Site icon Vistara News

Physical abuse : ಅಪ್ರಾಪ್ತೆ ಮೇಲೆ ದೌರ್ಜನ್ಯ ; ಅತ್ಯಾಚಾರ ಎಸಗಿ ವಿಡಿಯೊ ಮಾಡಿದ ಕಿರಾತಕರು!

gang rape in Mandya

ಮಂಡ್ಯ: ಅಪ್ರಾಪ್ತೆಯನ್ನು ಸಹಪಾಠಿಗಳೇ ಸೇರಿ ಸಾಮೂಹಿಕ ಅತ್ಯಾಚಾರ (Physical abuse) ಎಸಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. 17 ವರ್ಷದ ಬಾಲಕಿ ಮೇಲೆ ಮೂವರು ಕಾಮುಕರು ಅತ್ಯಾಚಾರ ನಡೆಸಿರುವ ಘಟನೆ ಮದ್ದೂರು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆತಂದು ಸಹಪಾಠಿಗಳೇ ಕೃತ್ಯ ಎಸಗಿದ್ದಾರೆ. ಕಿರಾತಕರು ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದು, ಅದು ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ಪೋಷಕರ ದೂರಿನ ಆಧಾರದ ಮೇಲೆ ಎ1 ಪುನೀತ್, ಎ2 ಮಂಜುನಾಥ್, ಎ3 ಸಿದ್ದರಾಜು ಎಂಬುವವರನ್ನು ಬಂಧಿಸಲಾಗಿದೆ. ಮೂವರು ಕೂಡ ಮದ್ದೂರು ತಾಲೂಕಿನವರು ಎಂದು ತಿಳಿದು ಬಂದಿದೆ.

ಯುವ ದಸರಾದಲ್ಲಿ ಪರಿಚಯ

ಪುನೀತ್‌ ಎಂಬಾತ ಮೈಸೂರಿನ ಯುವ ದಸರಾದಲ್ಲಿ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡಿದ್ದ. ಪರಿಚಯದ ಬಳಿಕ ಪ್ರೀತಿ ಮಾಡುವುದಾಗಿ ನಂಬಿಸಿ, ಸಲುಗೆಯನ್ನು ಬೆಳೆಸಿಕೊಂಡಿದ್ದ. ಈ ನಡುವೆ ನವೆಂಬರ್ 4 ರಂದು ಮದ್ದೂರಿನ ಲಾಡ್ಜ್ ಕರೆದುಕೊಂಡು ಹೋಗಿದ್ದ ಕಾಮುಕ, ತನ್ನ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದ.

ವಿಡಿಯೊ ಕಳುಹಿಸಿ ಬ್ಲ್ಯಾಕ್‌ ಮೇಲ್‌

ಅತ್ಯಾಚಾರದ ವಿಡಿಯೊ ಮಾಡಿಕೊಂಡ ಕಿರಾತಕರು ಆನಂತರ ಅಪ್ರಾಪ್ತೆ ಮೊಬೈಲ್‌ಗೆ ಕಳುಹಿಸಿ ಕರೆದಾಗ ಬರಬೇಕೆಂದು ಬೆದರಿಕೆ ಹಾಕಿದ್ದಾರೆ. ಇವರ ಕಿರುಕುಳದಿಂದ ಕಂಗಲಾದ ಅಪ್ರಾಪ್ತೆ ನಡೆದಿದ್ದನ್ನು ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಅಪ್ರಾಪ್ತೆ ಪೋಷಕರಿಂದ ದೂರು ದಾಖಲಾದ ಬೆನ್ನಲ್ಲೇ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಮದ್ದೂರು ಪಟ್ಟಣ ಠಾಣೆಯಲ್ಲಿ ಅತ್ಯಾಚಾರ, ಪೋಕ್ಸೊ, ಆಟ್ರಾಸಿಟಿ ಸೆಕ್ಷನ್ ಅಡಿ‌ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Viral Video: ಅರೆಬರೆ ಬಟ್ಟೆಯಲ್ಲೇ ರೈಲಿನಲ್ಲಿ ಡ್ಯಾನ್ಸ್‌ ಮಾಡಿದ ಯುವತಿ; ಛೀಮಾರಿ ಹಾಕಿದ ಜನ

