತ್‌ರೂಮ್‌ನ ಬಾಗಿಲಿನ ಮುಂದೆ ಕನ್ನಡಿ ಇರಿಸಬೇಡಿ. ಇಲ್ಲಿ ಕನ್ನಡಿ ಇರಿಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬುತ್ತದೆ. ಸ್ನಾನಗೃಹದ ಒಳಗೆ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಕನ್ನಡಿಯನ್ನು ಇರಿಸಿ ಮತ್ತು ಅದು ಚೌಕಾಕಾರ ಅಥವಾ ಆಯತಾಕಾರದಲ್ಲೇ ಇರಬೇಕು. ವಾಸ್ತು ಪ್ರಕಾರ ವೃತ್ತಾಕಾರದ ಕನ್ನಡಿ ಸೂಕ್ತವಲ್ಲ.

ಬಾಗಿಲು: ಬಚ್ಚಲು ಮನೆಯ ಬಾಗಿಲುಗಳನ್ನು ಯಾವಾಗಲೂ ಮುಚ್ಚಿರಬೇಕು. ತೆರೆದಿಟ್ಟರೆ ಅದು ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಮತ್ತು ಅದು ನಿಮ್ಮ ವೃತ್ತಿ ಜೀವನಕ್ಕೆ ಅಡೆತಡೆಗಳನ್ನು ಉಂಟು ಮಾಡುವ ಸಾಧ್ಯತೆ ಇದೆ. ಜತೆಗೆ ಬಾತ್‌ರೂಮ್‌ಗೆ ಆದಷ್ಟು ಮರದ ಬಾಗಿಲನ್ನೇ ಬಳಸಿ.

ನಳ್ಳಿ: ಸ್ನಾನಗೃಹದ ನಳ್ಳಿ ಒಡೆದಿರಬಾರದು. ನಳ್ಳಿ ಸೋರಿಕೆಯಾಗುತ್ತಿದ್ದರೆ ಅದು ಹಣದ ನಷ್ಟಕ್ಕೆ ಕಾರಣವಾಗಬಹುದು. ಸ್ನಾನಗೃಹವನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಇದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಆರೋಗ್ಯವೂ ಉತ್ತಮವಾಗಿರಿಸುತ್ತದೆ.

ಎಲೆಕ್ಟ್ರಿಕ್‌ ಉಪಕರಣ: ಸ್ವಿಚ್ ಬೋರ್ಡ್, ಗೀಸರ್, ಫ್ಯಾನ್ ಮುಂತಾದ ಎಲೆಕ್ಟ್ರಿಕ್‌ ವಸ್ತುಗಳನ್ನು ಆಗ್ನೇಯ ದಿಕ್ಕಿನಲ್ಲಿ ಅಳವಡಿಸಬೇಕು.

ಕಿಟಕಿ: ಬಾತ್‌ರೂಮ್‌ನಲ್ಲಿ ಕಿಟಕಿ ಇರಿಸುವುದು ಮುಖ್ಯ. ಇದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ಕಿಟಕಿಯು ಪೂರ್ವ, ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸುವುದು ಉತ್ತಮ.

ದೋಷಕ್ಕೇನು ಪರಿಹಾರ?

ವಾಸ್ತು ಪ್ರಕಾರ ಬೆಡ್‌ರೂಮ್‌ ಹೊಂದಿಕೊಂಡೇ ಇರುವ ಅಂದರೆ ಅಟ್ಯಾಚ್ ಬಾತ್‌ರೂಮ್ ಉತ್ತಮವಲ್ಲ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಪರಿಹಾರವೂ ಇದೆ. ಗ್ಲಾಸ್ ಬಾಟಲಿಯಲ್ಲಿ ಸೈಂದಾ ಲವಣವನ್ನು ತುಂಬಬೇಕು. ಇದನ್ನು ಬಾತ್‌ರೂಮ್ ಒಳಗಡೆ ಇಡಬೇಕು. ಒಂದು ವಾರದವರೆಗೂ ಆ ಉಪ್ಪು ಹಾಗೇ ಇರುವಂತೆ ನೋಡಿಕೊಳ್ಳಬೇಕು. ಒಂದು ವಾರದ ನಂತರ ಆ ಬಾಟಲಿಯಲ್ಲಿರುವ ಉಪ್ಪನ್ನು ಚೆಲ್ಲಬೇಕು. ಮತ್ತೆ ಅದೇ ರೀತಿ ಬಾಟಲಿಯಲ್ಲಿ ಸೈಂದಾ ಉಪ್ಪನ್ನು ತುಂಬಿಡಬೇಕು. ಇದರಿಂದ ಬಾತ್‌ರೂಮ್‌ನಿಂದ ಉಂಟಾಗುವ ವಾಸ್ತು ದೋಷ ನಿವಾರಣೆಯಾಗುತ್ತದೆ.

ಇದನ್ನೂ ಓದಿ: Vastu Tips: ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದೀರಾ? ಈ ವಾಸ್ತು ಸಲಹೆ ಫಾಲೋ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

Covaxin: ಕೊವ್ಯಾಕ್ಸನ್‌ ಲಸಿಕೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಕೂಡ ಮೌಲ್ಯಮಾಪನ ಮಾಡಿದೆ. ಕೊವ್ಯಾಕ್ಸಿನ್‌ ಲಸಿಕೆಯ ಸುರಕ್ಷತೆ ಹಾಗೂ ಅದರ ದಕ್ಷತೆಯ ಕುರಿತು ಕೂಡ ಮೌಲ್ಯಮಾಪನ ಮಾಡಲಾಗಿದೆ. ಇದುವರೆಗೆ ವ್ಯಾಕ್ಸಿನ್‌ ಸಂಬಂಧಿಸಿದಂತೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ ಎಂಬುದಾಗಿ ಭಾರತ್‌ ಬಯೋಟೆಕ್‌ ಪ್ರಕಟಣೆ ಹೊರಡಿಸಿದೆ. ಕೋವಿಶೀಲ್ಡ್‌ ಅಡ್ಡಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಭಾರತ್‌ ಬಯೋಟೆಕ್‌ ಕಂಪನಿಯು ಸ್ಪಷ್ಟನೆ ನೀಡಿದೆ.

