ಮಂಡ್ಯ : ಆಲಹಳ್ಳಿ ಬಡಾವಣೆಯಲ್ಲಿ ಮಗಳ ಶವದ ಜೊತೆ ತಾಯಿ ಮಲಗಿರುವುದನ್ನು ನೋಡಿ ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ. ರೂಪ (30) ಎಂಬ ಮಹಿಳೆ ಸಾವನಪ್ಪಿದ್ದು, ತಾಯಿ ನಾಗಮ್ಮ ಮೆನೆಯಲ್ಲೇ ಇದ್ದಳು. ಮಗಳು ಸಾವನಪ್ಪಿರುವ ವಿಚಾರವನ್ನು ನಾಗಮ್ಮ ಯಾರಿಗೂ ತಿಳಿಸಿರಲಿಲ್ಲ.
ಶವದ ದುರ್ವಾಸನೆಗೆ ಆತಂಕಗೊಂಡಿದ್ದ ಸ್ಥಳೀಯರು ಆರಂಭದಲ್ಲಿ ಇಲಿ ಸತ್ತಿರ ಬೇಕು ಎಂದುಕೊಂಡಿದ್ದರು. ರೂಪ, ನಾಗಮ್ಮ ಮನೆಯಿಂದ ಹೊರಗಡೆ ಬಾರದ ಕಾರಣ ಅನುಮಾನಗೊಂಡ ಸ್ಥಳೀಯರು, ಬಳಿಕ ಬಾಗಿಲು ಒಡೆದು ನೋಡಿದಾಗ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ | ಕುಟುಂಬದವರು ಹೊಲದ ಕೆಲಸ ಮುಗಿಸಿ ಬರುವ ವೇಳೆಗೆ ತಾಯಿ, ಇಬ್ಬರು ಮಕ್ಕಳು ಶವವಾಗಿದ್ದರು !
ಬಳಿಕ ಜನರು ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ರೂಪ ಸಾವು ಹೇಗಾಯ್ತು ಎಂದು ತಿಳಿದು ಬಂದಿಲ್ಲ. ಈ ಕುರಿತು ಮಂಡ್ಯ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವು ನಿಗೂಢ
30 ವರ್ಷ ವಯಸ್ಸಿನ ಮೃತ ರೂಪ ಹೋಮ್ ಗಾರ್ಡ್ ಆಗಿ ಕೆಲಸ ಮಾಡ್ತಿದ್ದರು. ಕೆಲ ತಿಂಗಳ ಹಿಂದೆ ಕಾರಣಾಂತರಗಳಿಂದ ಸಸ್ಪೆಂಡ್ ಆಗಿದ್ದರು. ಇತ್ತೀಚಿಗೆ ಮತ್ತೆ ಕೆಲಸಕ್ಕೆ ಬರುವುದಾಗಿ ಪತ್ರ ಬರೆದಿದ್ದಾರೆ. ಕಳೆದ 10 ವರ್ಷಗಳ ಹಿಂದೆ ವಿವಾಹವಾಗಿದ್ದ ರೂಪ ಕೌಟುಂಬಿಕ ಕಲಹ ಹಿನ್ನೆಲೆ 5 ವರ್ಷಗಳ ಹಿಂದೆ ಗಂಡ ಇಬ್ಬರು ಮಕ್ಕಳನ್ನ ಬಿಟ್ಟು ಪ್ರತ್ಯೇಕವಾಗಿದ್ದಾರೆ. ಗಂಡನಿಂದ ದೂರಾದ ಬಳಿಕ ತಾಯಿ ಮನೆಯಲ್ಲೇ ವಾಸವಿದ್ದರು. ಕೆಲದಿನಗಳಿಂದ ಕುಡಿತದ ಚಟಕ್ಕೆ ತಾಯಿ ಮಗಳಿಬ್ಬರು ಬಲಿಯಾಗಿದ್ದರು. ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಆದರೆ ನಾಲ್ಕು ದಿನಗಳಿಂದ ಯಾವುದೇ ಮಾತುಕತೆ ಇಲ್ಲದೇ ಇಬ್ಬರು ಮನೆಯಿಂದ ಹೊರಬಾರದೆ ಇದ್ದಾಗ ಅಕ್ಕಪಕ್ಕದವರು ಅನುಮಾನಗೊಂಡಿದ್ದರು.
ಇದನ್ನೂ ಓದಿ | ಮಧ್ಯಪ್ರದೇಶ ಸಚಿವರ ಮನೆಯಲ್ಲೆ ಸೊಸೆಯ ಶವ ಪತ್ತೆ