ಮಂಡ್ಯ: ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ತ್ರಿವಳಿ ತಲಾಕ್ (Triple Talaq) ಹೇಳುವ ಅವಕಾಶ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸರ್ಕಾರದಿಂದಾಗಿ ತ್ರಿವಳಿ ತಲಾಕ್ ರದ್ದಾಗಿದೆ. ಬಹು ಪತ್ನಿತ್ವ ಪಿಡುಗು ಮತ್ತು ತ್ರಿವಳಿ ತಲಾಕ್ ಕಾಟದಿಂದಾಗಿ ಈ ಹಿಂದೆ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ (Permanent Husband) ಇರಲಿಲ್ಲ. ತ್ರಿವಳಿ ತಲಾಕ್ ರದ್ದುಪಡಿಸುವ ಮೂಲಕ ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರವಾಗಿದೆ ಎಂದು ಹಿಂದು ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಹೇಳಿದರು.
ಮಂಡ್ಯ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಮುಸಲ್ಮಾನ ಹುಡುಗರು ಅಷ್ಟೇ ಅಲ್ಲ, ಮುಸ್ಲಿಂ ಮಹಿಳೆಯರೂ ಮತಾಂತರ ಮಾಡುತ್ತಿದ್ದಾರೆ. ನಿಮ್ಮ ಮುಸ್ಲಿಂ ಸಮಾಜದಲ್ಲಿ ಹುಡುಗಿಯರು ಇಲ್ಲವಾ? ಹಿಂದೂ ಹುಡುಗಿಯರನ್ನು ಯಾಕೆ ಟಾರ್ಗೆಟ್ ಮಾಡ್ತೀರಾ? ನಿಮಗೆ ತ್ರಿವಳಿ ತಲಾಖ್ ನೀಡುವ ಪದ್ಧತಿಯನ್ನು ತೆಗೆದು ಹಾಕಿದ್ದು ನರೇಂದ್ರ ಮೋದಿ ಅಲ್ಲವೇ ಎಂದು ಪ್ರಶ್ನಿಸಿದರು.
ನಿಮಗೆ ತಾಕತ್ ಇದ್ದರೆ ಹಿಜಾಬ್ ನಿಷೇಧ ವಾಪಸ್ ಪಡೆಯಿರಿ
ನಿಮಗೆ ತಾಕತ್ ಇದ್ದರೆ ಹಿಜಾಬ್ ನಿಷೇಧ ವಾಪಸ್ ಪಡೆಯಿರಿ. ಶಾಲೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಸಮವಸ್ತ್ರ ಜಾರಿ ಮಾಡಿದ್ದೇ ಏಕರೂಪತೆ ತರುವ ಉದ್ದೇಶದಿಂದಾಗಿದೆ. ಸಿಎಂ ಸಿದ್ದರಾಮಯ್ಯ ಅವರೇ, ಮಕ್ಕಳಲ್ಲಿ ಯಾಕೆ ತಾರತಮ್ಯ ಹುಟ್ಟು ಹಾಕುತ್ತೀರಿ? ಅಲ್ಪಸಂಖ್ಯಾತರ ಅಭಿವೃದ್ಧಿಗೆ 10,000 ಕೋಟಿ ರೂ. ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಯಾರಪ್ಪನ ಮನೆಯ ದುಡ್ಡು ಕೊಡುತ್ತೀರಿ? ತೆರಿಗೆ ಕಟ್ಟುವವರು ಹಿಂದುಗಳು. ನಮ್ಮ ಹಣ ಅಲ್ಪಸಂಖ್ಯಾತರಿಗೆ ಕೊಡುತ್ತೀರಾ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಪ್ರಶ್ನಿಸಿದರು.