VISTARANEWS.COM


on

Covaxin
Koo

ನವದೆಹಲಿ: ಬ್ರಿಟನ್‌ನಲ್ಲಿ (UK) ಅಸ್ಟ್ರಾಜೆನಿಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆಯ (Covishield vaccine) ಅಡ್ಡ ಪರಿಣಾಮಗಳ (Side effects) ಬಗ್ಗೆ ಕೋಲಾಹಲ ಹೆಚ್ಚುತ್ತಿರುವಂತೆಯೇ ಭಾರತದಲ್ಲಿಯೂ ಕೋವಿಶೀಲ್ಡ್‌ ಲಸಿಕೆ ಸೈಡ್‌ ಎಫೆಕ್ಟ್‌ಗಳ ಕುರಿತು ಅಧ್ಯಯನ ನಡೆಯಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಕೊವ್ಯಾಕ್ಸಿನ್‌ (Covaxin) ಅತ್ಯಂತ ಸುರಕ್ಷಿತವಾಗಿ ತಯಾರಿಸಲಾದ ಲಸಿಕೆಯಾಗಿದೆ ಎಂಬುದಾಗಿ ಭಾರತದ ಲಸಿಕಾ ತಯಾರಿಕಾ ಕಂಪನಿಯಾದ ಭಾರತ್‌ ಬಯೋಟೆಕ್‌ (Bharat Biotech) ಪ್ರಕಟಣೆ ತಿಳಿಸಿದೆ.

“ಸುರಕ್ಷತೆ ಹಾಗೂ ದಕ್ಷತೆಯೇ ಮೊದಲು ಎಂಬ ದೃಷ್ಟಿಕೋನದಿಂದ ಹಲವು ಮಾನದಂಡಗಳನ್ನು ಇಟ್ಟುಕೊಂಡು ಲಸಿಕೆಯನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರದ ಲಸಿಕಾಕರಣ ಯೋಜನೆಯ ವೇಳೆ ಅತಿ ಹೆಚ್ಚು ಪ್ರಯೋಗಕ್ಕೀಡಾದ ಲಸಿಕೆ ಎಂದರೆ ಅದು ಕೊವ್ಯಾಕ್ಸಿನ್‌ ಮಾತ್ರ. ಪರವಾನಗಿ ಪ್ರಕ್ರಿಯೆಯ ವೇಳೆ ಸುಮಾರು 27 ಸಾವಿರ ಅಂಶಗಳ ಕುರಿತು ಅಧ್ಯಯನ, ಪರಿಶೀಲನೆ ನಡೆಸಲಾಗಿದೆ. ವೈದ್ಯಕೀಯ ಪ್ರಯೋಗಕ್ಕೂ ಲಸಿಕೆಯನ್ನು ಒಳಪಡಿಸಲಾಗಿದೆ” ಎಂಬುದಾಗಿ ಭಾರತ್‌ ಬಯೋಟೆಕ್‌ ಕಂಪನಿಯು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

“ಕೊವ್ಯಾಕ್ಸನ್‌ ಲಸಿಕೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಕೂಡ ಮೌಲ್ಯಮಾಪನ ಮಾಡಿದೆ. ಕೊವ್ಯಾಕ್ಸಿನ್‌ ಲಸಿಕೆಯ ಸುರಕ್ಷತೆ ಹಾಗೂ ಅದರ ದಕ್ಷತೆಯ ಕುರಿತು ಕೂಡ ಮೌಲ್ಯಮಾಪನ ಮಾಡಲಾಗಿದೆ. ಇದುವರೆಗೆ ವ್ಯಾಕ್ಸಿನ್‌ ಸಂಬಂಧಿಸಿದಂತೆ ಯಾವುದೇ ಅಡ್ಡ ಪರಿಣಾಮಗಳು, ರಕ್ತ ಹೆಪ್ಪುಗಟ್ಟುವುದು, ಥ್ರಂಬೊಸಿಟೋಪೇನಿಯಾ, ಪೆರಿಕಾರ್ಡಿಟಿಸ್‌ ಹಾಗೂ ಮೈಯೋಕಾರ್ಡಿಟಿಸ್‌ ಸೇರಿ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ. ಹಾಗಾಗಿ, ಕೊವ್ಯಾಕ್ಸಿನ್‌ ಲಸಿಕೆಯು ಅತ್ಯಂತ ಸುರಕ್ಷಿತವಾಗಿದೆ” ಎಂದು ಮಾಹಿತಿ ನೀಡಿದೆ.