ಅರ್ಚಕರು, ಸಂತರು ಅತ್ಯಾಚಾರಿಗಳು ಎಂದ ಕಾಂಗ್ರೆಸ್‌ ಶಾಸಕ ಅಫ್ತಾಬುದ್ದೀನ್‌ ಮುಲ್ಲಾ ಬಂಧನ

ಡಿಸ್ಪುರ: ಅರ್ಚಕರು, ಸಂತರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಅಸ್ಸಾಂ ಕಾಂಗ್ರೆಸ್‌ ಶಾಸಕ ಅಫ್ತಾಬುದ್ದೀನ್‌ ಮುಲ್ಲಾ (Aftabuddin Mollah) ಅವರನ್ನು ಅಸ್ಸಾಂ ಪೊಲೀಸರು (Assam Police) ಬಂಧಿಸಿದ್ದಾರೆ. “ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಜಾಲೇಶ್ವರ್‌ ವಿಧಾನಸಭೆ ಕ್ಷೇತ್ರದ ಶಾಸಕ ಅಫ್ತಾಬುದ್ದೀನ್‌ ಮುಲ್ಲಾ ಅವರನ್ನು ಬಂಧಿಸಲಾಗಿದೆ” ಎಂದು ಅಸ್ಸಾಂ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಫ್ತಾಬುದ್ದೀನ್‌ ಮುಲ್ಲಾ ಅವರು ನವೆಂಬರ್‌ 4ರಂದು ಗೋವಾಲ್‌ಪರ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಸಾಧುಗಳು, ಸಂತರು ಹಾಗೂ ಅರ್ಚಕರ ವಿರುದ್ಧ ಮಾತನಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಡಿಸ್ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ (IPC) 295 (ಎ), 153 ಎ (1) ಸೇರಿ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಿಸಲಾಗಿತ್ತು. ಈಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಅಫ್ತಾಬುದ್ದೀನ್‌ ಮುಲ್ಲಾ ಹೇಳಿದ್ದೇನು?

ಗೋವಾಲ್‌ಪರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಅಫ್ತಾಬುದ್ದೀನ್‌ ಮುಲ್ಲಾ ಅವರು ಹಿಂದು-ಮುಸ್ಲಿಮರು, ಅತ್ಯಾಚಾರ ಪ್ರಕರಣಗಳು ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದ್ದರು. “ಎಲ್ಲಿಯೇ ಅತ್ಯಾಚಾರ ನಡೆದರೂ, ಆ ಅತ್ಯಾಚಾರವನ್ನು ಸಾಧು, ಅರ್ಚಕರು ಅಥವಾ ನಾಮ್‌ಘೋರಿಯಾಗಳೇ (ವೈಷ್ಣವ ಪ್ರಾರ್ಥನಾ ಮಂದಿರಗಳ ಅರ್ಚಕರು) ಇರುತ್ತಾರೆ. ಹಿಂದು ಅರ್ಚಕರು ಮಾಡಿದ ಪಾಪಗಳನ್ನು ಮರೆಮಾಚಲು ಮುಸ್ಲಿಮರ ಮೇಲೆ ಆರೋಪ ಹೊರಿಸುತ್ತಾರೆ” ಎಂದು ಅಫ್ತಾಬುದ್ದೀನ್‌ ಮುಲ್ಲಾ ಹೇಳಿದ್ದರು.

ಇದನ್ನೂ ಓದಿ: Exam Cheating : ಆರ್‌.ಡಿ. ಪಾಟೀಲ್‌ ಪರಾರಿ: ಸರ್ಕಾರದ ವಿರುದ್ಧ ತಿರುಗಿಬಿದ್ದ ಬಿಜೆಪಿ; ಅರೆಸ್ಟ್‌ ಮಾಡ್ತೇವೆ ಎಂದ ಕಾಂಗ್ರೆಸ್‌

ಹಿಂದು ದೇವಾಲಯಗಳ ಅರ್ಚಕರು, ಸಂತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಅಫ್ತಾಬ್‌ ವಿರುದ್ಧ ಗುವಾಹಟಿಯ ದೀಪಕ್‌ ಕುಮಾರ್‌ ದಾಸ್‌ ಎಂಬುವರು ಕೇಸ್‌ ದಾಖಲಿಸಿದ್ದರು. “ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ಅಫ್ತಾಬುದ್ದೀನ್‌ ಮುಲ್ಲಾ ನೀಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದರು. ಅಲ್ಲದೆ, ಅಫ್ತಾಬುದ್ದೀನ್‌ ಮುಲ್ಲಾ ಹೇಳಿಕೆಗಳನ್ನು ಬಿಜೆಪಿ ನಾಯಕರು ಕೂಡ ಖಂಡಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version