ಮುಸ್ಕಾನ್ ಅಂತ ಒಬ್ಬ ಹೆಣ್ಣು ಮಗಳು ಈ ಮಂಡ್ಯ ಜಿಲ್ಲೆಯಲ್ಲಿ ಇದ್ದಾಳೆ. ಅವಳು ಅಲ್ಲಾ ಹು ಅಕ್ಬರ್ ಅಂತ ಕೂಗಿದ್ದಳು. ಅಲ್ಲಾ ಅಂತ ನಿನ್ನ ಮನೆಯಲ್ಲಿ ಕೂಗು, ಮಸೀದಿಯಲ್ಲಿ ಕೂಗು. ಭಾರತದಲ್ಲಿ ರಾಮ್ ರಾಮ್ ಅಂತ ಮಾತ್ರ ಹೇಳಬೇಕು. ಅಲ್ ಖೈದಾ ಸಂಘಟನೆಯ ಜತೆ ನಂಟು ಇರುವ ಹೆಣ್ಣು ಮಗಳು ಈ ದೇಶದಲ್ಲಿ ಇದ್ದಾಳೆ. ತಾಕತ್ತಿದ್ದರೆ ಬುರ್ಖಾ ಧರಿಸಿ ಶಾಲೆಯ ಒಳಗೆ ಹೋಗಲಿ. ನಮ್ಮ ತಾಳ್ಮೆ ದೌರ್ಬಲ್ಯ ಎಂದು ತಿಳಿಯಬೇಡಿ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಗುಡುಗಿದರು.
ಶಾಲೆಯೊಳಗೆ ಜೈ ಶ್ರೀರಾಮ್ ಕೂಗುತ್ತೇವೆ. ಹಿಜಾಬ್ ನಿಷೇಧ ವಾಪಸ್ ತೆಗೆಯುತ್ತಾರಂತೆ. ಅವರು ಹಿಜಾಬ್ ಹಾಕಿಕೊಂಡು ಬರಲಿ. ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ. ಕೇಸರಿ ಟೋಪಿ ಹಾಕಿಕೊಂಡು ಬರುತ್ತೇವೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದರು.
ಇದನ್ನೂ ಓದಿ: BS Yediyurappa: ಬಿಜೆಪಿ ಹೊಸ ಟೀಮ್ನಲ್ಲಿ ಕೆಲಸ ಮಾಡುವವರಿಗೆ ಆದ್ಯತೆ ಕೊಡಲಾಗಿದೆ: ಯಡಿಯೂರಪ್ಪ
ಕಾಂಗ್ರೆಸ್ ನಾಯಕರ ವೈಫಲ್ಯತೆಯಿಂದ ದೇಶ ವಿಭಜನೆ ಆಯಿತು
ರಾಮ ಸರ್ವ ಶ್ರೇಷ್ಠ ರಾಜ. ರಾಮನ ಆದರ್ಶಗಳು ನಮಗೆ ಮೇಲ್ಪಂಕ್ತಿ ಆಗಬೇಕು. ಸಾವಿರಾರು ವರ್ಷಗಳಿಂದ ಭಾರತ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ. ಭಾರತದ ಅಸ್ತಿತ್ವಕ್ಕೆ ಯಾವಾಗಲೂ ಧಕ್ಕೆ ಬಂದಿಲ್ಲ. ಅಲೆಕ್ಸಾಂಡರ್ ದಿ ಗ್ರೇಟ್ ಅವರ ದೇಶಕ್ಕೆ ಮಾತ್ರ. ಅಲೆಕ್ಸಾಂಡರ್ ನಮ್ಮ ಒಬ್ಬ ರಾಜನನ್ನು ಸೋಲಿಸಲು ಸಾಧ್ಯವಾಗದೆ ಓಡಿ ಹೋಗಿ ಸತ್ತ. ಕ್ರೈಸ್ತ, ಇಸ್ಲಾಂ ಆಳ್ವಿಕೆಯ ಕಾಲದಲ್ಲಿ ಧರ್ಮ ವಿಸ್ತರಣೆಯೇ ಉದ್ದೇಶವಾಗಿತ್ತು. ನಮ್ಮ ಸ್ವಾರ್ಥಕ್ಕಾಗಿ ಸತ್ಯ- ಅಸತ್ಯ, ಮಾನ- ಅಪಮಾನ ಗೊತ್ತಾಗಲಿಲ್ಲ. ಕಾಂಗ್ರೆಸ್ ನಾಯಕರ ವೈಫಲ್ಯತೆಯಿಂದ ದೇಶ ವಿಭಜನೆ ಆಯಿತು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆಕ್ರೋಶ ವ್ಯಕ್ತಪಡಿಸಿದರು.