ಅಸ್ಟ್ರಾಜೆನೆಕಾ ಕೋವಿಶೀಲ್ಡ್‌ ಲಸಿಕೆ ಮತ್ತು ಥ್ರಂಬೋಸಿಸ್ (ಟಿಟಿಎಸ್) ನಡುವಿನ ಸಂಬಂಧವನ್ನು ಒಪ್ಪಿಕೊಂಡಿದೆ. ಅಸ್ಟ್ರಾಜೆನೆಕಾ ಲಸಿಕೆ ಸೂತ್ರವನ್ನು ಪುಣೆ ಮೂಲದ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ನೀಡಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಕೋಟ್ಯಂತರ ಮಂದಿ ಪಡೆದಿದ್ದಾರೆ. ಈಗ ಅಮೆರಿಕದಲ್ಲಿ ಅಡ್ಡಪರಿಣಾಮದ ಕುರಿತು ಕಂಪನಿಯೇ ಒಪ್ಪಿಕೊಂಡಿರುವುದರಿಂದ ಭಾರತದಲ್ಲೂ ಈ ಕುರಿತು ಅಧ್ಯಯನ ನಡೆಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಇದನ್ನೂ ಓದಿ: CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

Continue Reading

ಫ್ಯಾಷನ್

Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

ನಟ ಹಾಗೂ ಬಿಗ್‌ಬಾಸ್‌ ಕಂಟೆಸ್ಟಂಟ್‌ ಶೈನ್‌ ಶೆಟ್ಟಿ ಈ ಸಮ್ಮರ್‌ನಲ್ಲಿ (Summer Fashion) ಕೂಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಯಾವ ಮಟ್ಟಿಗೆ ಕೂಲಾಗಿ ಕಾಣಿಸಿಕೊಂಡಿದ್ದಾರೆ ಎಂದರೇ, ಹುಡುಗರು ಕೂಡ ಇವರ ಸ್ಟೈಲ್‌ ಸ್ಟೇಟ್‌ಮೆಂಟ್‌ ಫಾಲೋ ಮಾಡಲು ಸಿದ್ಧರಾಗಿದ್ದಾರೆ. ಅಂದ ಹಾಗೆ, ಇವರ ಲುಕ್‌ನಲ್ಲಿ ಅಂತಹದ್ದೇನಿದೆ? ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Shine Shetty Summer Fashion
ಚಿತ್ರಗಳು: ಶೈನ್‌ ಶೆಟ್ಟಿ, ನಟಿ, ಬಿಗ್‌ಬಾಸ್‌ ಕಂಟೆಸ್ಟಂಟ್‌, ಫೋಟೋಗ್ರಾಫಿ : ನಾಗರಾಜ ಸೋಮಾಯಾಜಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟ ಹಾಗೂ ಬಿಗ್‌ಬಾಸ್‌ ಕಂಟೆಸ್ಟಂಟ್‌ ಶೈನ್‌ ಶೆಟ್ಟಿ ಈ ಸಮ್ಮರ್‌ನಲ್ಲಿ (Summer Fashion) ಸಖತ್‌ ಕೂಲ್‌ ಆಗಿ ಕಾಣಿಸಿಕೊಂಡಿದ್ದಾರೆ.ಹೌದು, ಶೈನ್‌ ಶೆಟ್ಟಿಯವರ ಈ ಸೀಸನ್‌ನ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ ಯಾವ ಮಟ್ಟಿಗೆ ಪುರುಷರಿಗೆ ಇಷ್ಟವಾಗಿದೆ ಎಂದರೇ, ಇವರ ಫ್ಯಾನ್‌ ಫಾಲೋವಿಂಗ್‌ ಹುಡುಗರು ಮಾತ್ರವಲ್ಲ, ಕಾರ್ಪೋರೇಟ್‌ ಕ್ಷೇತ್ರದ ಹುಡುಗರು ಕೂಡ ಇವರ ಫ್ಯಾಷನ್‌ ಸ್ಟೇಟ್‌ಮೆಂಟ್‌ಗೆ ಮಾರು ಹೋಗಿದ್ದಾರೆ.

Shine Shetty Summer Fashion

ಶೈನ್‌ ಶೆಟ್ಟಿ ನ್ಯಾಚುರಲ್‌ ಲುಕ್‌

“ಶೈನ್‌ ಶೆಟ್ಟಿ ಮೊದಲಿನಿಂದಲೂ ನ್ಯಾಚುರಲ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇವರು ಮೂಲತಃ ಮಂಗಳೂರಿನವರಾಗಿರುವುದರಿಂದಲೋ ಏನೋ ಬಿಸಿಲಲ್ಲೂ ಆರಾಮಾಗಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ, ತಮ್ಮ ಸಿಂಪಲ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ನಿಂದಲೇ ಎಲ್ಲರನ್ನು ಸೆಳೆಯುತ್ತಾರೆ. ಹುಡುಗಿಯರು ಮಾತ್ರವಲ್ಲ, ಹುಡುಗರು ಕೂಡ ಇವರ ಲುಕ್‌ಗೆ ಫಿದಾ ಆಗುತ್ತಾರಂತೆ. ತೀರಾ ಫ್ಯಾಷನ್‌ ಕಾನ್ಶಿಯಸ್‌ ಕೂಡ ಅಲ್ಲದ ಇವರ ಪ್ರತಿಯೊಂದು ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳು ಕೂಡ ಇವರನ್ನು ಸದಾ ನ್ಯಾಚುರಲ್‌ ಲುಕ್‌ನಲ್ಲಿ ಬಿಂಬಿಸುತ್ತವಂತೆ. ಇನ್ನು, ಇವರ ತಿಳಿ ವರ್ಣದ ಸ್ಕಿನ್‌ ಟೋನ್‌ನಿಂದಾಗಿ ಅವರು ಧರಿಸುವ ಎಲ್ಲಾ ಬಗೆಯ ಔಟ್‌ಫಿಟ್ಸ್‌ ಕೂಡ ಇವರಿಗೆ ಮ್ಯಾಚ್‌ ಆಗುತ್ತವಂತೆ. ಎಲ್ಲದಕ್ಕಿಂತ ಹೆಚ್ಚಾಗಿ ಇವರ ಯೂನಿಕ್‌ ಫ್ಯಾಷನ್‌ನಲ್ಲಿ ಸೇರಿರುವ ಸಿಂಪಲ್‌ ಸ್ಮೈಲ್‌ ಇಡೀ ಲುಕ್‌ಗೆ ಸಾಥ್‌ ನೀಡುವುದನ್ನು ಗಮನಿಸಬಹುದು” ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಅಮಿತ್‌ ಪಾಂಡ್ಯಾ ಅವರ ಪ್ರಕಾರ, ಕೆಲವು ನಟರು ತಮ್ಮ ನ್ಯಾಚುರಲ್‌ ಲುಕ್‌ನಿಂದಾಗಿಯೇ ಆಕರ್ಷಕವಾಗಿ ಕಾಣಿಸುತ್ತಾರೆ. ಇದು ಅವರ ಪ್ಲಸ್‌ ಪಾಯಿಂಟ್‌ ಎನ್ನುತ್ತಾರೆ.

