ಬೆಂಗಳೂರು: ಹಳೆ ಮೈಸೂರಿನಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯ ಶಾಸಕರನ್ನು ಹೊಂದಬೇಕು ಎಂದು ಬಿಜೆಪಿ ಸರ್ಕಾರ ತಂತ್ರ ರೂಪಿಸಿದ್ದು, ಮಂಡ್ಯ ಜಿಲ್ಲಾ ಉಸ್ತುವಾರಿಯಾಗಿ ಕಂದಾಯ ಸಚಿವ ಆರ್. ಅಶೋಕ್ (R. Ashok) ಅವರನ್ನು ನೇಮಕ ಮಾಡಲಾಗಿದೆ.
ಹಾಲಿ ಮಂಡ್ಯ ಜಿಲ್ಲಾ ಉಸ್ತುವಾರಿಯಾಗಿ ಕೆ. ಗೋಪಾಲಯ್ಯ ಅವರಿದ್ದು, ಹಾಸನದ ಉಸ್ತುವಾರಿಯೂ ಅವರೇ ಆಗಿದ್ದಾರೆ. ಮಂಡ್ಯ ಜಿಲ್ಲೆಯು ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರವಾಗಿದ್ದು, ಒಕ್ಕಲಿಗ ಸಮುದಾಯದ ಪ್ರಮುಖ ಮುಖಖಡರಾದ ಆರ್. ಅಶೊಕ್ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ. ಎರಡೇ ದಿನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರವೂ ಇದ್ದು, ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆರ್. ಅಶೋಕ್ ಅವರೇ ಧ್ವಜಾರೋಹಣ ಮಾಡುವ ಅವಕಾಶ ಪಡೆದಿದ್ದಾರೆ.
ಆಂಧ್ರಪ್ರದೇಶದ ಕಂದಾಯ ಸಚಿವರ ನಿಯೋಗದ ಭೇಟಿ
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಜಮೀನುಗಳ ಮಂಜೂರಾತಿ ನಿಯಮ, ನಿಬಂಧನೆಗಳ ಅಧ್ಯಯನಕ್ಕೆ ಕಂದಾಯ ಸಚಿವ ಆರ್. ಅಶೋಕ ಅವರನ್ನು ಆಂಧ್ರಪ್ರದೇಶದ ಕಂದಾಯ ಸಚಿವರ ನೇತೃತ್ವದ ಸಚಿವರು ಹಾಗೂ ಉನ್ನತ ಅಧಿಕಾರಿಗಳ ನಿಯೋಗವು ವಿಧಾನಸೌಧದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು.
ಈ ಸಂದರ್ಭದಲ್ಲಿ ಸಚಿವ ಆರ್. ಅಶೋಕ ಅವರು ರಾಜ್ಯ ಕಂದಾಯ ಇಲಾಖೆ ತೆಗೆದುಕೊಂಡ ಮಹತ್ವದ ತೀರ್ಮಾನಗಳಾದ ಪಿಂಚಣಿ ವ್ಯವಸ್ಥೆ, ಭೂ ಪರಿವರ್ತನೆ ಸಮಯಾವಧಿ ಇಳಿಕೆ, ಕಾಫೀ ಶುಂಠಿ ಬೆಳೆಗಾರರಿಗೆ ಜಮೀನನ್ನು 30 ವರ್ಷದ ಅವಧಿಗೆ ಲೀಸ್ ನೀಡುವುದು, ಕಂದಾಯ ದಾಖಲೆಗಳನ್ನು ಉಚಿತವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುವುದು ಮುಂತಾದವುಗಳ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ ಮೊಗಸಾಲೆ ಅಂಕಣ | ಒಂಬತ್ತು ರಾಜ್ಯದಲ್ಲಿ ಚುನಾವಣೆ: ಸಿಕ್ಕೀತೆ ಮೋದಿ ಮಾತಿಗೆ ಮನ್ನಣೆ?
ಆಂಧ್ರಪ್ರದೇಶ ಸರ್ಕಾರದ ಕಂದಾಯ ಸಚಿವ ಧರ್ಮನಾ ಪ್ರಸಾದ್ ರಾವ್, ನಗರಾಭಿವೃದ್ಧಿ ಮತ್ತು ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಸಚಿವ ಡಾ. ಆದಿಮುಲುಪು ಸುರೇಶ್, ಸೋಶಿಯಲ್ ವೆಲ್ ಪೇರ್ ಖಾತೆ ಸಚಿವ ಮುರುಗ ನಾಗಾರ್ಜುನ, ಶಾಸಕಿ ಎಲ್ ಪದ್ಮಾವತಿ ಹಾಗೂ ಉನ್ನತ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯರಾಂ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.