Site icon Vistara News

Protection of leopard : ಮಂಡ್ಯದಲ್ಲಿ ಬಂಡೆಯಡಿ ಸಿಲುಕಿದ್ದ 2 ಚಿರತೆ ಮರಿಗಳ ರಕ್ಷಣೆ, 6 ಮರಿಗಳು ನಾಪತ್ತೆ

leopard

ಮಂಡ್ಯ: ಮಂಡ್ಯದಲ್ಲಿ ಬಂಡೆಯಡಿ ಸಿಲುಕಿದ್ದ ಎರಡು ಚಿರತೆ ಮರಿಗಳನ್ನು ರಕ್ಷಿಸಲಾಗಿದೆ. (Protection of leopard)
ಜಿಲ್ಲೆಯ ಮದ್ದೂರು ಕೂಳಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನಿನಲ್ಲಿದ್ದ ಬಂಡೆಯ ಕೆಳಗೆ 8 ಚಿರತೆ ಮರಿಗಳು ಪತ್ತೆಯಾಗಿತ್ತು.

ಬಂಡೆಯಡಿ ಸಿಲುಕಿದ್ದ 2 ಚಿರತೆ ಮರಿಗಳ ರಕ್ಷಣೆ ಮಾಡಿದ ಯುವಕರು. ಉಳಿದ 6 ಮರಿಗಳು ರಕ್ಷಣೆ ಮಾಡುವ ವೇಳೆ ನಾಪತ್ತೆಯಾಗಿವೆ. ಕೂಳಗೆರೆ ಗ್ರಾಮದ ಶಿವಮೂರ್ತಿ,ಕೀರ್ತಿಕುಮಾರ್ ತಂಡದಿಂದ ರಕ್ಷಣಾ ಕಾರ್ಯ ನಡೆಯಿತು.
ರಕ್ಷಣೆ ಮಾಡಿದ ಚಿರತೆ ಮರಿಗಳನ್ನು ಯುವಕರು ಮನೆಗೆ ತಂದಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ‌ ಮರಿಗಳನ್ನು ವಶಕ್ಕೆ ಪಡೆದರು. ಮರಿಗಳು ಸಿಕ್ಕ ಸ್ಥಳದಲ್ಲಿ ಚಿರತೆ ಸೆರೆಗೆ ಬೋನ್ ಅಳವಡಿಸಲಾಗಿದೆ.

ಮಂಡ್ಯದಲ್ಲಿ ಬಂಡೆಯಡಿ ಸಿಲುಕಿದ್ದ ಚಿರತೆ ಮರಿಗಳ ಸಂರಕ್ಷಣೆ ಸಂದರ್ಭ.

ಮಂಡ್ಯ ಜಿಲ್ಲೆಯ ದೊಡ್ಡ ಹೊಸಗಾವಿ ಗ್ರಾಮದಲ್ಲಿ ರೈತ ನಾಗೇಂದ್ರ ಅವರ ಕಬ್ಬಿನ ಗದ್ದೆಯಲ್ಲಿ ಬೋನಿಗೆ ಚಿರತೆಯೊಂದು ಸಿಕ್ಕಿ ಬಿದ್ದಿದೆ.
ಹಲವು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಬೋನಿಗೆ ಸಿಕ್ಕಿ ಬಿದ್ದಿದೆ.
ಮೇಕೆ,ನಾಯಿ, ಮೇಲೆ ದಾಳಿ ನಡೆಸಿದ್ದ ಚಿರತೆಯ ಸೆರೆಯಿಂದ ಗ್ರಾಮಸ್ಥರು ನಿರಾಳರಾಗಿದ್ದಾರೆ.
ಸೂಕ್ತ ಅರಣ್ಯ ಪ್ರದೇಶಕ್ಕೆ ಚಿರತೆ ಬಿಡುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Exit mobile version