Shine Shetty Summer Fashion

ಶೈನ್‌ ಶೆಟ್ಟಿ ಸಮ್ಮರ್‌ ಲುಕ್‌ನಲ್ಲಿ ಏನಿದೆ?

ಮನಸ್ಸಿಗೆ ಮುದ ನೀಡುವಂತಹ ಶೇಡ್‌ನ ಔಟ್‌ಫಿಟ್‌! ವೈಟ್‌ ಪ್ಯಾಂಟ್‌ ಕಾಟನ್‌ ಪ್ರಿಂಟೆಡ್‌ ಶರ್ಟ್.‌ ಜೊತೆಗೆ ಅದಕ್ಕೆ ಹೊಂದುವ ಹೇರ್‌ಸ್ಟೈಲ್‌, ಸಿಂಪಲ್‌ ಚಪ್ಪಲಿ ಎಲ್ಲವೂ ಶೈನ್‌ ಸಮ್ಮರ್‌ ಲುಕ್‌ನಲ್ಲಿ ಸೇರಿದೆ. ಸನ್‌ ಗ್ಲಾಸ್‌ ಇವರನ್ನು ಮತ್ತಷ್ಟು ಹ್ಯಾಂಡ್‌ಸಮ್‌ ಆಗಿ ಕಾಣುವಂತೆ ಬಿಂಬಿಸಿದೆ. ಇವರ ಒಟ್ಟಾರೆ ಲುಕ್ಗೆ ಫ್ಯಾಷನ್‌ ಸ್ಟೈಲಿಸ್ಟ್‌ಗಳಾದ ತೇಜಸ್ವಿನಿ ಹಾಗೂ ಖುಷಿಯವರ ಸ್ಟೈಲಿಂಗ್‌ ಸಪೋರ್ಟ್‌ ಇದೆ.

Shine Shetty Summer Fashion

ಶೈನ್‌ ಶೆಟ್ಟಿ ಫ್ಯಾಷನ್‌ ಮಂತ್ರ

ಇನ್ನು, ಕಳೆದ ಬಾರಿ ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್‌ ಹಾಗೂ ಸ್ಟೈಲ್‌ಸ್ಟೇಟ್‌ಮೆಂಟ್‌ ಬಗ್ಗೆ ಮಾತನಾಡಿದ್ದ ಶೈನ್‌ ಶೆಟ್ಟಿ, ನಾನಂತೂ ಇದುವೆರಗೂ ಇಂತಹದ್ದೇ ಫ್ಯಾಷನ್‌ ಹಾಗೂ ಸ್ಟೈಲ್‌ ಫಾಲೋಮಾಡಬೇಕೆಂಬ ರೂಲ್ಸ್‌ ಹಾಕಿಕೊಂಡಿಲ್ಲ! ಯಾವುದಾದರೂ ಸರಿಯೇ ನೋಡುಗರಿಗೆ ಪ್ಲೆಸೆಂಟ್‌ ಆಗಿ ಕಾಣಿಸಬೇಕು. ಧರಿಸಿದ ಮನಕ್ಕೂ ಮುದ ನೀಡಬೇಕು. ಸೀಸನ್‌ಗೆ ತಕ್ಕಂತೆ ಉಡುಪುಗಳನ್ನು ಆಯ್ಕೆ ಮಾಡಿ ಧರಿಸಬೇಕು. ಇನ್ನು ಕಲರ್‌ಗಳ ವಿಷಯಕ್ಕೆ ಬಂದಲ್ಲಿ, ನಮ್ಮ ಮುಖಕ್ಕೆ ಹಾಗೂ ಸಿನ್‌ ಟೋನ್‌ಗೆ ಹೊಂದುವಂತಹ ಬಣ್ಣದ ಉಡುಗೆಗಳನ್ನು ಸೆಲೆಕ್ಟ್‌ ಮಾಡುವುದು ಉತ್ತಮ ಎಂದಿದ್ದರು. ಇನ್ನು, ತಾರೆಯರ ಫ್ಯಾಷನ್‌ ಫಾಲೋ ಮಾಡಲು ಬಯಸುವ ಹುಡುಗರು, ಮೊದಲಿಗೆ ತಾವು ಕಾಪಿ ಮಾಡುತ್ತಿರುವ ಸ್ಟೈಲಿಂಗ್‌ ಮ್ಯಾಚ್‌ ಆಗುತ್ತವೆಯೇ! ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದನ್ನು ಬಿಟ್ಟು, ಸುಖಸುಮ್ಮನೇ, ಕಂಡ ಕಂಡ ಫ್ಯಾಷನ್‌ ಫಾಲೋ ಮಾಡುವುದಲ್ಲ. ಇಮಿಟೇಟ್‌ ಮಾಡುವಾಗಲು ಅದು ತಮಗೆ ಹೊಂದುತ್ತದೆಯೇ ಎಂಬುದನ್ನು ಅರಿಯಬೇಕು ಎಂದು ಹುಡುಗರಿಗೆ ಸಲಹೆ ನೀಡಿದ್ದರು.

