Site icon Vistara News

MLA Suresh Gowda | ಕೈ ಕಾರ್ಯಕರ್ತನಿಗೆ ನಾಗಮಂಗಲ ಶಾಸಕ ಆವಾಜ್‌; ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೊ ವೈರಲ್‌

MLA Suresh Gowda

ಮಂಡ್ಯ: ಸಾಲದ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತನಿಗೆ ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್ ಗೌಡ ಆವಾಜ್ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೊ ವೈರಲ್‌ ಆಗಿದೆ.

ಸಮಾಜ ಸೇವಕ ಫೈಟರ್ ರವಿ ಎಂಬವರು ಕಳೆದ ಕೆಲವು ದಿನಗಳಿಂದ ನಾಗಮಂಗಲ ಕ್ಷೇತ್ರದಲ್ಲಿ ಓಡಾಡುತ್ತಾ, ಶಾಸಕ ಸುರೇಶ್ ಗೌಡ ನನಗೆ ಸಾಲ ಕೊಡಬೇಕು. ಕಳೆದ ಚುನಾವಣೆಯಲ್ಲಿ ಅವರಿಗೆ ಸಾಲ ನೀಡಿದ್ದೀನಿ ಎಂದು ಹೇಳಿಕೊಳ್ಳುತ್ತಿರುವುದು ಕಂಡುಬಂದಿದೆ. ಇದೇ ವಿಚಾರವನ್ನು ಕಾಂಗ್ರೆಸ್‌ ಕಾರ್ಯಕರ್ತ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಇದರಿಂದ ಶಾಸಕ ಸುರೇಶ್ ಗೌಡ ಕೆಂಡಾಮಂಡಲವಾಗಿ, ಕಾರ್ಯಕರ್ತನಿಗೆ ಫೋನ್‌ ಮಾಡಿ ಅವಾಚ್ಯ ಶಬ್ದಗಳಿಂದ ನಿದ್ದಿಸಿದ್ದಾರೆ.

ಇದನ್ನೂ ಓದಿ | Karnataka Election | ಮತದಾರರ ಸೆಳೆಯಲು ಅಭ್ಯರ್ಥಿಗಳ ಕಸರತ್ತು; ಭರಪೂರ ಉಡುಗೊರೆಗೆ ಈಗಿಂದಲೇ ಒತ್ತು!

ಕೈ ಕಾರ್ಯಕರ್ತ ಹಾಗೂ ಸಾಲ ಕೊಟ್ಟಿದ್ದೀನಿ ಎಂದು ಹೇಳಿ ಕೊಳ್ಳುತ್ತಿರುವ ಫೈಟರ್ ರವಿ ಬಗ್ಗೆಯೂ ಶಾಸಕ ಅವಾಚ್ಯ ಶಬ್ದ ಬಳಸಿ ನಿಂದಿಸಿದ ಆಡಿಯೊ ವೈರಲ್ ಆಗಿದೆ. ಕೈ ಕಾರ್ಯಕರ್ತನಿಗೆ ಬೋ ಮಗನೇ, ಸೂ ಮಗನೆ ಎಂದು ಆವಾಜ್ ಹಾಕಿ, ಸಾಮಾಜಿಕ ಜಾಲತಾಣದಿಂದ ಸಾಲದ ಕುರಿತ ಪೋಸ್ಟ್‌ ತೆಗೆಯುವಂತೆ ಶಾಸಕ ಒತ್ತಾಯ ಮಾಡಿರುವುದು ಆಡಿಯೊದಲ್ಲಿದೆ.

https://vistaranews.com/wp-content/uploads/2022/11/Mandya-mla.mp3

ಶಾಸಕ ಸುರೇಶ್ ಗೌಡ ಬೆಂಬಲಿಗರಿಗೆ ಫೈಟರ್‌ ರವಿ ತರಾಟೆ

ಮಂಡ್ಯ: ಮೂಲ ಸೌಕರ್ಯ ಕಲ್ಪಿಸುವ ವಿಚಾರವಾಗಿ ಸರ್ಕಾರಿ ಶಾಲೆಗೆ ಆಗಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ ಕಾರ್ಯಕರ್ತರಿಗೆ ಸಮಾಜ ಸೇವಕ ಫೈಟರ್ ರವಿ ತರಾಟೆಗೆ ತೆಗೆದುಕೊಂಡಿರುವುದು ಜಿಲ್ಲೆಯ ನಾಗಮಂಗಲ ತಾಲೂಕಿನ ತಟ್ಟೇಕೆರೆ ಗ್ರಾಮದಲ್ಲಿ ನಡೆದಿದೆ.

ಕುಡಿಯುವ ನೀರಿನ ಘಟಕ ಸೇರಿ ವಿವಿಧ ಮೂಲಭೂತ ಸೌಲಭ್ಯ ನೀಡಲು ತಟ್ಟೇಕೆರೆ ಗ್ರಾಮದ ಸರ್ಕಾರಿ ಶಾಲೆಗೆ ಸಮಾಜ ಸೇವಕ ಫೈಟರ್ ರವಿ ಆಗಮಿಸಿದ್ದರು. ಈ ವೇಳೆ ಶಾಲಾ ಆವರಣಕ್ಕೆ ಬಂದ ಶಾಸಕ ಸುರೇಶ್ ಗೌಡ ಬೆಂಬಲಿಗರು, ನಮ್ಮ ಊರಿನ ಮಕ್ಕಳಿಗೆ ಸೌಲಭ್ಯ ಕೊಡಲು ನೀನು ಯಾರು? ಇಲ್ಲಿಗೆ ಯಾಕೆ ಬಂದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಫೈಟರ್ ರವಿ ಆಕ್ರೋಶಗೊಂಡು, ಶಾಸಕ ಸುರೇಶ್ ಗೌಡರ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಗ್ರಾಮದ ಕೆಲವು ಮುಖಂಡರು, ಕೂಡ ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಅಸಮಾಧಾನ ಹೊರಹಾಕಿರುವುದು ಕಂಡುಬಂದಿದೆ. ಇದಾದ ಬಳಿಕ ಸರ್ಕಾರಿ ಶಾಲೆಯ ಮಕ್ಕಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಬೋರ್‌ವೆಲ್ ತೆಗೆಸಲು ಗ್ರಾಮಸ್ಥರಿಗೆ ಫೈಟರ್‌ ರವಿ 50 ಸಾವಿರ ರೂಪಾಯಿ ನೆರವು ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Heart Attack | ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಸಭೆಯಲ್ಲಿದ್ದಾಗಲೇ ಮಾಜಿ ಶಾಸಕ ಬಿದರೂರುಗೆ ಹೃದಯಾಘಾತ, ನಿಧನ

Exit mobile version