ಹುಡುಗರಿಗೆ ಫ್ಯಾಷನ್‌ ವಿಮರ್ಶಕರ ಟಿಪ್ಸ್‌

ಶೈನ್‌ ಶೆಟ್ಟಿಯಂತೆ ಸಮ್ಮರ್‌ ಫ್ಯಾಷನ್‌ ಫಾಲೋ ಮಾಡುವವರು ಕೆಲವು ವಿಷಯಗಳನ್ನು ಮನದಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ: Mega Shetty: ದಾವಣಿ-ಲಂಗದಲ್ಲಿ ನಟಿ ಮೇಘಾ ಶೆಟ್ಟಿಯಂತೆ ನೀವೂ ಕಾಣಬೇಕೆ? ಈ ಟಿಪ್ಸ್ ಪಾಲಿಸಿ!

  • 1. ಲೈಟ್‌ ಶೇಡ್‌ ಆಯ್ಕೆ ಮಾಡಬೇಕು.
  • 2. ಕಾಟನ್‌ ಶರ್ಟ್‌ ಆಯ್ಕೆ ಉತ್ತಮ.
  • 3. ಗಾಳಿಯಾಡುವಂತಹ ಪಾದರಕ್ಷೆಗಳು ಕೂಲ್‌ ಆಗಿರಿಸುತ್ತವೆ.
  • 4. ಸನ್‌ಗ್ಲಾಸ್‌ ಬಿಸಿಲಿನಿಂದ ಕಣ್ಣುಗಳನ್ನು ಸಂರಕ್ಷಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Mega Shetty: ದಾವಣಿ-ಲಂಗದಲ್ಲಿ ನಟಿ ಮೇಘಾ ಶೆಟ್ಟಿಯಂತೆ ನೀವೂ ಕಾಣಬೇಕೆ? ಈ ಟಿಪ್ಸ್ ಪಾಲಿಸಿ!

ನಟಿ ಮೇಘಾ ಶೆಟ್ಟಿಯ (Mega Shetty) ದಾವಣಿ-ಲಂಗದ ಸಿಂಪಲ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೆಚ್ಚು ಖರ್ಚಿಲ್ಲದೇ, ಮೇಕಪ್‌ ಹಚ್ಚದೇ ಇರುವ ಅವರ ಈ ಲುಕ್‌ ಈ ಸೀಸನ್‌ಗೆ ಹೇಳಿಮಾಡಿಸಿದಂತಿದೆ. ಏನಿದು ಇವರ ಲುಕ್‌ ಇಲ್ಲಿದೆ ಕಿರುನೋಟ.

VISTARANEWS.COM


on

Mega Shetty
ಚಿತ್ರಗಳು : ಮೇಘಾ ಶೆಟ್ಟಿ, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಮೇಘಾ ಶೆಟ್ಟಿಯ (Mega Shetty) ದಾವಣಿ-ಲಂಗದ ಸಿಂಪಲ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹೆಚ್ಚು ಖರ್ಚಿಲ್ಲದೇ, ಮೇಕಪ್‌ ಹಚ್ಚದೇ ಇರುವ ಅವರ ಈ ಸಿಂಪಲ್‌ ದಾವಣಿ -ಲಂಗದ ಲುಕ್‌ ಎಲ್ಲರನ್ನು ಆಕರ್ಷಿಸಿದೆ. ನೋಡಲು ಮಾತ್ರವಲ್ಲ, ಈ ಔಟ್‌ಫಿಟ್‌ನ ಡಿಸೈನ್‌ ಕೂಡ ಡಿಸೆಂಟ್‌ ಲುಕ್‌ ನೀಡಿದೆ. ಅಂದಹಾಗೆ, ನಟಿ ಮೇಘಾ ಶೆಟ್ಟಿ, ಕಿರುತರೆಯ ಧಾರವಾಹಿಯ ಮೂಲಕ ಹೆಸರು ಮಾಡಿದವರು. ಈ ಮಧ್ಯೆ ಸಿನಿಮಾಗಳ ಮೂಲಕ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಆಗಾಗ್ಗೆ ಸಾಕಷ್ಟು ಫೋಟೋಶೂಟ್‌ಗಳ ಮೂಲಕ ಸೀಸನ್‌ನ ಟ್ರೆಂಡಿ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅವರು ಧರಿಸುವ ಔಟ್‌ಫಿಟ್‌ಗಳು ಕೂಡ ಒಂದಕ್ಕಿಂತ ಒಂದು ಗಮನ ಸೆಳೆಯುವಂತಿರುತ್ತವೆ.

Mega Shetty image

ಮೇಘಾ ಶೆಟ್ಟಿಯ ದಾವಣಿ-ಲಂಗದ ಲವ್‌

ಮೇಘಾ ಶೆಟ್ಟಿ ಇತ್ತೀಚೆಗೆ ಅತಿ ಹೆಚ್ಚು ದಾವಣಿ-ಲಂಗ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅವುಗಳಲ್ಲಿ ಬಹಳಷ್ಟು ಡಿಸೈನರ್‌ವೇರ್‌ಗಳು ಸೆಲೆಬ್ರೆಟಿ ಲಕ್ಷ್ಮಿಕೃಷ್ಣ ಅವರದ್ದೇ ಆಗಿವೆ. ಸಿಂಪಲ್‌ ಡಿಸೈನ್‌ಗಳಿಂದಿಡಿದು ಟ್ರೆಡಿಷನಲ್‌ ಲುಕ್‌ ನೀಡುವ ಅವರ ನಾನಾ ಶೈಲಿಯ ಪ್ರಿಂಟ್ಸ್‌ನ ಹಾಗೂ ಬಾರ್ಡರ್‌ನ ದಾವಣಿ-ಲಂಗಗಳಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕೆಲವು ಹಬ್ಬದ ಸಮಯದಲ್ಲಿ ಧರಿಸಿ ಕಾಣಿಸಿಕೊಂಡರೇ ಮತ್ತೇ ಕೆಲವು ಸಾಮಾನ್ಯ ದಿನಗಳಲ್ಲಿ ಧರಿಸಿ, ಅಭಿಮಾನಿಗಳನ್ನು ಸೆಳೆದಿದ್ದಾರೆ. ಆ ಮಟ್ಟಿಗೆ ದಾವಣಿ-ಲಂಗದ ಅವರ ಫೋಟೋಗಳು ಹಿಟ್‌ ಆಗಿವೆ. ಸಾಮಾನ್ಯ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ಕೆಟಗರಿಯವರನ್ನು ಸೆಳೆದಿವೆ. ಸೆಲೆಬ್ರೆಟಿ ಡಿಸೈನರ್‌ ಲಕ್ಷಿಕೃಷ್ಣ ಅವರ ಈ ದಾವಣಿ-ಲಂಗ ಡಿಸೈನರ್‌ವೇರ್‌ಗಳು ಸ್ಥಳೀಯ ಸಂಸ್ಕೃತಿ ಬಿಂಬಿಸುವಂತಹ ಫ್ಯಾಬ್ರಿಕ್‌ ಹಾಗೂ ಸಿಂಪಲ್‌ ಡಿಸೈನ್‌ ಹೊಂದಿರುವುದು ಎಲ್ಲರ ಗಮನಸೆಳೆಯಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಅವರ ಪ್ರಕಾರ, ಮೇಘಾ ಶೆಟ್ಟಿಯ ದಾವಣಿ-ಲಂಗದ ಲುಕ್‌ ಆವರನ್ನು ಪಕ್ಕದ ಮನೆ ಹುಡುಗಿಯಂತೆ ಬಿಂಬಿಸಿವೆ. ಇದು ಸಾಮಾನ್ಯ ಜನರನ್ನು ತಲುಪಲು ಸಾಧಯವಾಗಿಸಿವೆ ಎನ್ನುತ್ತಾರೆ.

Mega Shetty photo

‌ದಾವಣಿ-ಲಂಗ ಅಭಿಮಾನಿಗಳಿಗೆ ಟಿಪ್ಸ್‌

ದಾವಣಿ-ಲಂಗದಲ್ಲಿ ಮೇಘಾ ಶೆಟ್ಟಿಯಂತೆ ನೀವೂ ಕಾಣಿಸಬೇಕೇ! ಹಾಗಾದಲ್ಲಿ ಹೀಗೆ ಮಾಡಿ ನೋಡಿ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿಕೃಷ್ಣ. ಅವರು ಹೇಳುವಂತೆ, ದಾವಣಿ-ಲಂಗದಲ್ಲಿ ಸೆಲೆಬ್ರೆಟಿ ಲುಕ್‌ ಪಡೆಯಲು ಆದಷ್ಟೂ ಡಿಸೈನರ್‌ ಔಟ್‌ಫಿಟ್‌ ಚೂಸ್‌ ಮಾಡಬೇಕು. ಇಲ್ಲವಾದಲ್ಲಿ ಸಿಂಪಲ್‌ ಲುಕ್‌ಗಾಗಿ ಹೀಗೂ ಮಾಡಬಹುದು. ಟ್ರೆಡಿಷನಲ್‌ ಲುಕ್‌ ಇರುವಂತಹ ಸಮ್ಮರ್‌ ಸೀಸನ್‌ಗೆ ಹೊಂದುವಂತಹ ಫ್ಯಾಬ್ರಿಕ್‌ ಆಯ್ಕೆ ಮಾಡಿ, ಸ್ಟಿಚ್‌ ಮಾಡಿಸಬೇಕು. ಬ್ಲೌಸ್‌ ಹಾಗೂ ಲಂಗ ಡಿಸೈನ್‌ ಹೆವ್ವಿಯಾಗಿರಬಾರದು. ಟ್ರೆಡಿಷನಲ್‌ ಲುಕ್‌ ಬೇಕಿದ್ದಲ್ಲಿ ಬಾರ್ಡರ್‌ ಇರುವಂತದ್ದನ್ನು ಮಾತ್ರ ಚೂಸ್‌ ಮಾಡಬೇಕು.

Mega Shetty picture

ಸೀಸನ್‌ ದಾವಣಿ-ಲಂಗದ ಫ್ಯಾಬ್ರಿಕ್‌ಗೆ ಆದ್ಯತೆ

ಇನ್ನು, ಈ ಸಮ್ಮರ್‌ನಲ್ಲಿ ತೀರಾ ಸಿಂಪಲ್‌ ಲುಕ್‌ ಬೇಕಿದ್ದಲ್ಲಿ ಆದಷ್ಟೂ ಕಾಟನ್‌ ಫ್ಯಾಬ್ರಿಕ್‌ಗೆ ಆದ್ಯತೆ ನೀಡುವುದು ಉತ್ತಮ. ಇನ್ನು, ಇದಕ್ಕೆ ಪೂರಕ ಎಂಬಂತೆ. ಇದೀಗ ಪರಿಸರ ಸ್ನೇಹಿ ಫ್ಯಾಬ್ರಿಕ್‌ಗಳು ಆಗಮಿಸಿವೆ.

ಇದನ್ನೂ ಓದಿ: Chaitra Achar: ನೋಡುಗರ ಹುಬ್ಬೇರಿಸಿದ ನಟಿ ಚೈತ್ರಾ ಆಚಾರ್‌ ಪಾರದರ್ಶಕ ನಿಟ್‌ವೇರ್

ಸಿಂಪಲ್‌ ದಾವಣಿ

ಸಿಂಪಲ್‌ ದಾವಣಿ ಇಡೀ ಲುಕ್ಕನ್ನು ಮನಮೋಹಕವಾಗಿಸುವುದಲ್ಲದೇ, ತೀರಾ ಸಿಂಪಲ್‌ ಲುಕ್‌ ನೀಡುವುದು. ಮೇಘಾ ಶೆಟ್ಟಿಯ ದಾವಣಿಗಳು ಎಲ್ಲವೂ ಮಾನೋಕ್ರೋಮ್‌ ಶೇಡ್‌ನದ್ದಾಗಿವೆ ಹಾಗೂ ಸಿಂಪಲ್‌ ಹಾಗೂ ಸಾದಾ ಆಗಿವೆ. ಹಾಗಾಗಿ ಅವರಿಗೆ ಡಿಸೆಂಟ್‌ ಲುಕ್‌ ನೀಡಿವೆ ಎನ್ನುತ್ತಾರೆ ಡಿಸೈನರ್‌ ಲಕ್ಷ್ಮಿ ಕೃಷ್ಣ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಆರೋಗ್ಯ

Health Tips: ಕಿಡ್ನಿಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡನ್ನು ಹೀಗೆ ಬಳಸಿ…

Health Tips: ತೆಂಗಿನಂತೆ ಬಾಳೆಯೂ ಕಲ್ಪವೃಕ್ಷ ಎನಿಸಿಕೊಂಡಿದೆ. ಇದರ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಬರುತ್ತದೆ. ಅದರಲ್ಲಿಯೂ ಬಾಳೆದಿಂಡಿನಲ್ಲಿ ಅಪೂರ್ವ ಔಷಧೀಯ ಗುಣಗಳಿವೆ. ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವ ಅದ್ಭುತ ಶಕ್ತಿ ಬಾಳೆ ದಿಂಡಿಗಿದೆ. ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಗೆ ಇದು ರಾಮಬಾಣ. ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿರ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ.

VISTARANEWS.COM


on

Health Tips
Koo

ಕುಮಾರ ಪೆರ್ನಾಜೆ, ಪುತ್ತೂರು
ಬೆಂಗಳೂರು: ಕಲ್ಪವೃಕ್ಷ ಎಂದಾಕ್ಷಣ ತೆಂಗಿನ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಅದರ ಜತೆಗೆ ಬಾಳೆಯೂ ಕಲ್ಪವೃಕ್ಷವೇ. ತೆಂಗಿನಂತೆ ಇದರ ಎಲ್ಲ ಭಾಗಗಳು ಉಪಯುಕ್ತ. ಬಾಳೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು, ಇತ್ತೀಚೆಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಿಡ್ನಿಯ ಕಲ್ಲಿನ ಸಮಸ್ಯೆಯನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಈ ಬಗೆಗಿನ ವಿವರ ಇಲ್ಲಿದೆ (Health Tips).

ಬಾಳೆ ದಿಂಡಿನ ಪ್ರಾಮುಖ್ಯತೆ ಇದೀಗ ಪ್ರತಿಯೊಬ್ಬರ ಅರಿವಿಗೂ ಬಂದಿದೆ. ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಒಂದು ಅಡಿ ಉದ್ದದ ದಿಂಡಿಗೂ ಬಹಳ ಬೇಡಿಕೆ ಸೃಷ್ಟಿಯಾಗಿದೆ. ಇದರಲ್ಲಿ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯ, ಪಕೋಡ, ದೋಸೆ, ಇಡ್ಲಿ, ಸಲಾಡ್, ಮೊಸರು ಗೊಜ್ಜು ಹೀಗೆ ನಾನಾ ಭಕ್ಷ್ಯ ತಯಾರಿಸಬಹುದು. ಮಾತ್ರವಲ್ಲ ಬಾಳೆ ನಾರಿನಿಂದ ವಿವಿಧ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸಬಹುದು. ಚೀಲಗಳು, ಬುಟ್ಟಿಗಳು, ಸಸಿ ಕುಂಡಗಳು, ಯೋಗಾಸನ ಚಾಪೆಗಳು, ಹಗ್ಗ, ಬಟ್ಟೆ ತಯಾರಿ ಹೀಗೆ…ಏನೆಲ್ಲ ಮಾಡಬಹುದು ಎಂಬ ಸಂಶೋಧನೆ ಮಾಡುವ ತನಕ ಬಾಳೆ ಇಷ್ಟೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.

ಕಿಡ್ನಿ ಕಲ್ಲು ಕರಗಿಸುವ ಬಾಳೆ ದಿಂಡು

ಮೊದಲೇ ಹೇಳಿದಂತೆ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವ ಅದ್ಭುತ ಶಕ್ತಿ ಬಾಳೆ ದಿಂಡಿಗಿದೆ. ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಗೆ ಇದು ರಾಮಬಾಣ. ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿರ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ. ಕಿಡ್ನಿ ಕಲ್ಲಿನ ಸಮಸ್ಯೆ ನಿವಾರಣೆಗೆ ಬಾಳೆ ದಿಂಡಿನ ನೀರನ್ನು ಕುಡಿಯುವುದು ಅತ್ಯುತ್ತಮ ಮಾರ್ಗ ಎನಿಸಿಕೊಂಡಿದೆ. ಈ ನೀರನ್ನು ಹೇಗೆ ಸಂಗ್ರಹಿಸಬಹುದು ಎನ್ನುವುದರ ವಿವರ ಇಲ್ಲಿದೆ. ಬಾಳೆಗಿಡ ಕಡಿದು ಮಧ್ಯದ ದಿಂಡನ್ನು ತೆಗೆದು ಕಾಂಡದಲ್ಲಿ ಗುಳಿಯ ಆಕಾರವನ್ನು ತೋಡಿ. ಬಳಿಕ ಕಸ, ಧೂಳು ಹಾರದಂತೆ ಅದಕ್ಕೆ ಪ್ಲಾಸ್ಟಿಕ್ ಅಥವಾ ಬಾಳೆ ಎಲೆ ಮುಚ್ಚಿ. ಮರುದಿನ ನೋಡಿದಾಗ ಗುಳಿಯಲ್ಲಿ ನೀರು ತುಂಬಿರುತ್ತದೆ.

ಈ ನೀರನ್ನು ಶುಭ್ರ ಪಾತ್ರೆಯಲ್ಲಿ ತೆಗೆದುಕೊಂಡು ನಿಯಮಿತವಾಗಿ ಸೇವಿಸಿ. ಇದರಿಂದ ಕಿಡ್ನಿ ಕಲ್ಲಿ ಕರಗುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೆ ಬಾಳೆ ದಿಂಡನ್ನು ಅರೆದು ಅದನ್ನು ಸೋಸಿಯೂ ಕುಡಿಯಬಹುದು. ಹೀಗೆ ಬಾಳೆದಿಂಡಿನ ರಸವನ್ನು ವರ್ಷಕ್ಕೆ ಎರಡು ಬಾರಿಯಾದರೂ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರ ಹಾಕಬಹುದು.

ಇದನ್ನೂ ಓದಿ: Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

ಜ್ಯೂಸ್‌ ತಯಾರಿಸಿ

ಬಾಳೆ ದಿಂಡಿನ ರಸವನ್ನು ನೇರವಾಗಿ ಸೇವಿಸಲು ಸಾಧ್ಯವಾಗದಿದ್ದರೆ ಜ್ಯೂಸ್‌ ತಯಾರಿಸಿಯೂ ಕುಡಿಯಬಹುದು. ಬಾಳೆದಿಂಡಿನ ನೀರಿಗೆ ಜೀರಿಗೆ, ಶುಂಠಿ, ನಿಂಬೆರಸ, ಗಾಂಧಾರಿ ಮೆಣಸು, ಚಿಟಿಕೆ ಉಪ್ಪು, ಬೇಕಿದ್ದರೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬಹುದು. ಇದನ್ನು ಸಮಸ್ಯೆ ಇದ್ದವರೇ ಕುಡಿಯಬೇಕೆಂದಿಲ್ಲ. ಯಾರೂ ಬೇಕಾದರೂ ಸೇವಿಸಬಹುದು. ಇತ್ತೀಚೆಗಂತೂ ಬಿಸಿಲಿನ ತಾಪ ವಿಪರೀತವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸಿದ ಆಹಾರದ ಜತೆಗೆ ಇಂತಹ ಪ್ರಾಕೃತಿಕ ಔಷಧಗಳ ಪ್ರಯೋಜನ ಪಡೆಯಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

Continue Reading
Advertisement
Ragini Khanna
ಸಿನಿಮಾ5 mins ago

Ragini Khanna: ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಕ್ಷಮೆ ಕೇಳಿದ ನಟ ಗೋವಿಂದ ಸೋದರ ಸೊಸೆ!

Rain News
ಪ್ರಮುಖ ಸುದ್ದಿ6 mins ago

Rain News : ಬೆಂಗಳೂರಿನಲ್ಲಿ ಸಂಜೆ ಸುರಿದ ಸಣ್ಣ ಮಳೆಗೆ ಕೆಲವೆಡೆ ಅನಾಹುತ

Election campaign for Congress candidate Samyukta Patil in Prajadhwani convention at Bagalkot
ರಾಜಕೀಯ17 mins ago

Lok Sabha Election 2024: ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಪರ ಭರ್ಜರಿ ಪ್ರಚಾರ

Lok Sabha Election
ದೇಶ35 mins ago

Lok Sabha Election : ಮೋದಿ ಗ್ಯಾರಂಟಿ ಪಡೆಯಲು ಜೋಶಿ ಗೆಲ್ಲಿಸಿ; ಏಕನಾಥ ಶಿಂಧೆ

Amit Shah
ದೇಶ37 mins ago

Amit Shah: ಮತದಾನ ಕುಸಿತದಿಂದ ಬಿಜೆಪಿಗೆ ನಷ್ಟ? ಅಮಿತ್ ಶಾ ಹೇಳೋದೇನು?

K. Annamalai
ಪ್ರಮುಖ ಸುದ್ದಿ59 mins ago

K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

Mumbai
ದೇಶ1 hour ago

ಆಸ್ಪತ್ರೆಯಲ್ಲಿ ಟಾರ್ಚ್‌ ಬಳಸಿ ಹೆರಿಗೆ; ತಾಯಿ, ಮಗು ಸಾವು; 3 ಈಡಿಯಟ್ಸ್‌ ಸಿನಿಮಾ ದೃಶ್ಯ ಇಲ್ಲಿ ದುರಂತ!

AC Blast
ಪ್ರಮುಖ ಸುದ್ದಿ2 hours ago

AC Blast : ಕಲ್ಯಾಣ್​ ಜ್ಯುವೆಲರಿಯಲ್ಲಿ ಭಾರಿ ಅವಘಡ; ಏರ್​ ಕಂಡೀಷನರ್​ ಬ್ಲಾಸ್ಟ್​ ಆಗಿ ಮೂವರಿಗೆ ಗಾಯ

Tax Returns
ಪ್ರಮುಖ ಸುದ್ದಿ2 hours ago

Tax Returns: ಪಾಕ್‌ ಜನರಿಗೆ ಬೆಲೆಯೇರಿಕೆ ಬೆನ್ನಲ್ಲೇ ತೆರಿಗೆ ಹೊರೆ; ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ನೋಡಿ!

Dr Vinayaka Prasanna passed away
ಬಳ್ಳಾರಿ3 hours ago

Dr Vinayaka Prasanna: ಡಾ.ವಿನಾಯಕ ಪ್ರಸನ್ನ ವಿಧಿವಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ5 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ19 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